Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Cancer Facts ಗ್ಯಾಸ್ ಉರಿ ಮೇಲೆ ಚಪಾತಿ ಸುಟ್ಟರೆ ಕ್ಯಾನ್ಸರ್ ಬರುತ್ತಾ? ಇಲ್ಲಿದೆ ನೋಡಿ ಅಸಲಿ ಸತ್ಯ
ಪ್ರಮುಖಆರೋಗ್ಯಲೈಫ್‌ಸ್ಟೈಲ್

Cancer Facts ಗ್ಯಾಸ್ ಉರಿ ಮೇಲೆ ಚಪಾತಿ ಸುಟ್ಟರೆ ಕ್ಯಾನ್ಸರ್ ಬರುತ್ತಾ? ಇಲ್ಲಿದೆ ನೋಡಿ ಅಸಲಿ ಸತ್ಯ

Share
2 Min Read
SHARE

newsics.com | ನ್ಯೂಸಿಕ್ಸ್

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇದರ ಬೆನ್ನಲ್ಲೇ, ಗ್ಯಾಸ್ ಸ್ಟವ್‌ನ ಮೇಲೆ ನೇರವಾಗಿ ಚಪಾತಿ ಸುಡುವುದರಿಂದ ಮತ್ತು ಬ್ರೆಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ಭಯದ ಹಿಂದಿರುವ ಅಸಲಿ ಸತ್ಯವೇನು ಎಂಬುದನ್ನು ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ಜಯೇಶ್ ಶರ್ಮಾ ಅವರು ವೈಜ್ಞಾನಿಕವಾಗಿ ವಿವರಿಸಿದ್ದಾರೆ.

ಗ್ಯಾಸ್ ಉರಿಯ ಮೇಲೆ ನೇರವಾಗಿ ಚಪಾತಿ ಬೇಯಿಸುವುದರಿಂದ ಅನಿಲದಲ್ಲಿರುವ ಅಪಾಯಕಾರಿ ರಾಸಾಯನಿಕಗಳು ಚಪಾತಿಯೊಳಗೆ ಸೇರಿಕೊಳ್ಳುತ್ತವೆ ಎಂಬುದು ಜನರ ಸಾಮಾನ್ಯ ನಂಬಿಕೆ. ಆದರೆ ವೈದ್ಯರ ಪ್ರಕಾರ ಇದು ಕೇವಲ ಭ್ರಮೆ. ಗ್ಯಾಸ್ ಉರಿಯುವಾಗ ಅದರ ಪ್ರಕ್ರಿಯೆಯಲ್ಲಿ ರಾಸಾಯನಿಕಗಳು ಸಂಪೂರ್ಣವಾಗಿ ಸುಟ್ಟು ಹೋಗುತ್ತವೆ. ಒಂದು ವೇಳೆ ಗ್ಯಾಸ್ ಚಪಾತಿಯೊಳಗೆ ಸೇರುತ್ತಿದ್ದರೆ ನಮಗೆ ಗ್ಯಾಸ್ ವಾಸನೆ ಬರಬೇಕಿತ್ತು. ಆದರೆ ಅಂತಹ ಯಾವುದೇ ವಾಸನೆ ಬರುವುದಿಲ್ಲ. ಚಪಾತಿಯನ್ನು ಅತಿಯಾಗಿ ಸುಟ್ಟು ಕಪ್ಪು ಕಲೆಗಳು (Charred spots) ಬೀಳುವಂತೆ ಮಾಡಬಾರದು. ಹೀಗೆ ಮಾಡುವುದರಿಂದ ಅದರಲ್ಲಿ ‘ಅಕ್ರಿಲಮೈಡ್’ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಮಂದ ಉರಿಯಲ್ಲಿ ಹಗುರವಾಗಿ ಬೇಯಿಸುವುದು ಸೂಕ್ತ.

ಬ್ರೆಡ್ ತಿಂದರೆ ಕ್ಯಾನ್ಸರ್ ಬರುತ್ತದೆಯೇ?

ಬ್ರೆಡ್ ತಯಾರಿಸುವಾಗ ಉಂಟಾಗುವ ಬಿಸಿಯಿಂದಾಗಿ ಅದರಲ್ಲಿ ‘ಅಕ್ರಿಲಮೈಡ್’ (Acrylamide) ಎಂಬ ಅಂಶ ಸೃಷ್ಟಿಯಾಗುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಕೆಲವರು ವಾದಿಸುತ್ತಾರೆ.

ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಿಲಮೈಡ್ ನೀಡಿದಾಗ ಕ್ಯಾನ್ಸರ್ ದೃಢಪಟ್ಟಿತ್ತು. ಆದರೆ, ಮನುಷ್ಯರು ಬ್ರೆಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವಾಸ್ತವವಾಗಿ, ಬ್ರೆಡ್‌ಗಿಂತ ನಾವು ದಿನನಿತ್ಯ ತಿನ್ನುವ ಸಮೋಸಾ, ಕಚೋರಿ ಹಾಗೂ ಫ್ರೆಂಚ್ ಫ್ರೈಸ್‌ಗಳಂತಹ ಕರಿದ ತಿಂಡಿಗಳಲ್ಲಿ ಅಕ್ರಿಲಮೈಡ್ ಪ್ರಮಾಣ ಹೆಚ್ಚಿರುತ್ತದೆ. ಆದರೆ ಬ್ರೆಡ್‌ನಲ್ಲಿ ಮೈದಾ ಇರುವುದರಿಂದ ಸಕ್ಕರೆ ಮಟ್ಟ ಹೆಚ್ಚಾಗಬಹುದು ಹಾಗೂ ಬೊಜ್ಜು ಬರಬಹುದು. ಆದ್ದರಿಂದ ಮಿತವಾಗಿ ಬಳಸುವುದು ಒಳ್ಳೆಯದು.

ಅಲ್ಲದೆ, ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಬ್ರೌನ್ ಬ್ರೆಡ್‌ಗಳು ನಿಜವಾದ ಗೋಧಿ ಬ್ರೆಡ್‌ಗಳಲ್ಲ. ಸಾಮಾನ್ಯ ವೈಟ್ ಬ್ರೆಡ್‌ಗೆ ಕೃತಕ ಬಣ್ಣ ಸೇರಿಸಿ ಬ್ರೌನ್ ಬ್ರೆಡ್ ಎಂದು ಮಾರಾಟ ಮಾಡಲಾಗುತ್ತದೆ. ಹೀಗಾಗಿ, ಕೇವಲ ಬಣ್ಣ ನೋಡಿ ಖರೀದಿಸುವ ಬದಲು ಪ್ಯಾಕೆಟ್ ಮೇಲಿರುವ ಘಟಕಾಂಶಗಳನ್ನು ಗಮನಿಸಿ, ‘ಹೋಲ್ ವೀಟ್’ (Whole Wheat) ಅಥವಾ ‘ಮಲ್ಟಿಗ್ರೇನ್’ ಬ್ರೆಡ್‌ಗಳನ್ನು ಆಯ್ದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

Online Food Safety ಆನ್‌ಲೈನ್‌ನಲ್ಲಿ ಹಾಲು, ಮೊಟ್ಟೆ ತರಿಸ್ತೀರಾ? ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ FSSAI ನೋಟಿಸ್! ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ

 

TAGGED:#cancer #gas flame #Bread #news #newsics
Share This Article
Facebook Twitter Copy Link Print
Previous Article Health Tips ಟೀ-ಕಾಫಿಗೆ ಸಕ್ಕರೆ ಹಾಕೋ ಮುನ್ನ ಯೋಚಿಸಿ; ಕೇವಲ ಎರಡು ವಾರ ಸಿಹಿ ತ್ಯಜಿಸಿದರೆ ಬದಲಾಗುತ್ತೆ ನಿಮ್ಮ ಆರೋಗ್ಯ
Next Article Good News ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಹಣ ಬಿಡುಗಡೆ: ಮನೆ ಯಜಮಾನಿಯರ ಖಾತೆಗೆ ₹2,000 ಜಮೆ

Popular Posts

Hydrogen Train ನಾಳೆ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಚಾಲನೆ; ಏನಿದರ ವಿಶೇಷತೆ? ಇಲ್ಲಿದೆ ವಿವರ

1 Min Read

Good News ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಹಣ ಬಿಡುಗಡೆ: ಮನೆ ಯಜಮಾನಿಯರ ಖಾತೆಗೆ ₹2,000 ಜಮೆ

1 Min Read

Cancer Facts ಗ್ಯಾಸ್ ಉರಿ ಮೇಲೆ ಚಪಾತಿ ಸುಟ್ಟರೆ ಕ್ಯಾನ್ಸರ್ ಬರುತ್ತಾ? ಇಲ್ಲಿದೆ ನೋಡಿ ಅಸಲಿ ಸತ್ಯ

2 Min Read

Health Tips ಟೀ-ಕಾಫಿಗೆ ಸಕ್ಕರೆ ಹಾಕೋ ಮುನ್ನ ಯೋಚಿಸಿ; ಕೇವಲ ಎರಡು ವಾರ ಸಿಹಿ ತ್ಯಜಿಸಿದರೆ ಬದಲಾಗುತ್ತೆ ನಿಮ್ಮ ಆರೋಗ್ಯ

2 Min Read

You Might Also Like

ಪ್ರಮುಖದೇಶ

ISRO ಇಸ್ರೋ ವಿಜ್ಞಾನಿಗಳ ರಾಜೀನಾಮೆಗೆ ಕೇಂದ್ರದ ಕಠಿಣ ಬ್ರೇಕ್; ಹೊಸ ನಿಯಮ ಜಾರಿ

1 Min Read
ಪ್ರಮುಖವಿದೇಶವೈರಲ್

Viral News ‘ನಾವು ಡೊನಾಲ್ಡ್ ಟ್ರಂಪ್‌ನನ್ನು ಕೊಲ್ಲುತ್ತೇವೆ’: ಇರಾನ್‌ನಲ್ಲಿ ಟ್ರಂಪ್‌ ಶವಪೆಟ್ಟಿಗೆಯ ಪೋಸ್ಟರ್ ಪ್ರತ್ಯಕ್ಷ

1 Min Read
ಪ್ರಮುಖದೇಶ

Puri Jaganath ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು; 33 ಭಕ್ತರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖಕರ್ನಾಟಕ

Rain ರಾಜಧಾನಿಯಲ್ಲಿ ದಿಢೀರ್ ವರ್ಷಧಾರೆ; ಇಲ್ಲಿದೆ ಹವಾಮಾನ ಇಲಾಖೆಯ ಮುನ್ಸೂಚನೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?