newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯ ‘ಗೃಹಲಕ್ಷ್ಮಿ’ಯ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಯೋಜನೆಯ 31ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಸರ್ಕಾರವು ಬರೋಬ್ಬರಿ ₹2,400 ಕೋಟಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಆದೇಶ ಹೊರಡಿಸಿದೆ.
ರಾಜ್ಯದಲ್ಲಿನ ಒಟ್ಟು 1,24,48,000 ಕುಟುಂಬದ ಮಹಿಳಾ ಯಜಮಾನಿಯರಿಗೆ ಈ ಹಿಂದಿನ 30 ಕಂತುಗಳ ಮೂಲಕ ಈಗಾಗಲೇ ತಲಾ ₹60,000 ಹಣ ತಲುಪಿತ್ತು. ಈಗ ಬಿಡುಗಡೆಯಾಗಿರುವ ಹೊಸ ಕಂತಿನೊಂದಿಗೆ, ಈ ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೆ ಪ್ರತಿಯೊಬ್ಬ ಮಹಿಳೆಯೂ ಒಟ್ಟು ₹62,000 ಸಹಾಯಧನ ಪಡೆದಂತಾಗಿದೆ.
ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗಿನಿಂದ ಇಂದಿನವರೆಗೂ ರಾಜ್ಯ ಸರ್ಕಾರವು ಮಹಿಳೆಯರ ಖಾತೆಗೆ ಜಮೆ ಮಾಡಲು ಬರೋಬ್ಬರಿ ₹74,650 ಕೋಟಿ ಹಣವನ್ನು ವ್ಯಯಿಸಿದೆ.
ಈ ಯೋಜನೆಯಿಂದ ಬರುವ ಹಣವನ್ನು ಮಹಿಳೆಯರು ತಮ್ಮ ದೈನಂದಿನ ಗೃಹೋಪಯೋಗಿ ವಸ್ತುಗಳ ಖರೀದಿ, ಮಕ್ಕಳ ಶೈಕ್ಷಣಿಕ ವೆಚ್ಚಗಳು, ಆರೋಗ್ಯದ ಆರೈಕೆ ಮತ್ತು ಪೌಷ್ಟಿಕ ಆಹಾರಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
ISRO ಇಸ್ರೋ ವಿಜ್ಞಾನಿಗಳ ರಾಜೀನಾಮೆಗೆ ಕೇಂದ್ರದ ಕಠಿಣ ಬ್ರೇಕ್; ಹೊಸ ನಿಯಮ ಜಾರಿ