newsics.com | ನ್ಯೂಸಿಕ್ಸ್
ನಾವು ಪ್ರತಿದಿನ ಬಳಸುವ ಸಕ್ಕರೆ ಕೇವಲ ಸಿಹಿಯಷ್ಟೇ ಅಲ್ಲ, ನಮ್ಮ ದೇಹದ ಪಾಲಿಗೆ ನಿಧಾನವಾಗಿ ಕೊಲ್ಲುವ ವಿಷ ಎಂದರೆ ತಪ್ಪಾಗಲಾರದು. ಚಹಾ, ಕಾಫಿ, ಬಿಸ್ಕತ್ತು ಹಾಗೂ ತಂಪು ಪಾನೀಯಗಳ ರೂಪದಲ್ಲಿ ನಮ್ಮ ಹೊಟ್ಟೆ ಸೇರುವ ಅತಿಯಾದ ಸಕ್ಕರೆ ಬೊಜ್ಜು, ಮಧುಮೇಹ ಮತ್ತು ಲಿವರ್ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಆದರೆ, ಕೇವಲ 14 ದಿನಗಳ ಕಾಲ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿದರೆ ನಮ್ಮ ದೇಹದಲ್ಲಿ ಏನೆಲ್ಲಾ ಅದ್ಭುತ ಬದಲಾವಣೆಗಳಾಗುತ್ತವೆ ಎಂಬುದನ್ನು ದೆಹಲಿಯ ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶುಭಮ್ ವತ್ಸ್ಯ ಅವರು ಸರಳವಾಗಿ ವಿವರಿಸಿದ್ದಾರೆ.
ತಲೆನೋವು, ವಿಪರೀತ ಆಯಾಸ, ಕೋಪ ಹಾಗೂ ಸಿಹಿ ತಿನ್ನಲೇಬೇಕು ಎನ್ನುವ ಹಂಬಲ (Craving) ನಿಮ್ಮನ್ನು ಕಾಡಬಹುದು. ಈ ಸಮಯದಲ್ಲಿ ದೇಹದಲ್ಲಿ ಶಕ್ತಿ ಕಡಿಮೆಯಾದಂತೆ ಅನಿಸಿದರೆ ಹೆದರಬೇಡಿ. ಆಹಾರದಲ್ಲಿ ಪ್ರೋಟೀನ್ ಮತ್ತು ನಾರಿನಾಂಶ (ಫೈಬರ್) ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿ. ದಾಹವಾದಾಗ ಹಣ್ಣಿನ ಜ್ಯೂಸ್ ಕುಡಿಯುವ ಬದಲು ತಾಜಾ ಹಣ್ಣುಗಳನ್ನು ಕಚ್ಚಿ ತಿನ್ನಿ ಹಾಗೂ ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ.
4 ಮತ್ತು 5ನೇ ದಿನದಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಹಾಗೂ ಇನ್ಸುಲಿನ್ ಮಟ್ಟ ನಿಯಂತ್ರಣಕ್ಕೆ ಬರಲಾರಂಭಿಸುತ್ತದೆ. ಇದರಿಂದ ಸಿಹಿ ತಿನ್ನಬೇಕು ಎನ್ನುವ ಹಂಬಲ ನಿಧಾನವಾಗಿ ಮಾಯವಾಗುತ್ತದೆ. ಆದರೆ ಎಚ್ಚರ, ಈ ದಿನಗಳಲ್ಲಿ ಮತ್ತೆ ಚಹಾ ಜೊತೆ ಬಿಸ್ಕತ್ತು ಅಥವಾ ಉಪ್ಪಿನ ತಿಂಡಿ ತಿಂದರೆ ಹಂಬಲ ಮತ್ತೆ ಮರುಕಳಿಸುತ್ತದೆ.
ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ನಿಮ್ಮ ದೇಹ ಹೊಸ ಹಂತಕ್ಕೆ ತಲುಪುತ್ತದೆ. ಈ ಸಮಯದಲ್ಲಿ ಮೆದುಳಿನಲ್ಲಿ ಡೋಪಮೈನ್ ಸಂಕೇತಗಳು ಸರಿಯಾಗಿ ಕೆಲಸ ಮಾಡಲು ಶುರು ಮಾಡುವುದರಿಂದ ಸಕ್ಕರೆಯ ನೆನಪೇ ಬರುವುದಿಲ್ಲ. ಈ 14 ದಿನಗಳಲ್ಲಿ ಚಹಾ, ಕಾಫಿ, ಬೇಕರಿ ತಿಂಡಿ, ಕೋಲ್ಡ್ ಡ್ರಿಂಕ್ಸ್ ಮತ್ತು ಪ್ಯಾಕ್ ಮಾಡಿದ ಸ್ನ್ಯಾಕ್ಸ್‌ನಿಂದ ಸಂಪೂರ್ಣ ದೂರವಿರಬೇಕು.
ಮಧ್ಯಾಹ್ನದ ಸಮಯದಲ್ಲಿ ಕಾಡುವ ಸುಸ್ತು ಇಲ್ಲವಾಗುತ್ತದೆ ಮತ್ತು ದಿನಪೂರ್ತಿ ಉತ್ಸಾಹ ನಿಮ್ಮದಾಗುತ್ತದೆ. ಮುಖದ ಊತ ಕಡಿಮೆಯಾಗಿ ಶೇಪ್ ಸಿಗುತ್ತದೆ. ಜೊತೆಗೆ ಹೊಟ್ಟೆ ಹಾಗೂ ಲಿವರ್‌ನಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬು ಕರಗುತ್ತದೆ. ಮುಖದ ಮೇಲಿನ ಮೊಡವೆಗಳು ಕಮ್ಮಿಯಾಗಿ, ಚರ್ಮ ಮೃದು ಹಾಗೂ ಹೊಳೆಯುವಂತಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ ಮತ್ತು ತಲೆಯಲ್ಲಿ ಉಂಟಾಗುವ ಗೊಂದಲಗಳು (ಬ್ರೈನ್ ಫಾಗ್) ನಿವಾರಣೆಯಾಗುತ್ತವೆ. ದೇಹದಲ್ಲಿ ಜಾಯಿಂಟ್ ಪೇನ್ (ಕೀಲು ನೋವು) ಹಾಗೂ ಹೊಟ್ಟೆ ಉಬ್ಬರಿಸುವ ಸಮಸ್ಯೆಗಳು ಶಮನಗೊಳ್ಳುತ್ತವೆ. ಹಾರ್ಮೋನ್‌ಗಳ ಏರುಪೇರು ಸರಿಯಾಗಿ, ರಾತ್ರಿ ಗಾಢವಾದ ನಿದ್ರೆ ಬರುತ್ತದೆ.
ISRO ಇಸ್ರೋ ವಿಜ್ಞಾನಿಗಳ ರಾಜೀನಾಮೆಗೆ ಕೇಂದ್ರದ ಕಠಿಣ ಬ್ರೇಕ್; ಹೊಸ ನಿಯಮ ಜಾರಿ