newsics.com
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಆರಾಮಾಗಿದ್ದಾರೆ. ದರ್ಶನ್ ಹೇಗಿದ್ದಾರೆ ಅನ್ನೋ ಫೋಟೋ, ವಿಡಿಯೋ ಬಿಡುಗಡೆಯಾಗಿದೆ.
ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ನಲ್ಲಿದ್ದಾರೆ. ಇದೇ ಬ್ಯಾರಕ್ನಲ್ಲಿರುವ ವ್ಯಕ್ತಿಗೆ ಅಭಿಮಾನಿಯೊಬ್ಬ ವಿಡಿಯೋ ಕಾಲ್ ಮಾಡಿದ್ದಾನೆ. ವಿಡಿಯೋ ಕಾಲ್ನಲ್ಲಿ ಚೆನ್ನಾಗಿದ್ದೀರಾ ಬಾಸ್ ಅಂತ ಅಭಿಮಾನಿ ಕೇಳಿದ್ದು, ಹೂ ಚಿನ್ನ ಎಂದು ದರ್ಶನ್ ಹೇಳಿದ್ದಾರೆ.
ಜೈಲಿನ ಬ್ಯಾರಕ್ನಲ್ಲಿರುವ ದರ್ಶನ್ ಅವರು ನೇರವಾಗಿ ಮೊಬೈಲ್ ಫೋನ್ ಬಳಕೆ ಮಾಡಿಲ್ಲ. ಆದರೆ ಜತೆಗಿರುವ ವ್ಯಕ್ತಿ ವೈಫೈ ಬಳಸಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಕಾಲ್ ಮಾಡಿರೋದು ಅಚ್ಚರಿಗೆ ಕಾರಣವಾಗಿದೆ.