Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > VASTU ಈ ಗಿಡಗಳನ್ನು ಯಾವತ್ತೂ ಗಿಫ್ಟ್ ಕೊಡಬೇಡಿ, ಇದರಿಂದ ಅಪಾಯವೇ ಹೆಚ್ಚು!
ಜ್ಯೋತಿಷ್ಯಪಂಚಾಂಗಪ್ರಮುಖ

VASTU ಈ ಗಿಡಗಳನ್ನು ಯಾವತ್ತೂ ಗಿಫ್ಟ್ ಕೊಡಬೇಡಿ, ಇದರಿಂದ ಅಪಾಯವೇ ಹೆಚ್ಚು!

Share
2 Min Read
SHARE

newsics.com/ನ್ಯೂಸಿಕ್ಸ್

ಸಭೆ-ಸಮಾರಂಭ, ಹುಟ್ಟುಹಬ್ಬ ಅಥವಾ ಗೃಹಪ್ರವೇಶದಂತಹ ಶುಭ ಸಂದರ್ಭಗಳಲ್ಲಿ ಸ್ನೇಹಿತರಿಗೆ ಮತ್ತು ಆಪ್ತರಿಗೆ ಸುಂದರವಾದ ಗಿಡಗಳನ್ನು ಉಡುಗೊರೆಯಾಗಿ (Green Gifting) ನೀಡುವುದು ಇತ್ತೀಚಿನ ಒಂದು ದೊಡ್ಡ ಟ್ರೆಂಡ್ ಆಗಿದೆ.

ಗಿಡಗಳನ್ನು ನೀಡುವುದು ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆದರೂ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳನ್ನು ಇತರರಿಗೆ ಗಿಫ್ಟ್ ಆಗಿ ನೀಡುವುದು ಅಥವಾ ಇತರರಿಂದ ಪಡೆದುಕೊಳ್ಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ.

ಇಂತಹ ಗಿಡಗಳು ಉಡುಗೊರೆ ನೀಡಿದವರ ಮತ್ತು ಪಡೆದವರ ಜೀವನದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು.

ಮುಳ್ಳು ಗಿಡಗಳು:
ಇತ್ತೀಚೆಗೆ ಸಣ್ಣ ಸಣ್ಣ ಕುಂಡಗಳಲ್ಲಿರುವ ಬಣ್ಣ ಬಣ್ಣದ ಕ್ಯಾಕ್ಟಸ್ (Cactus) ಗಿಡಗಳನ್ನು ಕಚೇರಿ ಮೇಜು ಅಥವಾ ಮನೆಯ ಅಲಂಕಾರಕ್ಕಾಗಿ ಗಿಫ್ಟ್ ಕೊಡುವುದು ಹೆಚ್ಚಾಗಿದೆ.

ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮುಳ್ಳುಗಳನ್ನು ಹೊಂದಿರುವ ಯಾವುದೇ ಗಿಡವನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು. ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಮತ್ತು ಸಂಘರ್ಷವನ್ನು ಪ್ರತಿನಿಧಿಸುತ್ತವೆ. ಇಂತಹ ಗಿಡಗಳನ್ನು ಗಿಫ್ಟ್ ನೀಡುವುದರಿಂದ ಆಪ್ತರೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಬಹುದು ಹಾಗೂ ಅವರ ಮನೆಯಲ್ಲಿ ಸದಾ ಜಗಳ, ಅಶಾಂತಿ ಮೂಡುವಂತೆ ಮಾಡಬಹುದು ಎಂದು ನಂಬಲಾಗಿದೆ.

ಬೋನ್ಸಾಯ್ ಗಿಡಗಳು (Bonsai Plants):
ದೊಡ್ಡದಾಗಿ ಬೆಳೆಯುವ ಮರಗಳನ್ನು ತಂತ್ರಜ್ಞಾನದ ಮೂಲಕ ಕುಬ್ಜವಾಗಿ (ಚಿಕ್ಕದಾಗಿ) ಬೆಳೆಸುವ ಬೋನ್ಸಾಯ್ ಗಿಡಗಳು ನೋಡಲು ಅತ್ಯಂತ ಆಕರ್ಷಕವಾಗಿರುತ್ತವೆ. ಈ ಕಾರಣಕ್ಕಾಗಿಯೇ ಇದನ್ನು ಪ್ರೀತಿಯಿಂದ ಗಿಫ್ಟ್ ಮಾಡಲು ಅನೇಕರು ಇಷ್ಟಪಡುತ್ತಾರೆ.

ವಾಸ್ತು ಪ್ರಕಾರ ಬೋನ್ಸಾಯ್ ಗಿಡಗಳನ್ನು ಮನೆಗೆ ತರುವುದು ಅಥವಾ ಇತರರಿಗೆ ಕೊಡುವುದು ಒಳ್ಳೆಯದಲ್ಲ. ಏಕೆಂದರೆ, ಬೋನ್ಸಾಯ್ ಗಿಡಗಳು ಬೆಳವಣಿಗೆಯನ್ನು ಕುಂಠಿತಗೊಳಿಸಿದ” ಸಂಕೇತವಾಗಿವೆ. ಇದನ್ನು ಉಡುಗೊರೆಯಾಗಿ ನೀಡುವುದರಿಂದ, ಪಡೆದುಕೊಂಡವರ ವೃತ್ತಿಜೀವನ, ವ್ಯಾಪಾರ ಅಥವಾ ಆರ್ಥಿಕ ಪ್ರಗತಿಯು ಕುಂಠಿತಗೊಳ್ಳಬಹುದು ಎಂಬ ನಂಬಿಕೆ ಇದೆ.

ಮದರಂಗಿ ಗಿಡ (Mehndi Plant):
ಮದರಂಗಿ ಅಥವಾ ಮೆಹಂದಿ ಎಲೆಗಳನ್ನು ಶುಭ ಸಮಾರಂಗಳಲ್ಲಿ ಕೈಗೆ ಹಚ್ಚಿಕೊಳ್ಳಲು ಬಳಸಲಾಗುತ್ತದೆಯಾದರೂ, ಅದರ ಗಿಡವನ್ನು ಉಡುಗೊರೆಯಾಗಿ ನೀಡುವುದನ್ನು ವಾಸ್ತು ಶಾಸ್ತ್ರವು ನಿಷೇಧಿಸಿದೆ.

ಆಧಾತ್ಮಿಕ ನಂಬಿಕೆಗಳ ಪ್ರಕಾರ, ಮೆಹಂದಿ ಗಿಡಗಳು ನಕಾರಾತ್ಮಕ ಶಕ್ತಿಗಳನ್ನು ಅಥವಾ ದುಷ್ಟ ಶಕ್ತಿಗಳನ್ನು ತನ್ನತ್ತ ಬೇಗನೆ ಆಕರ್ಷಿಸುವ ಗುಣವನ್ನು ಹೊಂದಿರುತ್ತವೆ. ಆದ್ದರಿಂದ, ಈ ಗಿಡವನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದರೆ ಅಥವಾ ಮನೆಯ ಮುಖ್ಯ ಆವರಣದಲ್ಲಿ ನೆಟ್ಟರೆ, ಅದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯು ಕ್ಷೀಣಿಸುವಂತೆ ಮಾಡುತ್ತದೆ ಎಂದು ನಂಬಲಾಗಿದೆ.

Vastu Tips: ನಿಮ್ಮ ಮನೆ ಬಾಗಿಲಿಗೆ ಇದನ್ನೆಲ್ಲಾ ನೇತು ಹಾಕ್ತೀರಾ? ಹಾಗಾದ್ರೆ ಇದು ಸಂಕಷ್ಟಕ್ಕೆ ಆಹ್ವಾನ!

Vastu Tips ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ವಸ್ತು ಇಟ್ರೆ ದರಿದ್ರ ವಕ್ಕರಿಸುತ್ತೆ

Vastu Shastra ಅಡುಗೆ ಮನೆಯಲ್ಲಿ ಈ 5 ವಸ್ತುಗಳನ್ನು ಇಡಲೇಬೇಡಿ

Bathroom Vastu Tips ಬಾತ್‌ರೂಂನಲ್ಲಿ ಇಟ್ಟಿರುವ ಈ ವಸ್ತು ನಿಮ್ಮ ಮನೆಗೆ ಬಡತನವನ್ನು ತರುತ್ತದೆ

TAGGED:they are very dangerous!VASTU: Never give these plants as gifts
Share This Article
Facebook Twitter Copy Link Print
Previous Article ಡಿಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ; ಮಂತ್ರಿಗಿರಿಗಾಗಿ ಲಾಬಿ ಜೋರು
Next Article ವೈರಲ್ ಆಯ್ತು ಬೆಂಗಳೂರು ಹುಡುಗಿಯ ‘RCB ಥೀಮ್’ ಸೀರೆ-ಬ್ಲೌಸ್ ಕ್ರೇಜ್!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?