newsics.com| ನ್ಯೂಸಿಕ್ಸ್
ಯಾವುದೇ ಒಂದು ವೈವಾಹಿಕ ಜೀವನ ಸುಖಕರವಾಗಿ ಸಾಗಬೇಕಾದರೆ ದಂಪತಿಗಳ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಅತ್ಯಂತ ಮುಖ್ಯ. ಆದರೆ, ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಹೊಂದಾಣಿಕೆಯ ಕೊರತೆ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಸ್ಯಾತಂತ್ರ್ಯದ ಕಾರಣಗಳಿಂದಾಗಿ ಅನೇಕ ಸಂಬಂಧಗಳು ಮುರಿದುಬೀಳ್ತಿವೆ.
ಇತ್ತೀಚೆಗೆ ಕಿರುತೆರೆ ನಟ ಗೌರವ್ ಖನ್ನಾ ಅವರಿಂದ ಡಿವೋರ್ಸ್ ಪಡೆದು ದೂರವಾಗಿರುವ ನಟಿ ಆಕಾಂಕ್ಷಾ ಚಮೋಲಾ ಅವರ ಇತ್ತೀಚಿನ ಹೇಳಿಕೆಗಳು ಈಗ ಭಾರೀ ವೈರಲ್ ಆಗಿವೆ.
ಹಿಂದಿಯ ರಿಯಾಲಿಟಿ ಶೋ ʻಲಾಕಪ್ ಸೀಸನ್ 2’ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಆಕಾಂಕ್ಷಾ ಚಮೋಲಾ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದಲ್ಲಾ ಒಂದು ಶಾಕಿಂಗ್ ವಿಚಾರಗಳನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ರಿತೇಶ್ ದೇಶಮುಖ್ ಮತ್ತು ಫರ್ಹಾ ಖಾನ್ ಸಾರಥ್ಯದಲ್ಲಿ ಮೂಡಿಬರ್ತಿರುವ ಈ ಶೋನಲ್ಲಿ ಆಕಾಂಕ್ಷಾ ತಮ್ಮ 10 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಅಂತ್ಯವಾಗಿರುವ ಕುರಿತು ಈಗಾಗಲೇ ಮುಕ್ತವಾಗಿ ಮಾತನಾಡಿದ್ದರು.
ಮಗುವನ್ನು ಹೊಂದುವ ವಿಷಯದಲ್ಲಿ ದಂಪತಿಗಳ ನಡುವೆ ಮೂಡಿದ ಭಿನ್ನಾಭಿಪ್ರಾಯವೇ ಈ ಡಿವೋರ್ಸ್ಗೆ ಪ್ರಮುಖ ಕಾರಣ ಎಂದು ಆಕಾಂಕ್ಷಾ ಸ್ಪಷ್ಟಪಡಿಸಿದರು. ತಮಗೆ ಮೊದಲಿನಿಂದಲೂ ತಾಯಿಯಾಗುವ ಹಂಬಲವಿರಲಿಲ್ಲ ಎಂದು ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು.
ಇದರ ಬೆನ್ನಲ್ಲೇ ಇದೀಗ ಆಕಾಂಕ್ಷಾ ಮತ್ತೊಂದು ಬಾಂಬ್ ಸಿಡಿಸಿದ್ದು, ಸದ್ಯ ತಮಗೆ ದೈಹಿಕ ಸಂಬಂಧದ ಮೇಲೆ ಯಾವುದೇ ಆಸಕ್ತಿ ಉಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.
ರಿಯಾಲಿಟಿ ಶೋನಲ್ಲಿ ಕೋ ಕಂಟೆಸ್ಟೆಂಟ್ ವರಣ್ ಜತೆ ಮಾತನಾಡುತ್ತಾ, ಗಂಡಿರಲಿ ಅಥವಾ ಹೆಣ್ಣಿರಲಿ, ಸದ್ಯ ನನಗೆ ಯಾರೊಂದಿಗೂ ದೈಹಿಕ ಸಂಪರ್ಕ ಹೊಂದುವ ಇಷ್ಟವಿಲ್ಲ. ಪ್ರೀತಿ ಮತ್ತು ದೈಹಿಕ ಸಂಬಂಧದ ಕುರಿತು ನನಗಿದ್ದ ನಂಬಿಕೆಯೇ ಸಂಪೋರ್ಣವಾಗಿ ಬುಡಮೇಲಾಗಿದೆ ಎಂದು ಹೇಳಿದ್ದಾರೆ.
ಲೈಂಗಿಕ ಆಸಕ್ತಿ ಅನ್ನೋದು ಬದುಕಿನ ವಿವಿಧ ಹಂತಗಳಲ್ಲಿ ಬದಲಾಗುತ್ತಾ ಹೋಗ್ಬಹುದು. ಸದ್ಯ ನಾನು ಡಿವೋರ್ಸ್ನ ಕಠಿಣ ಪ್ರಕ್ರಿಯೆಯಲ್ಲಿದ್ದೇನೆ. ಹೀಗಾಗಿ, ಮದುವೆ ಅನ್ನೋ ವ್ಯವಸ್ಥೆಯ ಮೇಲೆಯೇ ನನಗೆ ನಂಬಿಕೆ ಹೊರಟುಹೋಗಿದೆ. ನಾನು ಇನ್ನೆಂದಿಗೂ ಮದುವೆಯಾಗೋದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಆಕಾಂಕ್ಷಾ ಹೇಳಿಕೊಂಡಿದ್ದಾರೆ.
ಇದೇ ಶೋನಲ್ಲಿ ಕೆಲವು ದಿನಗಳ ಹಿಂದಷ್ಟೇ ಆಕಾಂಕ್ಷಾ ತಾವು ಗೌರವ್ ಖನ್ನಾ ಅವರನ್ನು ಮದುವೆಯಾಗುವ ಮೊದಲು ಹುಡುಗಿಯರ ಜತೆ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದರು. ಕೆಲವು ಹುಡುಗಿಯರ ಜತೆಗೆ ಸಂಬಂಧ ಹೊಂದಿದ್ದರೂ, ಯಾವುದೇ ದೈಹಿಕ ಸಂಪರ್ಕ ಇಟ್ಟುಕೊಂಡಿರ್ಲಿಲ್ಲ ಎಂದು ಅವರು ಹೇಳಿದ್ದರು. ಆದರೆ, ಈಗ ಡಿವೋರ್ಸ್ನ ನಂತರ ಅವರ ಈ ಹೇಳಿಕೆ ಈಗ ವೈರಲ್ ಆಗಿದೆ.