newsics.com/ನ್ಯೂಸಿಕ್ಸ್
ಇತ್ತೀಚೆಗೆ ಸ್ವಿಮಿಂಗ್ಪೂಲ್ವೊಂದರಲ್ಲಿ ಚಿತ್ರಿಸಲಾಗಿದ್ದ ಮಹಿಳೆಯ ಚಿತ್ರದೊಂದಿಗೆ ಕೆಲ ಪುರುಷರು ಅಸಭ್ಯವಾಗಿ ವರ್ತಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗಿತ್ತು. ಈಗ ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ವಿಡಿಯೋದಲ್ಲಿರುವ ಪುರಷರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋವನ್ನು ಹಂಚಿಕೊಂಡಿರುವ ಭೂಮಿ, ಹೆಣ್ಣು ಗೋಡೆ ಮೇಲೆ ಸಹ ಸುರಕ್ಷಿವಾಗಿಲ್ಲ, ಇದು ಯುವಕರ ಕಿಳು ಮಾನಸಿಕತೆಯನ್ನು ತೋರಿಸುತ್ತದೆ. ಇದೇ ಜನರು ರಸ್ತೆಯಲ್ಲಿ ಸಿಕ್ಕ-ಸಿಕ್ಕವರ ಮೇಲೆ ಹಲ್ಲೆ ನಡೆಸುತ್ತಾರೆ. ಇಂತವರಿಗೆ ಹೇಳಲು ಶಬ್ದವಿಲ್ಲ, ಈ ಯುವಕರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಆಗ್ರಹಿಸುತ್ತೆ ಎಂದು ನಟಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.