newsics.com/ನ್ಯೂಸಿಕ್ಸ್
ತಮಿಳುನಾಡಿನ ಕೊಯಮತ್ತೂರಿನ ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ಹತ್ತು ವರ್ಷದ ಬಾಲಕಿಯ ಶತ ಪತ್ತೆಯಾಗಿತ್ತು.
ಈ ಸುದ್ದಿ ರಾಜಕೀಯ ವಲಯದಲ್ಲೂ ಭಾರೀ ಸದ್ದು ಮಾಡಿತು. ಡಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ಪಕ್ಷಗಳು ಘಟನೆಯನ್ನು ಖಂಡಿಸಿ ಟಿವಿಕೆ ಸರ್ಕಾರದ ವಿರುದ್ಧ ಕಿಡಿಕಾರಿದವು. ಮುಖ್ಯಮಂತ್ರಿ ವಿಜಯ್ ಸಹ ಈ ಕುರಿತು ಪ್ರತಿಕ್ರಯಿಸಿ ಘಟನೆ ದುಃಖ ತಂದಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿರುವುದಾಗಿ ತಿಳಿಸಿದರು.
ಇನ್ನು ಈ ಕುರಿತು ಪತ್ರಿಕಾಗೋಷ್ಟಿ ನಡೆಸಿದ ಕೊಯಮತ್ತೂರು ಪಶ್ಚಿಮ ವಲಯದ ಐಜಿಪಿ ಆರ್.ವಿ. ರಮ್ಯಾ ಭಾರತಿ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ಕಾರ್ತಿಕ್ ಹಾಗೂ ಮೋಹನ್ ರಾಜ್ ಎಂಬುವರು ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇಂತಹ ಘೋರ ಘಟನೆ ಕುರಿತು ಪತ್ರಿಕಾಗೋಷ್ಟಿ ನಡೆಸಿದ ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಯಾವುದೋ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಬಂದವರ ಹಾಗೆ ನಗುತ್ತಾ ಕಾಲ ಕಳೆದಿದ್ದಾರೆ. ಅಲ್ಲದೇ ಪಕ್ಕದಲ್ಲಿನ ಪೊಲೀಸ್ ಅಧಿಕಾರಿಗಳೂ ಸಹ ಅದೇ ರೀತಿ ವರ್ತಿಸಿದ್ದಾರೆ.
ಐಜಿಪಿ ರಮ್ಯಾ ಭಾರತಿಯ ಈ ವರ್ತನೆ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಜವಾಬ್ದಾರಿ ಹಾಗೂ ನಡತೆಯ ಕುರಿತು ಪ್ರಶ್ನೆಗಳು ಎದ್ದಿವೆ. ತನ್ನ ಉಗುರಿನ ಅಂದ ಚಂದ ನೋಡಿಕೊಳ್ಳುತ್ತಾ ನಗುತ್ತಾ ಪೋಕ್ಸೋ ಪ್ರಕರಣದ ಪತ್ರಿಕಾಗೋಷ್ಟಿ ನಡೆಸುವ ಇಂತಹ ಅಸಮರ್ಥ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಹೆಣ್ಣು ಗೋಡೆ ಮೇಲೆ ಸಹ ಸುರಕ್ಷಿತಳಲ್ಲ; ವೈರಲ್ ವಿಡಿಯೋಗೆ ನಟಿ ಭೂಮಿ ಪೆಡ್ನೇಕರ್ ಆಕ್ರೋಶ