Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನುಸುಳುಕೋರರಿಗೆ ಕರ್ನಾಟಕವೇ ಸೇಫ್​?
ಪ್ರಮುಖಕರ್ನಾಟಕ

ನುಸುಳುಕೋರರಿಗೆ ಕರ್ನಾಟಕವೇ ಸೇಫ್​?

Share
2 Min Read
SHARE

newsics.com/ನ್ಯೂಸಿಕ್ಸ್

ಬಾಂಗ್ಲಾ ವಲಸಿಗರು ಹುಬ್ಬಳ್ಳಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳತ್ತ ಮುಖ ಮಾಡುತ್ತಿರುವ ವಿಡಿಯೋಗಳು ವೈರಲ್​ ಆಗುತ್ತವೆ. ಇತ್ತೀಚೆಗೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಕೆಲ ಶಂಕಿತರನ್ನು ರೈಲ್ವೆ ಪೊಲೀಸರು ಕೇವಲ ಆಧಾರ್ ಕಾರ್ಡ್ ಪರಿಶೀಲಿಸಿ ಬಿಟ್ಟು ಕಳುಹಿಸಿದ್ದರು. ಅವರು ಬಾಗಲಕೋಟೆಗೆ ಕೂಲಿ ಕೆಲಸಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಆದರೆ, ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ವಲಸಿಗರು ಬರುತ್ತಿರುವ ಸಾಧ್ಯತೆ ಇರುವುದರಿಂದ ಸಮಗ್ರ ತನಿಖೆ ನಡೆಸಬೇಕು ಎನ್ನುವುದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹವಾಗಿದೆ. ಏಕೆಂದರೆ ಪಶ್ಚಿಮ ಬಂಗಾಳದಲ್ಲಿಯೂ ಇವರಿಗೆಲ್ಲಾ ಮಮತಾ ಬ್ಯಾನರ್ಜಿ ನಕಲಿ ಆಧಾರ್​ ಕಾರ್ಡ್​ ಮಾಡಿಸಿಕೊಟ್ಟಿದ್ದರು. ಇಲ್ಲಿಯೂ ಆ ರೀತಿ ಆಗಿರುವ ಸಾಧ್ಯತೆ ಇದೆ, ಇದರಿಂದ ರಾಜ್ಯಕ್ಕೆ ಭಾರಿ ಸಂಕಷ್ಟ ಎದುರಾಗಲಿದ್ದು, ಭದ್ರತೆ ದೃಷ್ಟಿಯಿಂದ ಇದು ಅತ್ಯಂತ ಕಠಿಣ ಪರಿಸ್ಥಿತಿಯಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಹೇಳುತ್ತಿವೆ.

ನಕಲಿ ಆಧಾರ್​ ಕಾರ್ಡ್​?

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಗೆ ತಂಡೋಪತಂಡವಾಗಿ ಬಾಂಗ್ಲಾದೇಶಿಯರು ಬಂದಿರುವ ಅನುಮಾನ ವ್ಯಕ್ತವಾಗುತ್ತಿದೆ. ಅದಕ್ಕೆ ಪುರಾವೆ ಎನ್ನುವಂತೆ ಅವರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿದಾಗ, ಅವರು ಪಶ್ಚಿಮ ಬಂಗಾಳದಿಂದ ಬಂದಿದ್ದು, ಕೂಲಿ ಕೆಲಸಕ್ಕೆ ಬಾಗಲಕೋಟೆಗೆ ಹೋಗುತ್ತಿರುವುದಾಗಿ ಹೇಳಿದ್ದರು! ಆದರೆ ಆಧಾರ ಕಾರ್ಡ್ ತೋರಿಸಿದ್ದರಿಂದ ಅವರನ್ನು ರೈಲ್ವೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಇದೀಗ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕೇವಲ ಆಧಾರ ಕಾರ್ಡ್ ನೋಡಿ ಬಿಟ್ಟು ಕಳುಹಿಸಿದರೆ ಸಾಲದು, ಏಕೆಂದರೆ ನಕಲಿ ಆಧಾರ ಕಾರ್ಡ್ ಮಾಡಿಸಿಕೊಂಡು ಅನೇಕರು ಬರುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಿಂದ ಯಾರೆಲ್ಲಾ ಹುಬ್ಬಳ್ಳಿಗೆ ಬರುತ್ತಾರೆ ಅವರನ್ನು ಸಮಗ್ರ ತನಿಖೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ.

ಕಾಟಾಚಾರಕ್ಕೆ ತಪಾಸಣೆ

ಹಿಂದೂ ಪರ ಸಂಘಟನೆ ಪ್ರತಿಭಟನೆ ಜೋರಾದಂತೆ, ಕಾಟಾಚಾರಕ್ಕೆ ಪೊಲೀಸರು ರೈಲಿನಲ್ಲಿ ಬರುವವರ ತಪಾಸಣೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನೂರಾರು ಪ್ರಯಾಣಿಕರು ಬಂದಿದ್ದರಿಂದ ಪೊಲೀಸರು ಯಾರನ್ನು ಕೂಡ ಸರಿಯಾಗಿ ತಪಾಸಣೆ ಮಾಡಲು ಸಾಧ್ಯವಾಗಲಿಲ್ಲ. ಹಿಂದೂಪರ ಸಂಘಟನೆಗಳ ಆರೋಪಗಳ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಮಾಹಿತಿ ನೀಡದೇ ಇದ್ದರು ಕೂಡ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.ಹೀಗೆ ಕಾಟಾಚಾರಕ್ಕೆ ಅವರ ತಪಾಸಣೆ ಒಂದೆಡೆಯಾದರೆ, SIR ಗೆ ಕಾಂಗ್ರೆಸ್​ ಸರ್ಕಾರದ ವಿರೋಧ ಇನ್ನೊಂದೆಡೆ. ಇದು ಕರ್ನಾಟಕ ದೀದೀ ನಾಡು ಪಶ್ಚಿಮ ಬಂಗಾಳ ಆಗುತ್ತದೆಯೇ ಎನ್ನುವ ಆತಂಕ ಹಲವರಲ್ಲಿ ಮನೆಮಾಡಿದೆ.

10 ವರ್ಷದ ಬಾಲಕಿ ಕಿಡ್ನಾಪ್​ – ಕೊಲೆ ಕೇಸ್: ಸುದ್ಧಿಗೋಷ್ಠಿಯಲ್ಲಿ ಕಿಲಕಿಲನೆ ನಕ್ಕ ಪೊಲೀಸಮ್ಮ; ವೈರಲ್ ವಿಡಿಯೋ ನೋಡಿ

TAGGED:Is Karnataka safe for infiltrators?
Share This Article
Facebook Twitter Copy Link Print
Previous Article 10 ವರ್ಷದ ಬಾಲಕಿ ಕಿಡ್ನಾಪ್​ – ಕೊಲೆ ಕೇಸ್: ಸುದ್ಧಿಗೋಷ್ಠಿಯಲ್ಲಿ ಕಿಲಕಿಲನೆ ನಕ್ಕ ಪೊಲೀಸಮ್ಮ; ವೈರಲ್ ವಿಡಿಯೋ ನೋಡಿ
Next Article ವೈಬ್ರೆಂಟ್‌ ಕಲರ್‌ಗೆ ತಿರುಗಿದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌

Popular Posts

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read

You Might Also Like

ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read
ಪ್ರಮುಖದೇಶ

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read
ಪ್ರಮುಖಕರ್ನಾಟಕ

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read
ಪ್ರಮುಖದೇಶ

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?