newsics.com
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟಾಪ್ ನಟಿಯರಲ್ಲಿ (Actress) ಒಬ್ಬರು. ಕಾಲಿವುಡ್ To ಬಾಲಿವುಡ್ ಎಲ್ಲರಿಗೂ ಶ್ರೀವಲ್ಲಿಯೇ ಬೇಕು, ಈಗ ಈ ಶ್ರೀವಲ್ಲಿ ಸಿಲಿಕಾನ್ ಸಿಟಿಗೆ ಬಂದಿಳಿದಿದ್ದಾರೆ.
ಫೆಬ್ರವರಿ 26ಕ್ಕೆ ಮದುವೆಯಾಗಿ ಆ ನಂತರ ಹನಿಮೂನ್ ಮುಗಿಸಿ, ಪೂಜೆ, ರಿಸೆಪ್ಶನ್ ಅಂತ ಎಲ್ಲ ಫಂಕ್ಷನ್ ಮುಗಿಸಿ ನಟಿ ಈಗ ಬೆಂಗಳೂರಿಗೆ ಬಂದಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಬೆಂಗಳೂರಿಗೆ ಬಂದಿದ್ದು ಯಾಕೆ ಎನ್ನುವುದು ಗೊತ್ತಿಲ್ಲ. ಆದರೆ ಬಹಳಷ್ಟು ಸಮಯದ ನಂತರ ನಟಿ ಬೆಂಗಳೂರಿಗೆ ಬಂದಿದ್ದು, ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಮಾಹಿತಿ ಕೊಟ್ಟಿದ್ದಾರೆ.
ಕ್ಯೂಟೆಸ್ಟ್ ಎಂದು ಬರೆದಿರುವ ರಶ್ಮಿಕಾ ಅವರು ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಚಿಕ್ಕ ಹಾರ್ಟ್ ಸಿಕ್ಕಿತು. ಎಷ್ಟು ಮುದ್ದಾಗಿದೆ ಎಂದು ಬರೆದುಕೊಂಡಿದ್ದಾರೆ. ಹಾರ್ಟ್ ಶೇಪ್ ಇರುವ ಕಾಫಿ ಕಪ್ ಫೋಟೋವನ್ನು ಕೂಡಾ ಅವರು ಶೇರ್ ಮಾಡಿದ್ದಾರೆ. ಸದ್ಯ ಅವರ ಸ್ಟೋರಿ ನೋಡಿದ ಜನ ನಟಿ ಸಿಲಿಕಾನ್ ಸಿಟಿಗೆ ಬಂದಿರೋದನ್ನು ತಿಳಿದುಕೊಂಡಿದ್ದಾರೆ
ರಶ್ಮಿಕಾ ಮಂದಣ್ಣಗೆ ಈಗ 29 ವರ್ಷ. ಅವರು ತಮ್ಮ ಬಹುಕಾಲದ ಗೆಳೆಯ ಮತ್ತು ನಟ ವಿಜಯ್ ದೇವರಕೊಂಡ ಅವರನ್ನು ಫೆಬ್ರವರಿ 26 ರಂದು ವಿವಾಹವಾದರು. ಮದುವೆಯ ನಂತರ, ಅವರ ಮುಂಬರುವ ಚಿತ್ರ “ರಣಬಲಿ” ಯ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಯಿತು. ಮದುವೆಯ ನಂತರ ವಿಜಯ್ ಜತೆ ರಶ್ಮಿಕಾ ಅವರ ಮೊದಲ ಚಿತ್ರ ಇದಾಗಿದೆ.
ಇದಲ್ಲದೆ ಅವರು ಮೈಸಾದಲ್ಲಿ ನಟಿಸುತ್ತಿದ್ದಾರೆ. ಮೈಸಾ” ಎಂಬುದು ಬಹುನಿರೀಕ್ಷಿತ ತೆಲುಗು ಆಕ್ಷನ್ ಸಿನಿಮಾವಾಗಿದ್ದು, ರಶ್ಮಿಕಾ ಮಂದಣ್ಣ ಪ್ರಬಲ ಮತ್ತು ಧೈರ್ಯಶಾಲಿ ಪಾತ್ರದಲ್ಲಿ ನಟಿಸಿದ್ದಾರೆ. ಕಥೆಯ ಕೇಂದ್ರಬಿಂದು ಅವರು. ರಶ್ಮಿಕಾ ಇದರಲ್ಲಿ ಅತ್ಯಂತ ಬಲಿಷ್ಠ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಾರೆ.
ಪುಷ್ಪ 3: ದಿ ರಾಂಪೇಜ್: “ಪುಷ್ಪ 3: ದಿ ರಾಂಪೇಜ್” ಬ್ಲಾಕ್‌ಬಸ್ಟರ್ ಪುಷ್ಪ ಫ್ರಾಂಚೈಸಿಯ ಮೂರನೇ ಭಾಗವಾಗಿದೆ. ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದಲ್ಲಿ ಮರಳಿದ್ದಾರೆ ಮತ್ತು ಮೂರನೇ ಬಾರಿಗೆ ಪುಷ್ಪಾ ಪಾತ್ರದಲ್ಲಿ ನಟಿಸುತ್ತಿರುವ ಅಲ್ಲು ಅರ್ಜುನ್ ಜತೆಗೆ ಕಾಣಿಸಿಕೊಳ್ಳಲಿದ್ದಾರೆ.
ಕಾಕ್‌ಟೇಲ್ 2: ‘ಕಾಕ್‌ಟೇಲ್ 2’ ಹಿಂದಿ ರೊಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ನಟಿಸಿದ್ದಾರೆ, ಇದರಲ್ಲಿ ಶಾಹಿದ್ ಕಪೂರ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಹೋಮಿ ಅಡಾಜಾನಿಯಾ ನಿರ್ದೇಶಿಸಿದ್ದಾರೆ ಮತ್ತು ಜೂನ್ 19 ರಂದು ಬಿಡುಗಡೆಯಾಗಲಿದೆ.
https://www.instagram.com/reel/DWRXVVfj3y7/?igsh=eThkeHRlOTgwMzNj
https://www.instagram.com/reel/DWRXVVfj3y7/?igsh=eThkeHRlOTgwMzNj
ದೇವರು ನನ್ನ ಕರೆಯುತ್ತಿದ್ದಾನೆ ಎಂದು ಪತ್ರ ಬರೆದಿಟ್ಟು ಯುವತಿ ನಾಪತ್ತೆ !