newsics.com/ನ್ಯೂಸಿಕ್ಸ್
ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಹಳದಿ ಮತ್ತು ಬಿಳಿ ಲೋಹದ ಖರೀದಿದಾರರ ಜೇಬಿಗೆ ಭರ್ಜರಿ ಬಂಪರ್ ಉಳಿತಾಯವಾಗಿದೆ.
ಇಂದು ಬುಧವಾರ ದೇಶಾದ್ಯಂತ ಭಾರಿ ಕುಸಿತವನ್ನು ಕಂಡಿದೆ. ಇನ್ನು ಚಿನ್ನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಳ್ಳಿ ಬೆಲೆಯು ಅಕ್ಷರಶಃ ಪಾತಾಳಕ್ಕೆ ಕುಸಿದಿದ್ದು, ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಬಂಗಾರದಂತಹ ಅವಕಾಶ ಸಿಕ್ಕಂತಾಗಿದ
ಜಾಗತಿಕ ಮಾರುಕಟ್ಟೆಯ ಏರಿಳಿತದ ಬೆನ್ನಲ್ಲೇ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಒಂದು ಗ್ರಾಮ್‌ಗೆ ಬರೋಬ್ಬರಿ 395 ರೂಪಾಯಿಯಿಂದ 450 ರೂಪಾಯಿವರೆಗೆ ಭಾರಿ ಇಳಿಕೆಯಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ದೇಶದಲ್ಲಿ ಆಭರಣ ಚಿನ್ನದ ಬೆಲೆ 14,000 ರೂಪಾಯಿ ಗಡಿಯೊಳಗೆ ಬಂದರೆ, ಅಪರಂಜಿ ಚಿನ್ನದ ಬೆಲೆ 15,000 ರೂಪಾಯಿಗಿಂತ ಕೆಳಗೆ ಇಳಿದು ಗ್ರಾಹಕರಿಗೆ ನೆಮ್ಮದಿ ತಂದಿದೆ.
22 ಕ್ಯಾರಟ್ ಆಭರಣ ಚಿನ್ನ (10 ಗ್ರಾಮ್): ₹1,36,450 ರೂಪಾಯಿ
24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹1,48,860 ರೂಪಾಯಿ
ಬಿಳಿ ಲೋಹಕ್ಕೆ ಭಾರಿ ಪೆಟ್ಟು ಕೆಜಿಗೆ ₹10,000 ಅಗ್ಗವಾದ ಬೆಳ್ಳಿ
ಮಂಗಳವಾರ ಮಾರುಕಟ್ಟೆಯಲ್ಲಿ ಸಖತ್ ಸ್ಥಿರವಾಗಿದ್ದ ಬಿಳಿ ಲೋಹ ಬೆಳ್ಳಿ ಬೆಲೆಯು, ಇಂದು ಬುಧವಾರ ಅತಿ ದೊಡ್ಡ ಕುಸಿತವನ್ನು ಎದುರಿಸಿದೆ. ಒಂದು ಗ್ರಾಮ್‌ಗೆ ಬರೋಬ್ಬರಿ 10 ರೂಪಾಯಿ ತಗ್ಗಿದ್ದು, ಕೆಜಿಗೆ ಒಟ್ಟಾರೆಯಾಗಿ 10,000 ರೂಪಾಯಿ ಇಳಿಕೆಯಾಗಿದೆ.
ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ : ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ