newsics.com
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 221 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ತಲುಪುವ ಮೂಲಕ ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆದ್ದಿದೆ. ವಿಶೇಷವೆಂದರೆ ಮುಂಬೈ ಇಂಡಿಯನ್ಸ್ 14 ವರ್ಷಗಳ ವನವಾಸಕ್ಕೆ ಅಂತ್ಯವಾಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಕೂಡ ಕಳಪೆ ಫೀಲ್ಡಿಂಗ್ ಮಾಡಿ ದೊಡ್ಡ ಮಟ್ಟದಲ್ಲಿಯೇ ರನ್ಗಳನ್ನು ಬಿಟ್ಟು ಕೊಟ್ಟರು. ಕೋಲ್ಕತ್ತಾ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 221 ರನ್ಗಳ ಬಿಗ್ ಟಾರ್ಗೆಟ್ ಸೆಟ್ ಮಾಡಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಓಪನರ್ಸ್ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ಫಲವಾಗಿಯೇ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರು, 2015ರ ಬಳಿಕ ಇದೇ ಮೊದಲ ಬಾರಿಗೆ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 2015ರಲ್ಲಿ ರೋಹಿತ್ ಶರ್ಮಾ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ರೋಹಿತ್ ಶರ್ಮಾ ಅವರ ಹಾಫ್ಸೆಂಚುರಿ ಆಗುತ್ತಿದ್ದಂತೆ ರಯಾನ್ ರಿಕೆಲ್ಟನ್ ಅವರು ಕೂಡ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅರ್ಧಶತಕದ ಬಳಿಕವೂ ಇಬ್ಬರೂ ತಮ್ಮ ಆಕ್ರಮಣಕಾರಿ ಇನ್ನಿಂಗ್ಸ್ ಅನ್ನು ಮುಂದುವರಿಸಿದರು. ಆದರೆ 38 ಎಸೆತಗಳಲ್ಲಿ 78 ರನ್ ಗಳಿಸಿ ಆಡುವಾಗ ರೋಹಿತ್ ಶರ್ಮಾ ಅವರು ಔಟಾದರು. ಈ ಇನ್ನಿಂಗ್ಸ್ನಲ್ಲಿ ಅವರು 6 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸಿದರು. ಇದು ನೋಡುಗರಿಗೆ ಮಜಾ ನೀಡಿದೆ. ರೋಹಿತ್ ಔಟಾದ ತಕ್ಷಣ ಸೂರ್ಯ ಮೈದಾನಕ್ಕೆ ಬಂದರು ಆದರೆ ಅವರು 16 ರನ್ ಗಳಿಸಿ ಔಟಾದರು. ಅವರ ನಂತರ ತಿಲಕ್ ವರ್ಮಾ ಮೈದಾನಕ್ಕೆ ಬಂದರು. ಉತ್ತಮ ಫಾರ್ಮ್ನಲ್ಲಿದ್ದ ರಯಾನ್ ರಿಕಲ್ಟನ್ 43 ಎಸೆತಗಳಲ್ಲಿ 81 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಓಪನರ್ ರಿಕೆಲ್ಟನ್ ಔಟ್ ಆಗುತ್ತಿದ್ದಂತೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಮೈದಾನದಲ್ಲಿದ್ದರು. ಆದರೆ ಮುಂಬೈ ಗೆಲುವಿನ ಸನಿಹದಲ್ಲಿದ್ದಾಗ ತಿಲಕ್ ವರ್ಮಾ 20 ರನ್ಗಳಿಗೆ ಔಟಾದರು. ಹಾರ್ದಿಕ್ ಪಾಂಡ್ಯ ಕೊನೆವರೆಗೂ ಇದ್ದು ಮುಂಬೈ ತಂಡವನ್ನು ಗೆಲುವಿನ ದಡವನ್ನು ಮುಟ್ಟಿಸಿದರು. ಈ ಮೂಲಕ ಐಪಿಎಲ್ನಲ್ಲಿ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ತಮ್ಮ 14 ವರ್ಷಗಳ ವನವಾಸವನ್ನು ಕೊನೆಗೊಳಿಸಿದೆ. ಏಕೆಂದರೆ ಕಳೆದ 14 ವರ್ಷಗಳಲ್ಲಿ ಮುಂಬೈ ತಂಡವು ಐಪಿಎಲ್ನ ಮೊದಲ ಪಂದ್ಯವನ್ನು ಗೆದ್ದೇ ಇರಲಿಲ್ಲ. ಆದರೆ ಈಗ ಮುಂಬೈ ಈ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ವನವಾಸಕ್ಕೆ ಅಂತ್ಯವಾಡಿದೆ.