newsics.com
ಸೆಲೆಬ್ರಿಟಿಗಳ ಲೈಫ್ನಲ್ಲಿ ನೆಗೆಟಿವ್ ಬಂದುಬಿಟ್ಟರೆ, ಸೋಷಿಯಲ್ ಮೀಡಿಯಾಗಳಲ್ಲಿ ಅದರದ್ದೇ ಕಾರುಬಾರು. ಈ ಬಗ್ಗೆ ನಟಿ ಅಮೃತಾ ಅಯ್ಯಂಗಾರ್ ಕಿಡಿಕಾರಿದ್ದಾರೆ. ಇಂಥ ನೆಗೆಟಿವ್ ಮನಸ್ಥಿತಿಯ ಬಗ್ಗೆ ಅವರು ಹರಿಹಾಯ್ದಿದ್ದಾರೆ.
ʻಲವ್ ಮಾಕ್ಟೇಲ್ 3’ ಸಕ್ಸಸ್ ಮೀಟ್ ಸಂದರ್ಭದಲ್ಲಿ ಹಲವು ಮಾಧ್ಯಮಗಳಲ್ಲಿ ನಟಿ ತಮ್ಮ ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ತಮ್ಮ ಜೀವನದ ಬ್ರೇಕಪ್ ಬಗ್ಗೆಯೂ ಅವರು ಹೇಳಿಕೊಂಡಿದ್ದು, ಹಲವು ಯುಟ್ಯೂಬ್ಗಳಲ್ಲಿ, ಅವರ ಬ್ರೇಕಪ್ ಬಗ್ಗೆಯೇ ಹೈಲೈಟ್ ಆಗಿದ್ದು, ನಟಿಯ ಸಾಧನೆ ಬಗ್ಗೆ ಅಷ್ಟಾಗಿ ಯಾರೂ ಮಾತನಾಡಲೇ ಇಲ್ಲ. ಇದೀಗ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ ಗರಂ ಆಗಿದ್ದಾರೆ.
ನನ್ನ ಬ್ರೇಕಪ್ ಅನ್ನೇ ಎಲ್ಲರೂ ಐಡೆಂಟಿಟಿ ಮಾಡಿಕೊಂಡು ಬಿಟ್ಟಿದ್ದಾರೆ. ಎಲ್ಲಿ ನೋಡಿದರೂ ನನ್ನ ಬ್ರೇಕಪ್ ವಿಷ್ಯವೇ. ಅದನ್ನು ಬಿಟ್ಟರೆ ನನಗೆ ಬೇರೆ ಐಡೆಂಟಿಟಿನೇ ಇಲ್ವಾ ಎಂದು ಕೋಪದಿಂದ ನುಡಿದಿದ್ದಾರೆ ನಟಿ. ನಾನು ಯಾವಾಗಲೂ ಓಪನ್ ಆಗಿಯೇ ಇರುವವಳು. ಅದೇ ಕಾರಣಕ್ಕೆ ಬ್ರೇಕಪ್ ಬಗ್ಗೆ ಮಾತನಾಡಿದ್ದೆ. ಯಾರಿಗೆ ಬ್ರೇಕಪ್ ಆಗಲ್ಲ ಹೇಳಿ, ಎಲ್ಲರ ಲೈಫ್ನಲ್ಲಿಯೂ ಇದು ಕಾಮನ್. ಸಾಧನೆ ಬಿಟ್ಟು ಬರೀ ಅದರ ಬಗ್ಗೆ ಮಾತನಾಡ್ತಿರೋದನ್ನು ನೋಡಿದರೆ ತುಂಬಾ ಕೋಪ ಬರುತ್ತದೆ ಎಂದಿದ್ದಾರೆ ನಟಿ.
ನಾನು ಎಷ್ಟೊಂದು ಸಿನಿಮಾಗಳನ್ನ ಮಾಡಿದ್ದೇನೆ. ಎಷ್ಟೊಂದು ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೆ ಎಲ್ಲರೂ ಬ್ರೇಕಪ್ ವಿಷ್ಯ ಮಾತನಾಡ್ತಾರೆ. ಸಂದರ್ಶನಕ್ಕೆ ಹೋದ್ರೆ ಅಲ್ಲಿ ಕೇಳೋದೂ ಇದೇ ವಿಷಯವನ್ನು. ನನ್ನ ಅಮ್ಮ ಕೂಡ ತುಂಬಾ ಬೇಜಾರು ಮಾಡಿಕೊಳ್ತಾರೆ. ಅವರು ನನ್ನ ಸಂದರ್ಶನ ನೋಡಿದಾಗಲೆಲ್ಲಾ ಶೀರ್ಷಿಕೆ ಸೇರಿ ಎಲ್ಲದರಲ್ಲಿಯೂ ಬ್ರೇಕಪ್ ಬಗ್ಗೆನೇ ಇರೋದು ಅವರಿಗೂ ನೋವು ತಂದಿದೆ ಎಂದಿದ್ದಾರೆ ನಟಿ.
ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ