Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು
ಪ್ರಮುಖಆರೋಗ್ಯ

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

Share
2 Min Read
SHARE

newsics.com/ನ್ಯೂಸಿಕ್ಸ್

ಜೀರ್ಣ ಶಕ್ತಿಯನ್ನು ಹೆಚ್ಚಿಸಲು, ಬಾಯಿಯ ದುರ್ವಾಸನೆ ಹೋಗಲಾಡಿಸಲು, ತಿನ್ನುತ್ತಿದ್ದರೆ ಹಾಗೆ ಕೂಲ್ ಕೂಲ್ ಎನಿಸಲು ನೈಸರ್ಗಿಕವಾದ ಸೋಂಪು ಕಾಳುಗಳ ಸೇವನೆ ಅನಿವಾರ್ಯ. ಕೇವಲ ಒಂದು ಟೇಬಲ್ ಚಮಚ ಸೋಂಪು ಕಾಳುಗಳಲ್ಲಿ ಅಡಗಿದೆ ಆರೋಗ್ಯ ವೃದ್ಧಿಸುವ ಅದ್ಭುತ ಗುಣ ಲಕ್ಷಣಗಳು.

ನಿಮಗೆ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಊಟ ಆದ ಮೇಲೆ ಸ್ವಲ್ಪ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯುವುದರಿಂದ ಮತ್ತು ನಿರಂತರವಾಗಿ ಈ ಅಭ್ಯಾಸವನ್ನು ಮುಂದುವರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಯಾವುದೇ ತರಹದ ತೊಂದರೆಗಳು ಎದುರಾಗುವುದಿಲ್ಲ.

ಒಂದು ವೇಳೆ ಈ ಅಭ್ಯಾಸ ಇಲ್ಲದಿದ್ದರೆ, ಇನ್ನು ಮುಂದೆ ನೀವು ಕೂಡ ಪ್ರತಿದಿನ ಊಟ ಆದ ನಂತರದಲ್ಲಿ ಸ್ವಲ್ಪ ಸೋಂಪು ಕಾಳುಗಳನ್ನು ಜಗಿಯುವ ಅಭ್ಯಾಸ ಮಾಡಿಕೊಂಡರೆ ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ತೆಲುಗು ಲೈಫ್​ಸ್ಟೈಲ್​ ಡಾಟ್​ ಕಾಮ್​ ವರದಿ ಪ್ರಕಾರ, ಈ ಸಣ್ಣ ಸೋಂಪು ಬೀಜಗಳು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದ್ದು, ಇವು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಹೀಗಾಗಿ ಇನ್ನು ಮುಂದೆ ನೀವು ಕೂಡ ಪ್ರತಿದಿನ ಊಟ ಆದ ನಂತರ ಸ್ವಲ್ಪ ಸೋಂಪು ಕಾಳುಗಳನ್ನು ಜಗಿಯುವ ಅಭ್ಯಾಸ ಮಾಡಿಕೊಂಡರೆ ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

 

ಸೋಂಪು ಕಾಳು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು!

ಜೀರ್ಣಕ್ರಿಯೆ ಸಮಸ್ಯೆ: ಊಟದ ನಂತರ ಸೋಂಪು ಅಗಿಯುವುದರಿಂದ ನೀವು ಸೇವಿಸಿದ ಆಹಾರವು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಇದು ಹೊಟ್ಟೆಯಲ್ಲಿರುವ ಕಿಣ್ವಗಳನ್ನು ಉತ್ತೇಜಿಸುತ್ತದೆ ಮತ್ತು ಗ್ಯಾಸ್ಟ್ರಿಕ್​, ಅಸಿಡಿಟಿ, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ.

ತೂಕ ಇಳಿಕೆ: ಸೋಂಪು ಬೀಜಗಳು ನಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತವೆ. ಇದರಿಂದ, ದೇಹದಲ್ಲಿರುವ ಹೆಚ್ಚುವರಿ ಕ್ಯಾಲೋರಿಗಳು ವೇಗವಾಗಿ ಸುಡಲ್ಪಡುತ್ತವೆ. ನೀವು ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಬಯಸುವುದಾದರೆ, ನಿಮ್ಮ ಆಹಾರದಲ್ಲಿ ಸಂಪೂರ್ಣ ಸೋಂಪು ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು.

 

ನಿದ್ರಾಹೀನತೆ ಸಮಸ್ಯೆ: ರಾತ್ರಿ ಸರಿಯಾಗಿ ನಿದ್ರಿಸಲು ನಿಮಗೆ ಸಮಸ್ಯೆ ಆಗ್ತಿದ್ಯಾ? ಹಾಗಾದರೆ ಸೋಂಪು ನಿಮಗೆ ಉತ್ತಮ ಔಷಧಿಯಾಗಬಹುದು. ಸೋಂಪು ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಉತ್ತಮ ನಿದ್ರೆಗೆ ಅಗತ್ಯವಾದ ‘ಮೆಲಟೋನಿನ್’ ಹಾರ್ಮೋನ್ ಅನ್ನು ಸ್ರವಿಸುತ್ತದೆ. ಇದರಿಂದ, ನಿಮಗೆ ನೆಮ್ಮದಿಯ ನಿದ್ರೆ ಸಿಗುತ್ತದೆ.

ಹೃದ್ರೋಗ ಸಮಸ್ಯೆ: ಸೋಂಪು ಕಾಳಿನಲ್ಲಿರುವ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು (ಬಿಪಿ) ನಿಯಂತ್ರಣದಲ್ಲಿಡುತ್ತದೆ. ಇದು ಹೃದಯ ಬಡಿತವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ.

Cancer Drugs Hike ಕೀಮೋಥೆರಪಿ ಔಷಧಿಗಳ ಬೆಲೆ ಹೆಚ್ಚಳಕ್ಕೆ ಕೇಂದ್ರ ಒಪ್ಪಿಗೆ

TAGGED:These strange changes happen to your body if you eat anise after a meal
Share This Article
Facebook Twitter Copy Link Print
Previous Article Cancer Drugs Hike ಕೀಮೋಥೆರಪಿ ಔಷಧಿಗಳ ಬೆಲೆ ಹೆಚ್ಚಳಕ್ಕೆ ಕೇಂದ್ರ ಒಪ್ಪಿಗೆ
Next Article ಪತಿ ಬಾಳು ಬೆಳಗುಂದಿ ನನ್ನ ಕಷ್ಟಗಳಿಗೆ ಸ್ಪಂದಿಸಲ್ಲ – ಜೋಡಿ ನಂ 1 ಶೋನಲ್ಲಿ ಪತ್ನಿ ಮಾಲಾಶ್ರೀ ಬೇಸರ

Popular Posts

ತಮಿಳು ಚಿತ್ರರಂಗವನ್ನೇ ಆಳುವ ತಲೈವಾಗೆ ಭಿಕ್ಷೆ ಕೊಟ್ಟಿದ್ಯಾಕೆ ಆ ಮಹಿಳೆ?

2 Min Read

ಪತಿ ಬಾಳು ಬೆಳಗುಂದಿ ನನ್ನ ಕಷ್ಟಗಳಿಗೆ ಸ್ಪಂದಿಸಲ್ಲ – ಜೋಡಿ ನಂ 1 ಶೋನಲ್ಲಿ ಪತ್ನಿ ಮಾಲಾಶ್ರೀ ಬೇಸರ

1 Min Read

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

2 Min Read

Cancer Drugs Hike ಕೀಮೋಥೆರಪಿ ಔಷಧಿಗಳ ಬೆಲೆ ಹೆಚ್ಚಳಕ್ಕೆ ಕೇಂದ್ರ ಒಪ್ಪಿಗೆ

1 Min Read

You Might Also Like

ದೇಶಪ್ರಮುಖ

ನಿಂತಲ್ಲೇ ನಿಂತಿದ್ದರೆ ವೃದ್ಧನ ಜೀವವುಳಿಯುತ್ತಿತ್ತು : ಆದರೆ ಆಗಿದ್ದೇ ಬೇರೆ

1 Min Read
ಕರ್ನಾಟಕದೇಶಪ್ರಮುಖ

ಮುಗಿಯದ ಖಾತೆ ಕ್ಯಾತೆ: ಹೈಕಮಾಂಡ್‌ಗೆ ತಲೆನೋವು

2 Min Read
ಕರ್ನಾಟಕಪ್ರಮುಖ

ಆಝಾನ್ ಕೊಡುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಧರ್ಮಗುರು ನಿಧನ

1 Min Read
ಕರ್ನಾಟಕದೇಶಪ್ರಮುಖ

Hardik Pandya ಬೆಂಗಳೂರಿನಲ್ಲಿ ಹಾರ್ದಿಕ್, ಗೆಳತಿ ಪರದಾಟ : ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ಬಂದಿದ್ದೇಕೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?