Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಆಫ್ರಿಕಾ ಖಂಡದ ರುವಾಂಡದ ನಿವಾಸಿ 72 ವರ್ಷದ ಕಲೀಗ್ಸ್ಟೆ ಎನ್ಜಾಂವೀಟಾ, ಸುಮಾರು 56 ವರ್ಷದಿಂದ ಮಹಿಳೆಯರ ಮುಖ ನೋಡದೆ, ಅವರ ಸಂಪರ್ಕಕ್ಕೆ ಬಾರದೆ ಬದುಕುತ್ತಿದ್ದಾರೆ.
ಗೈನೋಫೋಬಿಯಾ’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅವರು, ಮಹಿಳೆಯರು ತನ್ನ ಕಣ್ಣಿಗೆ ಬೀಳದಂತೆ ಮಾಡಲು ಮನೆಯ ಸುತ್ತ ಮರದ ತಡಿಕೆ ಕಟ್ಟಿದ್ದಾರೆ. ಅದಕ್ಕೆ ಬಟ್ಟೆ, ಇನ್ನಿತರ ವಸ್ತುಗಳನ್ನು ತೂಗು ಹಾಕಿದ್ದಾರೆ.
ಜೀವನದಲ್ಲಿ ಇಂತಹ ಕಠಿಣ ನಿರ್ಧಾರ ತಳೆಯಲು ಕಾರಣವೇನು ಎಂಬುವುದನ್ನು ಎನ್ಜಾಂವೀಟಾ ಅವರು ‘ಆಫ್ರಿಮ್ಯಾಕ್ಸ್ ಪಬ್ಲಿಷರ್ಸ್ ಆಯಂಡ್ ಜನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್’ನ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಬಾಲ್ಯದಿಂದಲೂ ಮಹಿಳೆಯರನ್ನು ಕಂಡರೆ ವಿಪರೀತ ಭಯವಾಗುತ್ತಿತ್ತು. ಮಹಿಳೆಯರು ನೋವು, ಹಿಂಸೆ ಮಾಡುತ್ತಾರೆ ಅನಿಸುತ್ತದೆ. ಅನೇಕ ರೀತಿಯ ಚಿಕಿತ್ಸೆ ಮಾಡಿದರೂ ಆ ಭಯ ನನ್ನನ್ನು ಬಿಟ್ಟಿಲ್ಲ ಎನ್ನುತ್ತಾರೆ ಎನ್ಜಾಂವೀಟಾ.
ಅದಕ್ಕಾಗಿ ನಾನು ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದೆ. ಮಹಿಳೆಯರು ನನ್ನ ಬಳಿ ಸುಳಿಯದಂತೆ ಮಾಡಲು ಮನೆಯ ಸುತ್ತ ಬೇಲಿ ಹಾಕಿ ಮರೆಮಾಡಿಕೊಂಡೆ ಎಂದಿದ್ದಾರೆ.
ಅದಾಗ್ಯೂ, 2023ರಲ್ಲಿ ಮಹಿಳೆಯೊಬ್ಬರು ನನ್ನ ಮನೆಯನ್ನು ಪ್ರವೇಶಿಸಿದ್ದಾರೆ. ಸಂದರ್ಶನ ಮಾಡಲು ಬಂದ ಆ ಮಹಿಳೆ ಹಲವು ಪುರಷರ ನಡುವೆ ಇದ್ದಿದ್ದರಿಂದ ನನಗೆ ಭಯವಾಗಿಲ್ಲ ಎಂದು ಹೇಳಿದ್ದಾರೆ.
ಆದರೆ, ಎನ್ಜಾಂವೀಟಾ ಅವರಿಗೆ ಆಹಾರ ತಂದುಕೊಡುವುದು ಅದೇ ಹಳ್ಳಿಯ ಮಹಿಳೆಯರಂತೆ. ಬಟ್ಟಲಲ್ಲಿ ಆಹಾರ ತರುವ ಅವರು ಎನ್ಜಾಂವೀಟಾ ಮನೆಯ ಹತ್ತಿರ ಇಟ್ಟು ಹೋಗುತ್ತಾರೆ. ಅವರು ಮರೆಯಾದ ಮೇಲೆ ಅಲ್ಲಿ ಇಟ್ಟಿದ್ದ ಆಹಾರವನ್ನು ತೆಗೆದುಕೊಂಡು ತಿನ್ನುತ್ತಾರೆ.
ಗೈನೋಫೋಬಿಯಾ ಎಂಬುದು ಒಂದು ಮಾನಸಿಕ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಬಳಲು ವ್ಯಕ್ತಿಗೆ ಹೆಣ್ಣನ್ನು ಕಂಡರೆ ವಿಪರೀತ ಭಯ, ಆತಂಕ, ಮುಜುಗರ, ದ್ವೇಷ ಹೀಗೆ ಅನೇಕ ರೀತಿಯ ಭಾವನೆಗಳು ಮೂಡುತ್ತದೆ ಎನ್ನುತ್ತಾರೆ ಮಾನಸಿಕ ತಜ್ಞರು.
ಭಾರವಾದ ಶಾಲಾ ಬ್ಯಾಗ್ ಹೊತ್ತ ಪರಿಣಾಮ 6ನೇ ಕ್ಲಾಸ್ ವಿದ್ಯಾರ್ಥಿ ಕೈಗೆ ಊತ