Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಈ ವರ್ಷದ ಮೊದಲ ಹಬ್ಬವಾಗಿ ಸಂಕ್ರಾಂತಿ ಆಚರಣೆಗಾಗಿ ರಾಜ್ಯದ ಜನತೆ ಈಗಾಗಲೇ ಸಿದ್ಧತೆ ಆರಂಭಿಸಿದೆ. ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಿದ್ದಂತೆ ಹಬ್ಬದ ಋತು ಪ್ರಾರಂಭವಾಗುತ್ತದೆ. ಇದು ಜನವರಿ 14 ರಂದು ಮಕರ ಸಂಕ್ರಾಂತಿಯೊಂದಿಗೆ ಹಿಂದೂ ಹಬ್ಬಗಳು ಪ್ರಾರಂಭವಾಗುತ್ತದೆ.
ಕರ್ನಾಟಕದಲ್ಲಿ ಸಂಕ್ರಾತಿಯನ್ನು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಈ ಹಿನ್ನಲೆ ಕರ್ನಾಟಕ ಸರ್ಕಾರ ಈ ವರ್ಷ ಶಿಕ್ಷಣ ಇಲಾಖೆ ಯ ಕ್ಯಾಲೆಂಡರ್ ಪ್ರಕಾರ ಜನವರಿ 15ರಂದು ಎಲ್ಲಾ ಶಾಲಾ-ಕಾಲೇಜಿಗೆ ರಜೆ ಘೋಷಿಸಿದೆ. ಇನ್ನು ಕೆಲವೆಡೆ ಜನವರಿ 14ರಂದು ಸಂಕ್ರಾಂತಿಗೆ ರಜೆ ಇರಲಿದೆ.
ಇನ್ನು, ಈಗಾಗಲೇ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಸರ್ಕಾರಿ ರಜೆ ಪಟ್ಟಿಯ ಪ್ರಕಾರ, ಜನವರಿ 2026ರಲ್ಲಿ ಸಾಲು ಸಾಲು ರಜೆ ಇರಲಿದೆ.
ಜನವರಿ 10ರಂದು ಎರಡನೇ ಶನಿವಾರದ ರಜೆ, ಜನವರಿ 11ರಂದು ಭಾನುವಾರದ ರಜೆ, ಜನವರಿ 15ರಂದು ಗುರುವಾರ ಮಕರ ಸಂಕ್ರಾಂತಿ ರಜೆ, ಜನವರಿ 18ರಂದು ಭಾನುವಾರದ ರಜೆ, ಜನವರಿ 24ರಂದು ನಾಲ್ಕನೇ ಶನಿವಾರದ ರಜೆ, ಜನವರಿ 25ರಂದು ಭಾನುವಾರದ ರಜೆ ಮತ್ತು ಜನವರಿ 26 ಸೋಮವಾರದಂದು ಗಣರಾಜ್ಯೋತ್ಸವ ಹಿನ್ನಲೆ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜಿಗೆ ಮತ್ತು ಬ್ಯಾಂಕ್ ಹಾಗೂ ಸರ್ಕಾರಿ ಕಛೇರಿಗಳಿಗೆ ರಜೆ ಇರಲಿದೆ. ಒಟ್ಟಾರೆಯಾಗಿ ಜನವರಿಯಲ್ಲಿ ಅನೇಕ ಸರ್ಕಾರಿ ರಜೆ ಇರಲಿದೆ.
https://www.newsics.com/2026/01/09/vedanta-group-founder-loses-son-who-will-inherit-rs-35000-crore/