Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವೇದಾಂತ ಸಮೂಹದ ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ ಅವರು ಅಮೆರಿಕದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಸ್ಕೀಯಿಂಗ್ ಅಪಘಾತದ ನಂತರ ಚೇತರಿಸಿಕೊಳ್ಳುತ್ತಿದ್ದ ಅಗ್ನಿವೇಶ್, ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆಪುತ್ರ ಅಗ್ನಿವೇಶ್ ಅಗರ್ವಾಲ್ ಅವರ ಸಾವಿನ ನಂತರ ವೇದಾಂತ ಗ್ರೂಪ್‌ನ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆ ಎದುರಾಗಿದೆ.
ದೇಶದ ಅತಿದೊಡ್ಡ ಮೈನಿಂಗ್ ಗ್ರೂಪ್‌ಗಳಲ್ಲಿ ಒಂದಾಗಿದೆ. ಅನಿಲ್ ಅಗರ್ವಾಲ್ ಇಂದು ಕೋಟ್ಯಂತರ ರೂಪಾಯಿ ಆಸ್ತಿಗಳ ಮಾಲೀಕ. ಅನಿಲ್ ಅಗರ್ವಾಲ್ ನಿರ್ಮಿಸಿದ ಈ ಬಹುಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.
ಪ್ರಸ್ತುತ, ಅನಿಲ್ ಅಗರ್ವಾಲ್ ವೇದಾಂತ ರಿಸೋರ್ಸಸ್‌ನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರು 1976 ರಲ್ಲಿ ವೇದಾಂತ ರಿಸೋರ್ಸಸ್ ಅನ್ನು ಸ್ಥಾಪಿಸಿದರು. ಆರಂಭದಲ್ಲಿ ಒಂದು ಸಣ್ಣ ಕೇಬಲ್ ಕಂಪನಿಯಾಗಿ ಆರಂಭವಾಗಿದ್ದ ವೇದಾಂತ ಗ್ರೂಪ್, ಅನಿಲ್ ಅಗರ್ವಾಲ್ ತಮ್ಮ ತಂದೆಯವರೊಂದಿಗೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕೈಗಾರಿಕಾ ಜಗತ್ತನ್ನು ಪ್ರವೇಶಿಸಿದರು. ಇಂದು, ವೇದಾಂತ ಗ್ರೂಪ್ ಆಫ್ ಕಂಪನೀಸ್ ಲೋಹಗಳು, ಗಣಿಗಾರಿಕೆ, ಇಂಧನ ಮತ್ತು ತೈಲ ಕ್ಷೇತ್ರಗಳಿಗೆ ವಿಸ್ತರಿಸಿದೆ.
ಅನಿಲ್ ಅಗರ್ವಾಲ್ ಅವರಿಗೆ ಇಬ್ಬರು ಮಕ್ಕಳು. ಅಗ್ನಿವೇಶ್ ಹಾಗು ಪ್ರಿಯಾ. ಆಕರ್ಷ್ ಹೆಬ್ಬಾರ್ ಎಂಬುವರನ್ನು ವಿವಾಹವಾಗಿರುವ ಪ್ರಿಯಾ ಅಗರ್ವಾಲ್ ಅವರು ವೇದಾಂತ ಗ್ರೂಪ್‌ನ ಬ್ಯುಸಿನೆಸ್ಗಳಲ್ಲಿ ಸಕ್ರಿಯವಾಗಿದ್ದಾರೆ. ಅನಿಲ್ ಅಗರ್ವಾಲ್ ಅವರ ಇಬ್ಬರು ತಮ್ಮಂದಿರು ಹಾಗೂ ಅವರ ಕುಟುಂಬ ಸದಸ್ಯರು ಗ್ರೂಪ್‌ನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಫೋರ್ಬ್ಸ್ ಪಟ್ಟಿಯ ಪ್ರಕಾರ, ಅನಿಲ್ ಅಗರ್ವಾಲ್ ಮತ್ತು ಅವರ ಕುಟುಂಬದ ಒಟ್ಟು ಸಂಪತ್ತು 35 ಸಾವಿರ ಕೋಟಿ ರೂ. ವೇದಾಂತ ಗ್ರೂಪ್‌ನ ಜವಾಬ್ದಾರಿ ಭವಿಷ್ಯದಲ್ಲಿ ಪ್ರಿಯಾ ಅಗರ್ವಾಲ್ ಅವರ ಹೆಗಲ ಮೇಲೆ ಬೀಳುವುದು ಖಚಿತವಾಗಿದೆ.