Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಮತ್ತೆ ಚಳಿಯ ಆರ್ಭಟ ಜೋರಾಗಿದೆ. ಜನರು ಮುಂಜಾನೆ ಮನೆಯಿಂದ ಆಚೆ ಬಂದರೆ ದಟ್ಟ ಮಂಜಿನಿಂದ ಎದುರುಗಡೆ ಏನಿದೆ ಅನ್ನೋದೆ ತಿಳಿದಂತೆ ಆಗಿದೆ. ಜೊತೆಗೆ ಮಂಜು ತೆರೆಯುತ್ತಿದ್ದಂತೆ ಶೀತ ಗಾಳಿ ಆರಂಭ ಆಗುತ್ತದೆ. ಈ ನಡುವೆ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ದಟ್ಟ ಮಂಜು ಕವಿದಿದ್ದು, ಚಳಿ ಪ್ರಮಾಣ ಹೆಚ್ಚಳವಾಗಿದೆ. ಶೀತಗಾಳಿ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಶೀತಗಾಳಿ ಹಿನ್ನೆಲೆಯಲ್ಲಿ ರಾಜ್ಯದ 7 ಜಿಲ್ಲೆಯಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಾವಣಗೆರೆ, ಹಾವೇರಿ, ಬಾಗಲಕೋಟೆ, ಗದಗ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಶೀತದ ಅಲೆ ಹೆಚ್ಚುತ್ತಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ವಾತಾವರಣ ಮುಂದುವರೆಯಲಿದೆ. ಜನರು ಬೆಚ್ಚನೆಯ ಉಡುಪಿ ಧರಿಸಿ, ಸುರಕ್ಷಿತವಾಗಿರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
https://www.newsics.com/2026/01/09/do-you-snore-excessively-if-so-you-are-in-danger/