newsics.com
ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 20 ರಿಂದ 23ರವರೆಗೆ ಜಾತಿಗಣತಿ ಸಮೀಕ್ಷೆಗೆ ಸರ್ಕಾರ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.
ಸಮೀಕ್ಷೆ ಪ್ರಗತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಈ ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಅಕ್ಟೋಬರ್ 23ರವರೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕುವ ನಿರ್ಧಾರವನ್ನು ಕೈಗೊಂಡರು.
ಅಕ್ಟೋಬರ್ 23ರಿಂದ 31ರವರೆಗೆ ದೀಪಾವಳಿ ಹಬ್ಬದ ಬಳಿಕ ಬೆಂಗಳೂರಲ್ಲಿ ಮತ್ತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದು, ಈ ಸಮಯದಲ್ಲಿ ಶಿಕ್ಷಕರ ಬದಲು ಇಲಾಖಾವಾರು ಅಧಿಕಾರಿ ಹಾಗೂ ಸಿಬ್ಬಂದಿಯೇ ಸಮೀಕ್ಷೆ ನಡೆಸಲಿದ್ದು, ಶಿಕ್ಷಕರನ್ನು ಈ ಕಾರ್ಯದಿಂದ ಕೈಬಿಡಲಾಗಿದೆ ಎಂದರು.
Smriti Mandhana: ಇಂದೋರ್ ಸೊಸೆಯಾಗ್ತಿದ್ದಾರೆ ಸ್ಮೃತಿ ಮಂಧನಾ!; ಭಾವಿ ಪತಿ ಪಾಲಶ್ ಮುಚ್ಛಲ್ ಹೇಳಿದ್ದೇನು?
1.5 ಗಂಟೆಯೊಳಗಡೆ ಮುಗಿದಿದ್ದ ಇಂದಿರಾ ಗಾಂಧಿ ಮ್ಯಾರೇಜ್! ವೈರಲ್ ವಿಡಿಯೋ ನೋಡಿ
ನನಗೆ ಯಾಕೆ ಈ ಶಿಕ್ಷೆ, ಜೈಲಿನಲ್ಲೇ ನಾನು ಹೀಗೆ ಸಾಯಬೇಕಾ; ಜೈಲಿನಲ್ಲಿ ಕೂಗಾಡಿದ ದರ್ಶನ್