Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ನಾನು ಯಾರಿಗೆ ಅನ್ಯಾಯ ಮಾಡಿದ್ದೇನೆ, ನನಗೆ ಯಾಕೆ ಈ ಶಿಕ್ಷೆ, ನಾನು ಹೀಗೆ ಜೈಲಿನಲ್ಲೇ ಸಾಯಬೇಕಾ ಎಂದು ನಟ ದರ್ಶನ್ ರಂಪಾಟ ಮಾಡಿದ ಘಟನೆ ಜೈಲಿನಲ್ಲಿ ನಡೆದಿದೆ.
ಜೈಲಿನಲ್ಲಿ ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯ ಒದಗಿಸಲಾಗುತ್ತಿಲ್ಲ ಅನ್ನೋ ಆರೋಪದ ಸತ್ಯಾಸತ್ಯೆ ಅರಿಯಲು ಕಾನೂನು ಪ್ರಾಧಿಕಾರ ತನಿಖೆ ನಡೆಸಿ ವರದಿ ನೀಡಿತ್ತು. ಈ ವರದಿ ದರ್ಶನ್‌ಗೆ ವಿರುದ್ದವಾಗಿದೆ ಎಂದು ನಟ ದರ್ಶನ್‌ಗೆ ಆಪ್ತರು, ಮ್ಯಾನೇಜರ್ ಹೇಳಿದ್ದಾರೆ. ಈ ಮಾತು ಕೇಳಿಸಿಕೊಂಡು ನಟ ದರ್ಶನ್ ಗರಂ ಆಗಿದ್ದಾರೆ.
ನನಗೆ ಆಗುತ್ತಿರುವ ಸಮಸ್ಯೆ, ಇಲ್ಲಿನ ಕನಿಷ್ಠ ಸೌಲಭ್ಯಗಳ ಕುರಿತು ದೂರು ನೀಡಿದ್ದೇನೆ. ಆದರೆ ಈ ವರದಿ ನನ್ನ ವಿರುದ್ಧವಾಗಿದೆ ಎಂದರೆ ಏನು? ಎಲ್ಲರಿಗೂ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಆದರೆ ನನಗೆ ಈ ರೀತಿ ಶಿಕ್ಷೆ, ನಾನು ಹೀಗೆ ಸಾಯಬೇಕಾ ಎಂದು ದರ್ಶನ್ ಜೈಲಿನಲ್ಲಿ ಸಹ ಖೈದಿಗಳ ಜೊತೆ ಕೂಗಾಡಿದ್ದಾರೆ.
ದರ್ಶನ್ ಕೋಪ ನೋಡಿ ಶಾಕ್ ಆದ ಸಹಚರರು
ನಟ ದರ್ಶನ್ ಜೈಲಿನಲ್ಲಿ ಇಷ್ಟು ದಿನ ತೀವ್ರ ತಾಳ್ಮೆ ವಹಿಸಿದ್ದರು. ಆದರೆ ವರದಿ ವಿರುದ್ಧವಾಗಿದೆ ಎಂದಾಗ ತಾಳ್ಮೆ ಕಳೆದುಕೊಂಡಿದ್ದಾರೆ. ದರ್ಶನ್ ಕೋಪಗೊಂಡಿರುವುದು ನೋಡಿದ ಸಹಚರರು ಶಾಕ್ ಆಗಿದ್ದಾರೆ. ದರ್ಶನ್ ಮ್ಯಾನೇಜರ್ ನಾಗರಾಜ್ ನಟನ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ. ಇತರರು ದರ್ಶನ್ ಕಡೆ ನೋಡಲು ಸಾಧ್ಯವಾಗದೆ, ಸ್ಥಳದಿಂದ ತೆರಳಲು ಸಾಧ್ಯವಾಗದೇ ಪರದಾಡಿದ್ದಾರೆ.
ರಿಪೋರ್ಟ್ ಮಾಹಿತಿ ತಿಳಿದು ಗರಂ ಆದ ನಟ ದರ್ಶನ್ ಕೆಲ ಹೊತ್ತು ಸಹಚರರು ಸೇರಿದಂತೆ ಹಲವರೊಂದಿಗೆ ಗರಂ ಆಗಿದ್ದಾರೆ. ಕೆಲ ಹೊತ್ತಿನ ಬಳಿಕ ದರ್ಶನ್ ಸೈಲೆಂಟ್ ಆಗಿದ್ದಾರೆ. ಬಳಿಕ ಯಾರೊಂದಿಗೆ ಬೆರೆಯದೇ ಒಂಟಿಯಾಗಿ ಕುಳಿತಿದ್ದಾರೆ. ಇದೇ ವೇಳೆ ವಕೀಲರ ಜೊತೆ ಮಾತನಾಡಬೇಕು ಎಂದು ದರ್ಶನ್ ಹೇಳಿದ್ದಾರೆ.
ರಿಪೋರ್ಟ್ ಮಾಹಿತಿ ತಿಳಿದು ಗರಂ ಆದ ನಟ ದರ್ಶನ್ ಕೆಲ ಹೊತ್ತು ಸಹಚರರು ಸೇರಿದಂತೆ ಹಲವರೊಂದಿಗೆ ಗರಂ ಆಗಿದ್ದಾರೆ. ಕಿರುಚಾಡಿದ್ದಾರೆ. ಕೆಲ ಹೊತ್ತಿನ ಬಳಿಕ ದರ್ಶನ್ ಸೈಲೆಂಟ್ ಆಗಿದ್ದಾರೆ. ಬಳಿಕ ಯಾರೊಂದಿಗೆ ಬೆರೆಯದೇ ಒಂಟಿಯಾಗಿ ಕುಳಿತಿದ್ದಾರೆ. ಇದೇ ವೇಳೆ ವಕೀಲರ ಜೊತೆ ಮಾತನಾಡಬೇಕು ಎಂದು ದರ್ಶನ್ ಹೇಳಿದ್ದಾರೆ.