Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Family of four ready to sacrifice their bodies ಕೈಲಾಸಕ್ಕೆ‌ ಹೋಗುವ ನಂಬಿಕೆ: ದೇಹತ್ಯಾಗಕ್ಕೆ ಸಿದ್ಧವಾಗಿದ್ದ ನಾಲ್ವರ ಕುಟುಂಬ, ಅಧಿಕಾರಿಗಳಿಂದ ತಡೆ
ಕರ್ನಾಟಕದೇಶಪ್ರಮುಖ

Family of four ready to sacrifice their bodies ಕೈಲಾಸಕ್ಕೆ‌ ಹೋಗುವ ನಂಬಿಕೆ: ದೇಹತ್ಯಾಗಕ್ಕೆ ಸಿದ್ಧವಾಗಿದ್ದ ನಾಲ್ವರ ಕುಟುಂಬ, ಅಧಿಕಾರಿಗಳಿಂದ ತಡೆ

Share
3 Min Read
SHARE

newsics.com

ಚಿಕ್ಕೋಡಿ: ಕುಟುಂಬವೊಂದು ಆಶ್ರಮವೊಂದರ ಚಿಂತನೆಗಳನ್ನು ಅನುಕರಿಸಿ ದೇಹತ್ಯಾಗಕ್ಕೆ ಮುಂದಾದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರದಲ್ಲಿ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಕುಟುಂಬಸ್ಥರಿಗೆ ತಿಳಿಹೇಳಿದ್ದು, ಶರೀರ ತ್ಯಾಗ ತೀರ್ಮಾನಕ್ಕೆ ತಡೆಯೊಡ್ಡಿದ್ದಾರೆ.

ಹರಿಯಾಣದ ಆಶ್ರಮವೊಂದರ ಚಿಂತನೆಗಳಿಂದ ಅನಂತಪುರದ ಈರಕರ ಕುಟುಂಬದ ನಾಲ್ವರು ಈ ಅಸಾಮಾನ್ಯ ನಿರ್ಧಾರಕ್ಕೆ ಬಂದಿದ್ದರು.

ಬಾಬಾ ಆಗಮಿಸಿ ನಮ್ಮನ್ನೆಲ್ಲ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ನಂಬಿಕೊಂಡ ಇಡೀ ಕುಟುಂಬ, ಮನೆಯ ಯಜಮಾನ ತುಕಾರಾಮ ನೇತೃತ್ವದಲ್ಲಿ ಈ ಸಾಮೂಹಿಕ ದೇಹತ್ಯಾಗಕ್ಕೆ ಮುಂದಾಗಿತ್ತು.

ಆಶ್ರಮದ ಚಿಂತನೆಗಳಿಂದ ಪ್ರಭಾವಿತರಾದ ಕುಟುಂಬಸ್ಥರು ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ 6, 7, 8 ಮೂರು ದಿನಗಳ ಕಾಲ ಭಜನೆ, ಪಾರ್ಥನೆಗಳ ಮೂಲಕ ಉಪವಾಸ ವ್ರತ ಮಾಡಲು ನಿಶ್ಚಯಿಸಿದ್ದರು. ಸೆಪ್ಟೆಂಬರ್ 8ರಂದು ಪರಮಾತ್ಮನ ಅವತಾರದಲ್ಲಿ ಬಂದು ತಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ ಎಂದು ಕುಟುಂಬ ಶರೀರ ತ್ಯಾಗಕ್ಕೆ ಮುಂದಾಗಿತ್ತು.

ಪುಣೆ ಹಾಗೂ ಉತ್ತರ ಪ್ರದೇಶ ಮೂಲದ ಭಕ್ತರೂ ಸಹ ಸೇರಿದಂತೆ ಒಟ್ಟು 21 ಜನರು ಶರೀರ ತ್ಯಾಗಕ್ಕೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ಕಳೆದ ಆರು ವರ್ಷಗಳ ಹಿಂದೆ ತುಕಾರಾಮ ಈರಕರ ಮುಂಬೈನಲ್ಲಿ ಆಟೋ ಓಡಿಸುತ್ತ ಜೀವನ ಸಾಗಿಸುತ್ತಿದ್ದರು. ಈ ವೇಳೆ, ಒಂದು ದಿನ ಯುವತಿಯೋರ್ವಳು ಪು‌ಸ್ತಕವೊಂದನ್ನು ತುಕಾರಾಮ ಅವರಿಗೆ ನೀಡಿದ್ದಳಂತೆ. ಬಳಿಕ ಆ ಪುಸ್ತಕದಲ್ಲಿನ ವಿಚಾರಗಳಿಂದ ಪ್ರೇರಿತರಾಗಿ, ಅದರಲ್ಲಿನ ಆಚರಣೆಗಳ ಮೊರೆ ಹೋಗಿ ಇಡೀ ಕುಟುಂಬದವರು ಆಶ್ರಮದ ಅನುಯಾಯಿಗಳಾಗಿದ್ದರು.

ಬಾಬಾನಿಂದ ಆನ್ಲೈನ್ ದೀಕ್ಷೆ ಪಡೆದು, ಮೂಲ ಸ್ಥಾನ ಹರಿಯಾಣಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ಬಳಿಕ ಆಶ್ರಮದವರ ಚಿಂತನೆಗಳಿಂದ ಪ್ರಭಾವಿತರಾಗಿ ಈರಕರ ಕುಟುಂಬ ಸಮಾಜವೇ ಬೆಚ್ಚಿ ಬೀಳುವ ನಿರ್ಧಾರಕ್ಕೆ ಬಂದಿತ್ತು.

ಇದೀಗ ಎಲ್ಲರ ಮನವೊಲಿಕೆ ಹಿನ್ನೆಲೆಯಲ್ಲಿ ತುಕಾರಾಮ ಈರಕರ ಕುಟುಂಬ ಜೀವಕ್ಕೆ ಯಾವುದೇ ಹಾನಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಈ ವಿಚಾರ ತಿಳಿದು, ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ, ಅಥಣಿ ತಹಸೀಲ್ದಾರ್ ಸಿದರಾಯ ಬೋಸಗಿ, ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ, ಸಿಪಿಐ ಸಂತೋಷ್ ಹಳ್ಳೂರ ಹಾಗೂ ಕವಲಗುಡ್ಡ ಆಶ್ರಮದ ಅಮರೇಶ್ವರ ಮಹಾರಾಜರು ಸ್ಥಳಕ್ಕಾಗಮಿಸಿ ಈರಕರ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಮ್ಮ ಆಚರಣೆ ಮೌಢ್ಯದಂತಿದೆ. ದೇಹ ತ್ಯಾಗದ ನಿರ್ಧಾರ ಸೂಕ್ತವಲ್ಲ, ಇದರಿಂದ ಈಗಲೇ ಹಿಂದೆ ಸರಿದು, ಸುಖವಾಗಿ ಬಾಳಿ ಎಂದು ಅಧಿಕಾರಿಗಳು ತಿಳಿ ಹೇಳಿದ್ದರು. ಅದರಂತೆಯೇ, ಈರಕರ ಕುಟುಂಬ ಸದಸ್ಯರಾದ ತುಕಾರಾಮ, ಹೆಂಡತಿ ಸಾವಿತ್ರಿ, ಮಗ ರಮೇಶ್ ಹಾಗೂ ಸೊಸೆ ವೈಷ್ಣವಿ ಇವರೆಲ್ಲ ಸೆಪ್ಟೆಂಬರ್ 8ರ ಕಾರ್ಯಕ್ರಮ ರದ್ದುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಆದರೂ ಈರಕರ ಕುಟುಂಬದ ಚಲನವಲನಗಳ ಮೇಲೆ ನಿಗಾ ಇಡಲು ಅಥಣಿ ಪೊಲೀಸ್ ಠಾಣೆಯಿಂದ ಓರ್ವ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಮನೆಯಲ್ಲಿ ಈ ಆಚರಣೆಗಾಗಿಯೇ ವಿಶೇಷ ಬೆಡ್, ಕುಡಿಯಲು ನೀರು ಹಾಗೂ ನಿರಂತರವಾಗಿ ತುಪ್ಪದ ದೀಪ ಉರಿಯುವಂತೆ ತುಕಾರಾಮ ಈರಕರ ಕುಟುಂಬ ನೋಡಿಕೊಳ್ಳುತ್ತಿರುವುದು ಕಂಡುಬಂದಿತ್ತು.

ಪ್ರತಿದಿನ ಮೂರು ಬಾರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮನೆಯ ಪಡಸಾಲೆಯಲ್ಲಿ ಫೋಟೋ ಅಳವಡಿಸಿ ಪಕ್ಕದಲ್ಲಿ ಕುರ್ಚಿ ಇಟ್ಟು ಪೂಜಿಸುತ್ತಿರುವುದು ಬೆಳಕಿಗೆ ಬಂದಿದೆ.

ತುಕಾರಾಮ ಈರಕರ ಈ ಕುರಿತು ಮಾತನಾಡಿ, ನಾವು ಪೂರ್ವ ನಿರ್ಧಾರಿತವಾಗಿದ್ದ ಸೆಪ್ಟೆಂಬರ್ 8ರ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೇವೆ. ತಾಲೂಕು ಆಡಳಿತದ ಎಲ್ಲ ಅಧಿಕಾರಿಗಳು ನನ್ನ ಮನೆಗೆ ಆಗಮಿಸಿ, ನಾವು ಕೈಗೊಂಡ ನಿರ್ಧಾರ ಸೂಕ್ತವಲ್ಲ ಎಂದು ತಿಳಿಹೇಳಿದ್ದಾರೆ. ಹೀಗಾಗಿ, ನಾವು ಯಾವುದೇ ಶರೀರ ತ್ಯಾಗ ಮಾಡುವುದಿಲ್ಲ. ನಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದೇವೆ. ಅಧಿಕಾರಿಗಳ ಸೂಚನೆಯಂತೆ ಹೊರರಾಜ್ಯದ ಭಕ್ತರನ್ನು ಅವರ ಊರಿಗೆ ಕಳುಹಿಸಿದ್ದೇವೆ. ದಯವಿಟ್ಟು ನಮ್ಮ ಮನೆಗೆ ಬಂದು ಮಾನಸಿಕ ಹಿಂಸೆ ನೀಡಬೇಡಿ ಎಂದು ಮನವಿ ಮಾಡಿದರು.

ನಿಮಗೆ ಅತಿಯಾದ ಸಿಟ್ಟು ಬರುತ್ತಾ?; ಹಾಗಾದ್ರೆ ಜಸ್ಟ್ ಈ ರೀತಿ ಮಾಡಿ

ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು?; ತಡವಾಗಿ ಎದ್ದರೆ ಏನಾಗುತ್ತೆ?

TAGGED:Belief in going to Kailash: Family of four ready to sacrifice their bodiesstopped by authorities
Share This Article
Facebook Twitter Copy Link Print
Previous Article 5 ದಿನಗಳ ಕಾಲ ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ!
Next Article Viral video… ಏಯ್, ಕೆಂಪು ಸುಂದರಿ,‌ ನನ್ ಜತೆ ಬರ್ತೀಯಾ… 6 ವರ್ಷದ ಬಾಲಕನ ಮಾತು‌ ಕೇಳಿ ಯುವತಿ ತಬ್ಬಿಬ್ಬು! ಆಮೇಲೇನಾಯ್ತು, ವಿಡಿಯೋ ನೋಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?