newsics.com
ಹಿಂದಿನ ಜೀವನ ಪದ್ಧತಿ ಈಗಿಲ್ಲ. ಈಗ ಹಲವರಿಗೆ ಹಗಲು, ರಾತ್ರಿಯೆಂಬುದರ ಪರಿವೆಯೇ ಇಲ್ಲ. ಮೊದಲಿನ ಹಾಗೆ ಮುಂಚೆ ಮಲಗಿ ಮುಂಚೆ ಏಳುವ ರೂಢಿ ಈಗಿಲ್ಲ. ಆದ್ದರಿಂದಲೇ ರಾತ್ರಿ 12ರ ಬಳಿಕ ಯಾರು ಮಲಗುತ್ತಾರೋ, ಅವರಿಗೆ 6 ಸಮಸ್ಯೆಗಳು ಕಾಡುತ್ತವೆಯಂತೆ.
ತಡವಾಗಿ ಮಲಗುವುದರಿಂದ ಡಿಪ್ರೆಶನ್ ಸಾಧ್ಯತೆ:
ರಾತ್ರಿ ತಡವಾಗಿ ಮಲಗುವುದರಿಂದ ನಾವು ಬಹುಬೇಗ ಡಿಪ್ರೆಶನ್‌ಗೆ ಹೋಗುತ್ತೇವೆ. ಎಲ್ಲಾ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ಬುದ್ಧಿ ಹೇಳಿದರೂ ಅಳು ಬಂದಂತಾಗುತ್ತದೆ. ಯಾವುದರಲ್ಲೂ ಆಸಕ್ತಿ ಇರುವುದಿಲ್ಲ.
ಏಕಾಗ್ರತೆ ತಪ್ಪುತ್ತದೆ:
ರಾತ್ರಿ ತಡವಾಗಿ ಮಲಗುವುದರಿಂದ ಏಕಾಗ್ರತೆ ತಪ್ಪುತ್ತದೆ. ನಾವು ಮಾಡುವ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಓದಿನ ಮೇಲಾಗಲೀ, ಕೆಲಸದ ಮೇಲಾಗಲೀ, ನಿಗಾ ವಹಿಸಲು ಸಾಧ್ಯವಾಗುವುದಿಲ್ಲ.
ಕೋಪ ಹೆಚ್ಚುತ್ತದೆ:
ತಡವಾಗಿ ಮಲಗುವುದರಿಂದ ಕೋಪ ಹೆಚ್ಚಾಗುತ್ತದೆ. ಏಕೆಂದರೆ, ತಡವಾಗಿ ಮಲಗುವುದರಿಂದ ನಮ್ಮ ಮಾತಿನ ಮೇಲೆ ನಮಗೆ ನಿಗಾ ಇರುವುದಿಲ್ಲ. ಏಕೆಂದರೆ, ನಮ್ಮ ಜೀವನದಲ್ಲಿ ಶಿಸ್ತು ತಪ್ಪಿರುತ್ತದೆ. ಹಾಗಾಗಿ ನಮ್ಮ ನಡವಳಿಕೆಯಲ್ಲಿ ಬದಲಾವಣೆ ಆಗುತ್ತದೆ.
ಡಿಸಿಶನ್ ಮೇಕಿಂಗ್ ಪವರ್ ಕ್ಷೀಣಿಸುತ್ತದೆ:
ಸರಿಯಾಗಿ ನಿದ್ದೆಯಾಗದಿದ್ದಲ್ಲಿ ನಮ್ಮ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಆಗ ನಮ್ಮಲ್ಲಿನ ಡಿಸಿಶನ್ ಮೇಕಿಂಗ್ ಪವರ್ ಅಂದ್ರೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಬುದ್ಧಿಶಕ್ತಿಯೂ ಕ್ಷೀಣಿಸುತ್ತದೆ.
ಸೋಮಾರಿತನ/ ಆಲಸ್ಯ:
ನೀವು ರಾತ್ರಿ ತಡವಾಗಿ ಮಲಗಿದಾಗ, ಬೆಳಗ್ಗೆ ಎದ್ದಾಗಲೂ ನಿಮಗೆ ಫ್ರೆಶ್ ಎನ್ನಿಸುವುದಿಲ್ಲ. ಬದಲಾಗಿ ನೀವು ಇಡೀ ದಿನ ಆಲಸ್ಯಭರಿತರಾಗಿಯೇ ಇರುತ್ತೀರಿ. ಯಾವ ಕೆಲಸ ಮಾಡಲೂ ನಿಮಗೆ ಮನಸ್ಸಾಗುವುದಿಲ್ಲ.
ನೆನಪಿನ ಶಕ್ತಿ ಕ್ಷೀಣಿಸುತ್ತದೆ:
ಯಾರು ರಾತ್ರಿ ತಡವಾಗಿ ಮಲಗುತ್ತಾರೋ, ಅವರಿಗೆ ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಸಣ್ಣ ಸಣ್ಣ ವಿಷಯವನ್ನೂ ಅವರು ಮರೆಯುತ್ತಾರೆ.
Morning Tips: ಬೆಳಗ್ಗೆ ಬೇಗ ಏಳೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?