newsics.com
ಇಂದಿನ ವೇಗದ ಜೀವನದಲ್ಲಿ, ರಾತ್ರಿಯಲ್ಲಿ ಸಮಯಕ್ಕೆ ಸರಿಯಾಗಿ ಮಲಗಲು ಮತ್ತು ಬೆಳಿಗ್ಗೆ ಬೇಗನೆ ಎದ್ದೇಳಲು ಪ್ರತಿಯೊಬ್ಬರು ಕಷ್ಟಪಡ್ತಾರೆ. ಹೆಚ್ಚಾಗಿ ನಾವು ತಡವಾಗಿ ಮಲಗಿ, ಆಫೀಸ್ ಗೆ ಇನ್ನೇನು ಹೋಗಬೇಕು ಅನ್ನೋವಷ್ಟರಲ್ಲಿ ಎದ್ದು, ಎಲ್ಲಾ ಕೆಲಸ ನಿಮಿಷಗಳಲ್ಲಿ ಮುಗಿಸಿ, ಆಫೀಸ್ ಗೆ ಓಡಿ ಹೋಗುತ್ತೇವೆ. ಇದರ ಬದಲು ರಾತ್ರಿ ಬೇಗನೆ ಮಲಗಿ ಬೆಳಗೆ ಬೇಗ ಎದ್ದೇಳೋದು ಎಷ್ಟೊಂದು ಉತ್ತಮ ಗೊತ್ತಾ?
ನಿದ್ರೆಯ ಗುಣಮಟ್ಟ
ಬೆಳಗ್ಗೆ ಬೇಗನೆ ಏಳುವುದರಿಂದ ಸಿರ್ಕಾಡಿಯನ್ ಲಯವು (ದಿನಚರ್ಯೆಯ ಲಯ) ಸಕ್ರಿಯಗೊಳ್ಳುತ್ತದೆ, ಇದು ರಾತ್ರಿಯಲ್ಲಿ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಈ ಎರಡೂ ಅಭ್ಯಾಸಗಳು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಒತ್ತಡ, ಆತಂಕ ನಿವಾರಣೆ
ಬೆಳಗ್ಗೆ ಬೇಗ ಏಳುವುದರಿಂದ ಕಾರ್ಟಿಸೋಲ್ ಮಟ್ಟ ಕಡಿಮೆಯಾಗುತ್ತದೆ. ಇದು ನಿಮಗೆ ಶಾಂತವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ. ಬೆಳಗ್ಗೆ ಧ್ಯಾನ ಅಥವಾ ಮನಸ್ಸಿನ ನಿಯಂತ್ರಣದಂತಹ ಚಟುವಟಿಕೆಗಳನ್ನು ಅಭ್ಯಾಸ ಮಾಡುವುದರಿಂದ ಆತಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ವ್ಯಾಯಾಮಕ್ಕೆ ಹೆಚ್ಚು ಸಮಯ ದೊರಕುತ್ತದೆ
ಬೆಳಗ್ಗೆ ಬೇಗ ಎದ್ದು ನೋಡಿ. ಏನಾದರೂ ಚಟುವಟಿಕೆಯಲ್ಲಿ ನಿರತರಾಗಬೇಕೆನಿಸುತ್ತದೆ. ವ್ಯಾಯಾಮ ಮಾಡಬೇಕೆನಿಸುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡುವವರಿಗೆ ಹೆಚ್ಚು ಸಮಯ ದೊರಕುತ್ತದೆ. ಮನೆ ಹತ್ತಿರದ ಪಾರ್ಕಿಗೂ ವಾಕ್ ಹೋಗಬಹುದು.
ಆರೋಗ್ಯಕಾರಿ ಚರ್ಮ
ತಡವಾಗಿ ಎದ್ದರೆ ನಮ್ಮ ಚರ್ಮದ ಆರೋಗ್ಯವೂ ಮಂಕಾಗಬಹುದಂತೆ. ಸುಕ್ಕುಗಳು ಹೆಚ್ಚಾಗಬಹುದಂತೆ. ಒಳ್ಳೆಯ ನಿದ್ದೆಯ ಬಳಿಕ ಬೆಳಗ್ಗೆ ಬೇಗ ಎದ್ದರೆ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಮುಂಜಾನೆ ಸೂರ್ಯನ ಕಿರಣಗಳು ಮೈಗೆ ಸೋಂಕಿದರೆ ಉತ್ತಮ.
ಕಣ್ಣಿನ ಸುತ್ತಲಿನ ಕಪ್ಪು ಕಲೆ ಕಡಿಮೆಯಾಗುತ್ತದೆ
ಬೆಳಗ್ಗೆ ಅರೆ ನಿದ್ದೆಯಲ್ಲಿ ಹಾಸಿಗೆಯಲ್ಲಿ ಹೊರಳಾಡುತ್ತ ಸಮಯ ವ್ಯರ್ಥ ಮಾಡುವುದಕ್ಕಿಂತ, ರಾತ್ರಿಯಿಡಿ ಅರೆ ಮಂಪರಿನಲ್ಲಿ ಬಿದ್ದುಕೊಳ್ಳುವುದಕ್ಕಿಂತ ಪ್ರತಿನಿತ್ಯ ಶಿಸ್ತಿನಿಂದ ಬೆಳಗ್ಗೆ ಬೇಗ ಎದ್ದೇಳುವ ಅಭ್ಯಾಸ ಮಾಡಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಕಪ್ಪಗಾಗುವುದು ಕಡಿಮೆಯಾಗುತ್ತದೆ.
https://www.newsics.com/2025/08/19/bangalore-is-making-me-shiver-rain-cold-wind-cloudy-weather/