newsics.com
ಆಟೋ ಚಾಲಕರಲ್ಲಿ ಪುರುಷರದ್ದೇ ಪ್ರಾಬಲ್ಯ. ಈಗೀಗ ಮಹಿಳೆಯರೂ ಆಟೋ ಓಡಿಸಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಮಳೆ, ಗಾಳಿ, ಚಳಿಯ ನಡುವೆಯೂ ಆಟೋ ಓಡಿಸುವ ಯುವತಿಯೊಬ್ಬಳು ತನ್ನ ಧೈರ್ಯ, ಬದ್ಧತೆ ಹಾಗೂ ಚಾಲನಾ ಪ್ರೀತಿಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದಾರೆ.
ಕಾರು ಖರೀದಿಸುವಷ್ಟು ದುಡ್ಡಿಲ್ಲದೆ, ಆಟೋ ಖರೀದಿಸಿದ್ದು, ಇದೀಗ ಆಟೋ ಓಡಿಸುವುದರಲ್ಲಿಯೇ ಖುಷಿಯಾಗಿದ್ದೀನಿ ಎಂದು ಹೇಳುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಆಕೆಯ ದೃಢ ನಿರ್ಧಾರ ಹಾಗೂ ಸಕಾರಾತ್ಮಕ ಚಿಂತನೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಆಟೋವೊಂದನ್ನು ಬುಕ್ ಮಾಡಿದ್ದ ಬೆಂಗಳೂರಿನ ನಿವಾಸಿ ತಮನ್ನಾ ತನ್ವೀರ್ ಅವರಿಗೆ ಮಹಿಳಾ ಆಟೋ ಡ್ರೈವರ್ ನೋಡಿ ಅಚ್ಚರಿಗೊಂಡಿದ್ದು, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿದ್ಯಾವಂತೆ ಹಾಗೂ ಇಂಗ್ಲೀಷ್‌ನಲ್ಲಿ ಸ್ಪಷ್ಟತೆ ಇದ್ದರೂ ಯಾಕೆ ಆಟೋ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾರೆ ಎಂಬುದನ್ನು ಚಾಲಕಿ ಸಫುರಾ ವಿವರಿಸಿದ್ದಾರೆ.
ಡ್ರೈವಿಂಗ್ ಇಷ್ಟಪಡುತ್ತೇನೆ. ಆಟೋ, ಕಾರು, ಬೈಕ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ಓಡಿಸುತ್ತೇನೆ. ಕಾರು ಖರೀದಿಸುವಷ್ಟು ದುಡ್ಡಿಲ್ಲ. ಹಾಗಾಗಿ ಆಟೋ ಓಡಿಸುತ್ತಿದ್ದು, ಇದರಲ್ಲಿ ಖುಷಿಯಿದೆ. ಈ ಕೆಲಸದಲ್ಲಿ ಯಾವುದೇ ಒತ್ತಡ ಇಲ್ಲ. ಅದೇ ಉತ್ಸಾಹ ಹಾಗೂ ಸಂತೋಷದಿಂದ ಪ್ರತಿದಿನ ಕೆಲಸ ಮಾಡುತ್ತೇನೆ. ಮೊದಲಿಗೆ ಭಯಪಡುತ್ತಿದ್ದ ನನ್ನ ತಾಯಿ, ಈಗ ನೆಮ್ಮದಿಯಿಂದ ಇದ್ದಾರೆ ಎಂದು ಹೇಳುತ್ತಾರೆ.
https://www.instagram.com/reel/DNfVXv-ynLL/?igsh=ajJtZWt2bHQ0Z2Mw
Morning Tips: ಬೆಳಗ್ಗೆ ಬೇಗ ಏಳೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್