newsics.com
ಮಂಡ್ಯ: ದೇವರ ಕಾರ್ಯಕ್ಕೆಂದು ತೆರಳಿದ್ದ ಇಬ್ಬರು ಯುವತಿಯರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮುತ್ತತ್ತಿಯಲ್ಲಿ ಶನಿವಾರ ನಡೆದಿದೆ.
ಕನಕಪುರ ತಾಲೂಕಿನ ಗಾಣಾಳು ಗ್ರಾಮದ ಶೋಭಾ (23) ನದೀಯಾ (19) ಮೃತಪಟ್ಟವರು.
ಮಳವಳಿ ತಾಲೂಕಿನ ಹಲಗೂರಿನ ಮುತ್ತತ್ತಿಯ ಆಂಜನೇಯ ಸ್ವಾಮಿ ದೇವರ ಕಾರ್ಯಕ್ಕೆಂದು ಗಾಣಾಳು ಗ್ರಾಮದ ಸುಮಾರು 50ಕ್ಕೂ ಹೆಚ್ಚು ಮಂದಿ ತೆರಳಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಕೂಡಲೇ ಹಲಗೂರು ಪೊಲೀಸರು ಸ್ಥಳಕ್ಕಾಗಿಮಿಸಿದ್ದು, ಇಬ್ಬರ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಯಾಗ್ರ ಸೇವಿಸಿ ಗಂಡನಿಂದಲೇ ವಿಕೃತ ಕೃತ್ಯ: ಪತಿಯ ಕಾಮಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ
Bridegroom death ಮದುವೆ ಮೆರವಣಿಗೆ ವೇಳೆಯೇ ಹೃದಯಾಘಾತದಿಂದ ಮದುಮಗ ಸಾವು, ವೈರಲ್ ವಿಡಿಯೋ ನೋಡಿ