newsics.com
ತಿರುಪತಿ: ನಾಲ್ಕು ವಿಲ್ಲಾಗಳಿಗೆ ನುಗ್ಗಿದ ಕಳ್ಳರು 1.48 ಕೆಜಿ ಚಿನ್ನಾಭರಣ ದೋಚಿದ್ದಾರೆ.
ತಿರುಪತಿಯಲ್ಲಿ ಸೋಲಾರ್ ಬೇಲಿಯನ್ನು ಕತ್ತರಿಸಿ 80, 81, 82 ಮತ್ತು 83 ಸಂಖ್ಯೆಯ ನಾಲ್ಕು ಮನೆಗಳಿಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ.
ತಿರುಪತಿಯ ಸಿಪಿಆರ್ ವಿಲ್ಲಾದಲ್ಲಿ ಭಾರೀ ಕಳ್ಳತನ ನಡೆದಿದ್ದು, ಕಳ್ಳರು 1.48 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ತಿರುಚನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಲ್ಲಾವೊಂದರಲ್ಲಿ, ನಿವಾಸಿಗಳು ಮಹಡಿಯಲ್ಲಿ ಮಲಗಿದ್ದಾಗ ನೆಲ ಮಹಡಿಯಿಂದ 1 ಕೆಜಿ ಚಿನ್ನವನ್ನು ಕಳವು
ಮಾಡಲಾಗಿದೆ.
ಮತ್ತೊಂದು ವಿಲ್ಲಾದಲ್ಲಿ 48 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾರೆ. ಅತಿಥಿ ಗೃಹಗಳಾಗಿ ಬಳಸಲಾಗುತ್ತಿದ್ದ ಉಳಿದ ಎರಡು ವಿಲ್ಲಾಗಳನ್ನೂ ಒಡೆದು ಹಾಕಲಾಗಿದೆ. ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸರ್ಕಾರಿ ಕಾಲೇಜಿನ ಶೌಚಾಲಯದಲ್ಲೇ ಹೆರಿಗೆ: ಕಸದ ಬುಟ್ಟಿಯಲ್ಲಿ ಶಿಶು ಬಚ್ಚಿಟ್ಟ ವಿದ್ಯಾರ್ಥಿನಿ!
ಲೇಡಿ ಕಾನ್ಸ್‌ಟೇಬಲ್ ಲವ್‌ನಲ್ಲಿ ಬಿದ್ದ ಇನ್ಸ್‌ಪೆಕ್ಟರ್, ದೇವಸ್ಥಾನದಲ್ಲಿ ಮದುವೆ! Video viral
ಪ್ರೇಮಿ ಜೊತೆ ಪರಾರಿಯಾಗಲು ಗಂಡನ ಕಿಡ್ನಿ ಮಾರಿಸಿದ ಪತ್ನಿ… Love story
ಕನ್ನಡ ಬರೆಯಲು ಪರದಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ…Shivaraj Thangadagi