newsics.com
ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿದ್ದಾಗ ಟಾಸ್ಕ್ ವೇಳೆ ಕಾಲಿಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದರು ಗೋಲ್ಡ್ ಸುರೇಶ್. ಹೀಗಾಗಿ ನಾಳೆಯೇ ಅವರ ಕಾಲಿಗೆ ಆಪರೇಷನ್ ಇದೆ. ಅದಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಊಹಿಸದ ರೀತಿಯಲ್ಲಿ ಆ ಡ್ರಮ್ ಅವರ ಕಾಲ ಮೇಲೆ ಬಿದ್ದಿತ್ತು. ತಕ್ಷಣವೇ ಅವರು ನೆಲದಮೇಲೆ ಬಿದ್ದು ಹೊರಳಾಡಿದ್ದರು. ಬಳಿಕ ಆಸ್ಪತ್ರೆಗೂ ಸೇರಿದ್ದರು. ಇದೀಗ ಮತ್ತೆ ಅವರಿಗೆ ಆಪರೇಷನ್ ಇದೆ ಎನ್ನಲಾಗಿದೆ.
ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಬಿಟ್ಟು ಹೋಗಿದ್ದರು. ಕ್ಯಾಪ್ಟನ್ ಆಗಿ ಮನೆಯಲ್ಲಿ ಖುಷಿಯಾಗಿದ್ದ ಗೋಲ್ಡ್ ಸುರೇಶ್‌ಗೆ ಬಿಗ್ ಬಾಸ್ ಏಕಾ ಏಕಿ ಒಂದು ಅನೌನ್ಸ್ ಕೂಡ ಮಾಡಿದ್ದರು. ಅಂದು ದಿಢೀರ್ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದರು. ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ ಎಂದು ಅನೌನ್ಸ್ಮೆಂಟ್ ಮಾಡಿದ್ದರು.