newsics.com
ಬೆಂಗಳೂರು: ಏಳನೇ ವೇತನ ಆಯೋಗದ ವರದಿಯಂತೆ ವೇತನ ನೀಡುವಂತೆ ಕೆಎಂಎಫ್ (KMF) ನೌಕರರು ಮತ್ತು ಅಧಿಕಾರಿಗಳು ಒತ್ತಾಯಿಸಿ ನಾಳೆ(ಫೆ.1) ಕರೆ ನೀಡಿದ್ದ ಮುಷ್ಕರವನ್ನು ಮುಂದೂಡಿದ್ದಾರೆ. ಹೀಗಾಗಿ ನಾಳೆ ಎಂದಿನಂತೆ ಹಾಲು, ಮೊಸರು ಲಭ್ಯವಾಗಲಿದೆ.
ಆರ್ಥಿಕ ಹೊರೆ ಕಾರಣ ವೇತನ ಪರಿಷ್ಕರಣೆಗೆ ಕೆಎಂಎಫ್ ಆಡಳಿತ ಮಂಡಳಿ (KMF Board) ಹಿಂದೇಟು ಹಾಕುತ್ತಲೇ ಬಂದಿದೆ. ನೌಕರರು ಅಧಿಕಾರಿಗಳ ಮನವಿಗೆ ಆಡಳಿತ ಮಂಡಳಿ ಸ್ವಂದಿಸದ ಹಿನ್ನೆಲೆಯಲ್ಲಿ ನೌಕರರು, ಅಧಿಕಾರಿಗಳು ನಾಳೆ (ಫೆ.01) ಪ್ರತಿಭಟನೆ (Protest) ನಡೆಸಲು ನಿರ್ಧರಿಸಿದ್ದರು.
ಕೆಎಂಎಫ್ ನೌಕರರ ಸಂಘದ ಗೌರವ ಅಧ್ಯಕ್ಷ, ರವಿ ಕೃಷ್ಣಾ ರೆಡ್ಡಿ ಮಾತನಾಡಿ, ನಾಳಿನ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಂ ಎಫ್ ಅಧಿಕಾರಿಗಳ ಸಂಘವೂ ಮಾಹಿತಿ ನೀಡಿದೆ.
Snehamai Krishna ಸ್ನೇಹಮಯಿ ಕೃಷ್ಣ, ಗಂಗರಾಜು ಫೋಟೋ ಇಟ್ಟು ರಕ್ತಾಭಿಷೇಕ
Sonia Gandhi ರಾಷ್ಟ್ರಪತಿಗಳನ್ನು ‘Poor Lady’ ಎಂದು ಟೀಕಿಸಿ ವಿವಾದ ಸೃಷ್ಟಿಸಿದ ಸೋನಿಯಾ ಗಾಂಧಿ
ಶಾಲೆಯಲ್ಲಿ ಶೌಚಾಲಯದ ಸೀಟ್ ನೆಕ್ಕುವಂತೆ ಒತ್ತಾಯ : ವಿದ್ಯಾರ್ಥಿ ಆತ್ಮಹತ್ಯೆ
Mahakumbh Stampede ಕುಂಭಮೇಳದಲ್ಲಿ ಕಾಲ್ತುಳಿತ ದುರಂತ: ಕರ್ನಾಟಕ ಮೂಲದ ನಾಗಾಸಾಧು ರಾಜನಾಥ್ ಮಹಾರಾಜ್ ಸಾವು