newsics.com
ಮಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳೂರು ಭೇಟಿ ಸಮಯದಲ್ಲಿ ಭಾರೀ ಭದ್ರತಾ ವೈಫಲ್ಯ ಉಂಟಾಗಿದೆ.
ಸ್ಕೂಟರ್ ಸವಾರನೊಬ್ಬ ಮುಖ್ಯಮಂತ್ರಿ ಕಾನ್ವೇಗೆ ನುಗ್ಗಿಸಲು ಹೋಗಿ ರಸ್ತೆ ಮಧ್ಯೆ ಬಿದ್ದ ಘಟನೆ ನಡೆದಿದೆ.
ಶನಿವಾರ ಮಂಗಳೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾಗ ಈ ಘಟನೆ ನಡೆದಿದ್ದು,ಬತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರಿನ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್ ಸವಾರನೊಬ್ಬ ಸಿಎಂ ಕಾನ್ವೇ ತೆರಳುವಾಗ ಸ್ಕೂಟರ್ ನುಗ್ಗಿಸಲು ಯತ್ನಿಸಿದ್ದಾನೆ. ಈ ವೇಳೆ, ಪೊಲೀಸರು ಕಟ್ಟಿದ್ದ ರಸ್ತೆ ನಿರ್ಬಂಧದ ರಿಬ್ಬನ್ಗೆ ಸಿಲುಕಿ ಆಯತಪ್ಪಿ ರಸ್ತೆ ಮೇಲೆ ಸ್ಕೂಟರ್ ಸವಾರ ಬಿದ್ದಿದ್ದಾನೆ.
ಒಂದು ವೇಳೆ ಸ್ಕೂಟರ್ ಸವಾರ ಬೀಳದೆ ಇದ್ದಲ್ಲಿ ನೇರವಾಗಿ ಸಿಎಂ ಕಾನ್ವೇ ಬಳಿ ಸಾಗುತ್ತಿದ್ದ. ಸದ್ಯ ಸಿಎಂ ಭದ್ರತಾಲೋಪದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಎಲೆಕ್ಷನ್
ಮಕ್ಕಳೊಂದಿಗೆ ಕಾಲುವೆಗೆ ಜಿಗಿದ ತಾಯಿ: 4 ಮಕ್ಕಳ ಸಾವು, ಮಹಿಳೆಯ ರಕ್ಷಣೆ
Naga Sadhus ನಡುಗುವ ಚಳಿಯಲ್ಲಿ ನಾಗಾ ಸಾಧುಗಳು ಹೇಗೆ ಬೆತ್ತಲೆಯಾಗಿರುತ್ತಾರೆ?