newsics.com
ಉತ್ತರ ಕೊರಿಯಾದಿಂದ ರಷ್ಯಾ ಪರವಾಗಿ ಹೋರಾಡಲು ಹೋಗಿದ್ದ ಸಾವಿರಾರು ಸೈನಿಕರು ನರಳುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಸುದ್ದಿ ಇದೀಗ ಹೊರ ಬಿದ್ದಿದೆ.
ಹೌದು, ರಷ್ಯಾ ಪರವಾಗಿ ಹೋರಾಟಕ್ಕೆ ಹೋಗಿರುವ ಉತ್ತರ ಕೊರಿಯಾದ 300 ಸೈನಿಕರು ಇಲ್ಲಿಯವರೆಗೂ ಸಾವನ್ನಪ್ಪಿದ್ದಾರೆ. ಸಿಕ್ಕಿಬೀಳುವುದರ ಬದಲು ಈ 300 ಸೈನಿಕರಿಗೆ ಸ್ವತಃ ಸಾವಿಗೆ ಶರಣಾಗಲು ಆದೇಶ ನೀಡಲಾಗಿತ್ತು ಎಂದು ಹೇಳಲಾಗಿದೆ.
ರಷ್ಯಾ ಬಳಿ ಸೈನಿಕರ ಕೊರತೆ ಎದುರಾಗಿದ್ದು, 2022ರಲ್ಲಿ ಶುರುವಾಗಿದ್ದ ಯುದ್ಧ ಈಗಾಗಲೇ 3 ವರ್ಷ ಮುಗಿಸುವ ಹಂತಕ್ಕೆ ಬಂದು ತಲುಪಿದೆ.
ಸದ್ಯ ರಷ್ಯಾ ಪರವಾಗಿ ನಿಂತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸ್ನೇಹದ ನೆನಪಿಗೆ ಅಂತಾ ಹತ್ತಾರು ಸಾವಿರ ಸೈನಿಕರನ್ನು ರಷ್ಯಾ ಪರ ಹೋರಾಡಲು ಕಳುಹಿಸಿದ್ದಾನೆ. ಆದರೆ ಈ ರೀತಿ ರಷ್ಯಾ ಪರವಾಗಿ ಹೋರಾಡಲು ಹೋಗಿರುವ ಉತ್ತರ ಕೊರಿಯಾ ಸೈನಿಕರಿಗೆ ಸರಿಯಾದ ಟ್ರೈನಿಂಗ್ ಇಲ್ಲದ ಕಾರಣ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತಿವೆ.
ರಷ್ಯಾ ಮಿಲಿಟರಿ ಬಳಿ ಇರುವ ಅಸ್ತ್ರ ಒಂದೊಂದಲ್ಲ ರಷ್ಯಾ ತನ್ನಲ್ಲಿ ಇರುವ ಭಯಾನಕ ವೆಪನ್ಸ್ ಹೊರ ತೆಗೆದರೆ ಆಗುವುದೇ ಬೇರೆ. ಯಾಕಂದ್ರೆ ರಷ್ಯಾ ಬಳಿ ಆ ರೀತಿಯ ಅಸ್ತ್ರಗಳು ಕೊಳೆಯುತ್ತಿವೆ ಎಂಬ ಮಾತಿದೆ. ಹೀಗಿದ್ರೂ ಇಷ್ಟು ದಿನ ಸಾಮಾನ್ಯ ಅಸ್ತ್ರವನ್ನೇ ಬಳಸಿ ದಾಳಿ ಮಾಡ್ತಾ ಇರುವ ರಷ್ಯಾ ಸೇನೆ ಸಮಯಕ್ಕಾಗಿ ಕಾಯುತ್ತಿದೆ.