newsics.com
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಡಿಸೆಂಬರ್ 20 ರವರೆಗೆ ನಡೆಯಲಿದೆ.
ಈ ಅಧಿವೇಶನದಲ್ಲಿ ಆಡಳಿತಾರೂಡ ಎನ್ ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಅಧಿವೇಶನದಲ್ಲಿ ಒಟ್ಟು 16 ಮಸೂದೆ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 26 ರಂದು ಸಂವಿಧಾನ ದಿನವಾಗಿ ಆಚರಿಸಲಾಗುವ ಸಂವಿಧಾನ್ ಸದನದ ಸೆಂಟ್ರಲ್ ಹಾಲ್ನಲ್ಲಿ ವಿಶೇಷ ಆಚರಣೆ ನಡೆಯಲಿದೆ ಎಂದು ಸಚಿವ ಕಿರಣ್ ರಿಜಿಜು ಹೇಳಿದರು.
ಸ್ಮರಣಾರ್ಥ ಸಂದರ್ಭದ ಹೊರತಾಗಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮತ್ತು ವಕ್ಫ್ ಆಸ್ತಿ ಕಾಯ್ದೆಗೆ ತಿದ್ದುಪಡಿಗಳು ಸೇರಿದಂತೆ ಹಲವು ವಿವಾದಾತ್ಮಕ ಶಾಸನಾತ್ಮಕ ಪ್ರಸ್ತಾಪಗಳೊಂದಿಗೆ ಸರ್ಕಾರ ಮುಂದುವರಿಯುತ್ತಿರುವುದರಿಂದ ಸಂಸತ್ತಿನಲ್ಲಿ ರಾಜಕೀಯ ವಾತಾವರಣವು ಉಲ್ಬಣಗೊಳ್ಳುವ ನಿರೀಕ್ಷೆಯಿದೆ.
ಮಣಿಪುರ ಗಲಭೆ ವಿಷಯ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ದ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಹೀಗಾಗಿ ಮೊದಲ ದಿನದಿಂದಲೇ ಕಲಾಪಗಳು ಕಾವೇರುವ ನಿರೀಕ್ಷೆಯಿದೆ.
BPL Card Revision ಇಂದಿನಿಂದ ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ, ಹೇಗೆ ನಡೆಯತ್ತೆ ಪರಿಶೀಲನೆ?
Big Boss Kannada 11 | ಅಚ್ಚರಿಯ ಎಲಿಮಿನೇಷನ್, ಬಿಗ್ ಬಾಸ್ ಮನೆಯಿಂದ ಹೊರಬಂದ ನಟ ಧರ್ಮ ಕೀರ್ತಿರಾಜ್
Seasonal Health Tips ಚಳಿಗಾಲದಲ್ಲಿ ಹೆಚ್ಚಿದ ಹೃದಯಾಘಾತ, ಪಾರ್ಶ್ವವಾಯು ಪ್ರಕರಣ: ಇದರಿಂದ ಪಾರಾಗಲು ಹೀಗೆ ಮಾಡಿ
Relationship Tips ಈ ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು, ಮುಜುಗರಪಟ್ಟುಕೊಂಡರೆ ಅಪಾಯ ನಿಶ್ಚಿತ