newsics.com
ಚಳಿಗಾಲ ಆರಂಭವಾಗಿಬಿಟ್ಟಿದೆ. ಈ ಸಮಯದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಪಾರ್ಶ್ವವಾಯು ಹಾಗೂ ಹೃದಯಾಘಾತದಿಂದ ದೂರವಿರಲು ಬೆಚ್ಚಗಿರಿ, ಕ್ರಿಯಾಶೀಲರಾಗಿರಿ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ.
ಈ ಮೊದಲು ಸಾಮಾನ್ಯವಾಗಿ 50 ವರ್ಷದ ನಂತರದಲ್ಲಿ ಹೃದಯಾಘಾತ ಪ್ರಕರಣಗಳು ಕಂಡು ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಲ್ಲಿಯೂ ಈ ಹೃದಯಾಘಾತ ಪ್ರಕರಣಗಳು ಕಂಡು ಬರುತ್ತಿವೆ.
ಅದರಲ್ಲಿಯೂ ಈ ಚಳಿಗಾಲದಲ್ಲಿ ಹೃದ್ರೋಗ ಸಮಸ್ಯೆಗಳು ವೇಗವಾಗಿ ಹೆಚ್ಚಾಗುತ್ತಿದ್ದು ನಮ್ಮ ಜೀವನಶೈಲಿಯಲ್ಲಿ ಹಲವಾರು ರೀತಿಯ ಸುಧಾರಣೆ ಮಾಡಿಕೊಳ್ಳಬೇಕಾಗಿದೆ.
ಕೆಟ್ಟ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಜಂಕ್ ಫುಡ್ ಸೇವನೆಯು ನಿಮ್ಮನ್ನು ನಾನಾ ರೀತಿಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಬಳಿಕ ಇವು ಹೃದಯ ಸಂಬಂಧಿತ ಸಮಸ್ಯೆಗೆ ಕಾರಣವಾಗುತ್ತವೆ. ಅಂದರೆ, ನಿಮ್ಮ ಜೀವನಶೈಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹೀಗಾಗಿ ನೀವು ನಮ್ಮ ಜೀವನಶೈಲಿ ಬದಲಾವಣೆಯೊಂದಿಗೆ ಚಳಿಗಾಲದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ.
ಮೊದಲನೆಯದಾಗಿ, ನೀವು ಪ್ರತಿನಿತ್ಯ ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ಹೆಚ್ಚು ಕಷ್ಟಕರವಾದ ವ್ಯಾಯಾಮಗಳನ್ನು ಮಾಡುವುದು ಮುಖ್ಯವಲ್ಲ. ಆದರೆ ನೀವು ದಿನಕ್ಕೆ ಕನಿಷ್ಠ 8 ರಿಂದ 9 ಸಾವಿರ ಹೆಜ್ಜೆಗಳನ್ನು ನಡೆಯದಿದ್ದರೆ, ಅದು ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದನ್ನು ಮರೆಯಬೇಡಿ. ಪ್ರತಿದಿನ ವ್ಯಾಯಾಮ ಮತ್ತು ವಾಕಿಂಗ್ ಮಾಡುವುದರಿಂದ ತೂಕ ಕಡಿಮೆ ಆಗುತ್ತದೆ. ಜತೆಗೆ ಈ ಅಭ್ಯಾಸ ಹೃದ್ರೋಗ, ಪಾರ್ಶ್ವವಾಯು, ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.
ಬೊಜ್ಜು ಇದು ನೂರಾರು ರೋಗಗಳಿಗೆ ಕಾರಣವಾಗುತ್ತದೆ. ಬೊಜ್ಜು ಮಧುಮೇಹ, ಅಧಿಕ ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ಸಮಯದಲ್ಲಿ ನಿಮ್ಮ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವಿಶೇಷವಾಗಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಅನಗತ್ಯ ತೂಕ ಹೆಚ್ಚಳವಾಗುತ್ತಿದೆ. ಇದು ಮುಂದೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಇರಲಿ.
ನೀವು ಹೊರಗಿನ ಆಹಾರವನ್ನು ಹೆಚ್ಚು ಸೇವಿಸಿದರೆ, ನಿಮ್ಮ ಹೃದಯದ ಆರೋಗ್ಯ ಅಷ್ಟೇ ವೇಗವಾಗಿ ಹಾಳಾಗುತ್ತದೆ. ಕರಿದ ಆಹಾರಗಳು, ಸಾಸೇಜ್‌ಗಳು, ಬೆಣ್ಣೆ ಮತ್ತು ಕೇಕ್‌ಗಳಂತಹ ಕೊಬ್ಬಿನಿಂದ ತಯಾರಾದ ಆಹಾರಗಳು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತವೆ. ಇದು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ನಿರಂತರವಾಗಿ ಕೆಲಸದಲ್ಲಿ ನಿರತರಾಗಬೇಡಿ. ಕೆಲಸದ ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳಿ. ರಜೆ ತೆಗೆದುಕೊಳ್ಳಿ, ಹೊರಗೆ ಹೋಗಿ ಮತ್ತು ನಿಮಗೆ ಇಷ್ಟವಾದದ್ದನ್ನು ಮಾಡಿ. ಹೀಗೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.
Relationship Tips ಈ ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು, ಮುಜುಗರಪಟ್ಟುಕೊಂಡರೆ ಅಪಾಯ ನಿಶ್ಚಿತ
women search on google: ಮದುವೆಯಾದ ನಂತರ ಮಹಿಳೆಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ್ದೇನು?