newsics.com
ಗಂಡ ಹೆಂಡತಿ ನಡುವೆ ಯಾವುದೇ ಮುಚ್ಚು ಮರೆ ಇರಬಾರದು. ಎಲ್ಲಾ ವಿಷಯಗಳನ್ನು ಮುಕ್ತವಾಗಿ ಮಾತನಾಡಿಕೊಳ್ಳಬೇಕು. ಆಗ ಸಂಬಂಧವು ಚೆನ್ನಾಗಿರುವುದು ಎಂದು ಹೇಳುವುದನ್ನು ಕೇಳಿದ್ದೇವೆ. ಅದರಲ್ಲಿಯು ಈ ಸೆಕ್ಸ್ ಲೈಫ್ ನ ವಿಚಾರಗಳನ್ನು ತನ್ನ ಪತಿಯ ಮುಂದೆ ಹೇಳಿಕೊಂಡರೆ ತಪ್ಪಾಗಿ ಭಾವಿಸಿಕೊಳ್ಳುತ್ತಾನೆಯೋ ಎನ್ನುವ ಭಯವಿರುತ್ತದೆ. ಹೀಗಾಗಿ ಲೈಂಗಿಕತೆಗೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಮಾತನಾಡುವುದೇ ಇಲ್ಲ.
- ಮದುವೆಗೂ ಮೊದಲು ತನ್ನ ಪ್ರಿಯಕರನ ಜತೆ ದೈಹಿಕ ಸಂಪರ್ಕ ನಡೆಸಿದ್ದರೆ ಆ ಬಗ್ಗೆ ಅಪ್ಪಿ ತಪ್ಪಿಯೂ ಗಂಡನೊಂದಿಗೆ ಹೇಳಿಕೊಳ್ಳುವುದಿಲ್ಲ. ಪತಿಗೆ ಈ ವಿಷಯ ತಿಳಿದರೆ ನನ್ನನ್ನು ದೂರ ಮಾಡಿದರೆ ಎನ್ನುವ ಭಯವು ಆಕೆಯನ್ನು ಕಾಡುತ್ತಿರುತ್ತದೆ. ಈ ಗುಟ್ಟು ರಟ್ಟಾದರೆ ತಮ್ಮಿಬ್ಬರ ಸಂಬಂಧವು ಹಾಳಾಗಬಹುದು. ಅದಲ್ಲದೇ ಇದೇ ವಿಚಾರವು ಸಂಬಂಧದಲ್ಲಿ ಜಗಳಗಳನ್ನು ಉಂಟುಮಾಡಬಹುದು ಎನ್ನುವ ಕಾರಣಕ್ಕೆ ರಹಸ್ಯವನ್ನು ಕಾಪಾಡುತ್ತಾಳೆ.
- ಪ್ರತಿ ಮಹಿಳೆಯೂ ಹಸ್ತಮೈಥುನದ ಬಗ್ಗೆ ತಮ್ಮ ಪತಿಗೆ ಹೇಳಲು ಹಿಂಜರಿಯುತ್ತಾಳೆ. ಮಹಿಳೆಯರು ಹಸ್ತಮೈಥುನ ಮಾಡುವುದನ್ನು ಸಮಾಜವು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಈ ವಿಷಯ ತಿಳಿದರೆ ಗಂಡನ ಪ್ರತಿಕ್ರಿಯೆ ಹೇಗಿರಬಹುದು ಎನ್ನುವ ಅಳುಕಿರುತ್ತದೆ. ಅದಲ್ಲದೇ, ಗಂಡ ಈ ವಿಚಾರವನ್ನು ಮಾತನಾಡಿದಾಗಲೂ ಮಾತನ್ನು ಬೇರೆಡೆಗೆ ತಿರುಗಿಸುವುದು ಇಲ್ಲವಾದರೆ ಇದನ್ನು ರಹಸ್ಯವಾಗಿಟ್ಟುಕೊಳ್ಳಲು ಬಯಸುತ್ತಾರೆ.
- ಪತಿಯು ತನಗೆ ದೈಹಿಕವಾಗಿ ಸುಖ ನೀಡಿದ್ದಾನೆಯೇ ಎನ್ನುವ ಬಗ್ಗೆ ಬಾಯಿಬಿಟ್ಟು ಹೇಳುವುದಿಲ್ಲ. ಕೆಲವೊಮ್ಮೆ ಪುರುಷರು ದೈಹಿಕ ಕ್ರಿಯೆಯಲ್ಲಿ ತೊಡಗಿಕೊಂಡ ವೇಳೆಯಲ್ಲಿ ಅಕಾಲಿಕ ಸ್ಖಲನ ಅಥವಾ ನಿಮಿರುವಿಕೆಯಂತಹ ಸಮಸ್ಯೆಯನ್ನು ಎದುರಿಸಬಹುದು. ಈ ಬಗ್ಗೆ ಪತ್ನಿಗೆ ಅರಿವಿಗೆ ಬಂದರೂ ಸುಮ್ಮನಿರುತ್ತಾಳೆ. ತನಗೆ ದೈಹಿಕವಾದ ಸುಖ ಸಿಕ್ಕಿಲ್ಲ ಎಂದು ಹೇಳಿಕೊಂಡರೆ ಪತಿಯು ಅದರ ಬಗ್ಗೆಯೇ ಯೋಚಿಸಿ ಕೊರಗುತ್ತಾರೆ ಎಂದು ಅಲೋಚಿಸುತ್ತಾಳೆ. ಹೀಗಾಗಿ ಇಂತಹ ಸಮಸ್ಯೆಗಳು ಆಗದಂತೆ ತಡೆಯಲು ಈ ಬಗ್ಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.
- ಸೆಕ್ಸ್ ಲೈಫ್ನಲ್ಲಿ ತಮಗಿರುವ ಆಸೆಗಳ ಬಗ್ಗೆ ಬಾಯಿಬಿಟ್ಟು ಪತಿಯ ಮುಂದೆ ಹೇಳಿಕೊಳ್ಳುವುದಿಲ್ಲ. ಹೆಣ್ಣು ತನ್ನ ಲೈಂಗಿಕ ಆಸೆಗಳನ್ನು ಮತ್ತು ಲೈಂಗಿಕ ಡ್ರೈವ್ ಅನ್ನು ರಹಸ್ಯವಾಗಿಟ್ಟುಕೊಳ್ಳುತ್ತಾಳೆ. ಹಾಸಿಗೆಯಲ್ಲಿ ತನ್ನ ಪತಿಯು ತನ್ನ ಜತೆಗೆ ಹೇಗೆ ಇರಬೇಕೆಂದು ನೇರವಾಗಿ ಹೇಳಿದರೆ ಅಂತಹ ಮಹಿಳೆಯರನ್ನು ಸಮಾಜವು ಕೆಟ್ಟದಾಗಿ ತಿಳಿದುಕೊಂಡುಬಿಡುತ್ತದೆ ಎನ್ನುವುದಿರುತ್ತದೆ. ಹೀಗಾಗಿ ಲೈಂಗಿಕ ಜೀವನದ ಈ ವಿಷಯಗಳನ್ನು ತನ್ನ ಸಂಗಾತಿಯ ಜತೆಗೆ ಹಂಚಿಕೊಳ್ಳುವುದೇ ಇಲ್ಲ.
Relationship ಹುಡುಗಿಯರ ವೀಕ್ನೆಸ್ ಪಾರ್ಟ್ ಇದೇ; ಹೆಣ್ಮಕ್ಕಳು ಕರಗೋದು ಇದಕ್ಕೆ