newsics.com
ಪ್ರಣಯ ವಿಚಾರಕ್ಕೆ ಬಂದರೆ, ಪುರುಷರಿಗಿಂತ ಮಹಿಳೆಯರು ಹಿಂದೆ ಎಂದು ಹೇಳಲಾಗುತ್ತದೆ. ಆದರೆ, ಇದು ತಪ್ಪು. ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗಲು ಹಾರ್ಮೋನ್ ನಲ್ಲಾಗುವ ಬದಲಾವಣೆ ಸೇರಿದಂತೆ ಮಾನಸಿಕ ಸ್ಥಿತಿ ಕೂಡ ಕಾರಣವಾಗಿದೆ.
ವಾಸ್ತವವಾಗಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿ ಮತ್ತು ಗಟ್ಟಿಯಾಗಿರಬೇಕೆಂದರೆ ಆಗಾಗ ಲೈಂಗಿಕ ಸಂಪರ್ಕ ಹೊಂದುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಪತಿ ಮಿಲನ ಹೊಂದಲು ಬಯಸಿದಾಗ ಕೆಲ ಕಾರಣಗಳಿಂದ ಪತ್ನಿ ಹಿಂಜರಿಯುತ್ತಾರೆ. ಇದೇ ರೀತಿ ಪತ್ನಿ ಇಷ್ಟಪಟ್ಟಾಗ ಪತಿ ದೂರ ಸರಿಯುತ್ತಾರೆ. ಹಾಗಾಗಿ ಇಂತಹ ವೇಳೆ ಇಲ್ಲಿ ಹೇಳಲಾಗಿರುವ ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಬದಲಾಯಿಸಿ ದೈಹಿಕ ಸಂಪರ್ಕ ಹೊಂದಬಹುದು.
ಬಹುತೇಕ ಮಹಿಳೆಯರಿಗೆ ತಮ್ಮ ಸಂಗಾತಿ ರೊಮ್ಯಾಂಟಿಕ್ ಹಾಗೂ ಪೋಲಿ ಮಾತುಗಳನ್ನು ಕಿವಿಯಲ್ಲಿ ಪಿಸುಗುಟ್ಟಿದ ನಂತರ ಮೂಡ್ ಬರುತ್ತದೆ. ಹೀಗಾಗಿ ನಿಮ್ಮ ಸಂಗಾತಿಗೆ ಲೈಂಗಿಕ ಆಸಕ್ತಿ ತರಿಸಲು ಈ ವಿಧಾನವನ್ನು ಅನುಸರಿಸಬಹುದು.
ಚುಂಬನ ಕೇವಲ ದೇಹದಲ್ಲಿ ಆಪ್ಯಾಯಮಾನ ಭಾವನೆಯನ್ನು ಮೂಡಿಸುವುದು ಮಾತ್ರವಲ್ಲ, ಮನಸ್ಸನ್ನೂ ಪ್ರಫುಲ್ಲಗೊಳಿಸುತ್ತದೆ. ಸಂಗಾತಿ ಜತೆ ಇದ್ದಾಗ ಮೂಡ್ ಆಫ್ ಆಗಿದ್ರೆ ಕಿಸ್ ಮಾಡಿ ಸಾಕು. ಇದರಿಂದಲೂ ನಿಮ್ಮ ಸಂಗಾತಿಯ ಮೂಡ್ ಬದಲಾಗುತ್ತದೆ. ಇಷ್ಟೇ ಅಲ್ಲ, ಸಂಗಾತಿಯ ಪಾದಗಳು ಅಥವಾ ತೊಡೆಗಳು, ಬೆನ್ನು, ಗಂಟಲು ಸಹ ಲೈಂಗಿಕ ಉತ್ಸಾಹವನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಎಲ್ಲರಿಗೂ ದೇಹದಲ್ಲಿ ಒಂದೊಂದು ವೀಕ್ನೆಸ್ ಪಾರ್ಟ್ ಇದ್ದೇ ಇರುತ್ತದೆ. ಅದನ್ನು ಯಾರಾದರೂ ಸ್ಪರ್ಶಿಸಿದಾಗ ತಕ್ಷಣ ರೋಮಾಂಚನ ಉಂಟಾಗುತ್ತದೆ. ಇದು ಕೆಲವರಲ್ಲಿ ಬೆನ್ನು, ಕಾಲು, ಕುತ್ತಿಗೆ ಅಥವಾ ಮೊಣಕಾಲುಗಳಾಗಿರಬಹುದು. ಇವುಗಳಲ್ಲಿ ನಿಮ್ಮ ಹುಡುಗಿಯ ವೀಕ್ನೆಸ್ ಪಾರ್ಟ್ ತಿಳಿದುಕೊಂಡು ಸ್ಪರ್ಶಿಸಿ.
Relationship ಹುಡುಗಿಯರ ವೀಕ್ನೆಸ್ ಪಾರ್ಟ್ ಇದೇ; ಹೆಣ್ಮಕ್ಕಳು ಕರಗೋದು ಇದಕ್ಕೆ