newsics.com
ಮುಂಬೈ: ಉದ್ಯಮ ವಲಯದ ದಿಗ್ಗಜ ರತನ್ ಟಾಟಾ ನಿಧನರಾಗಿ ಒಂದು ತಿಂಗಳೂ ಕಳೆದಿಲ್ಲ. ಆಗಲೇ ಟಾಟಾ ಟ್ರಸ್ಟ್‌ನ ಮ್ಯಾನೇಜ್‌ಮೆಂಟ್‌ನಲ್ಲಿ ದೊಡ್ಡ ಬದಲಾವಣೆಗಳಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಟಾಟಾ ಟ್ರಸ್ಟ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಸುಗಮಗೊಳಿಸಲು ಆಂತರಿಕವಾಗಿ ಮ್ಯಾನೇಜ್‌ಮೆಂಟ್ ಪುನರ್‌ರಚನೆ ಕಾರ್ಯವನ್ನು ಕೈಗೊಳ್ಳುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಕಂಪನಿಗೆ ಒಟ್ಟು 180 ಕೋಟಿಯನ್ನು ಸಿಬ್ಬಂದಿಗಾಗಿ ವೆಚ್ಚ ಮಾಡಬೇಕಿತ್ತು. 2022ರಲ್ಲಿ, ನೇರ ಅನುಷ್ಠಾನ ಯೋಜನೆಗಳೆಂದು ಕರೆಯಲ್ಪಡುವ ಹೆಚ್ಚುವರಿ ವೆಚ್ಚಗಳು ಒಟ್ಟು ಉದ್ಯೋಗಿಗಳ ವೆಚ್ಚವನ್ನು 400 ಕೋಟಿಗೆ ಏರಿಸಿದ್ದವು.
ಹೊಸ ಬದಲಾವಣೆಗಳ ನಂತರ ಟಾಟಾ ಟ್ರಸ್ಟ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಓ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಒಒ) ಹುದ್ದೆಗಳೇ ಇರುವುದಿಲ್ಲ.
ಅದರೊಂದಿಗೆ ಔಟ್‌ಸೋರ್ಸ್ ಮಾಡುತ್ತಿದ್ದ ಕನ್ಸಲ್ಟೆಂಟ್‌ಗಳ ಮೇಲಿನ ಅವಲಂಬನೆಯನ್ನೂ ಕಡಿತ ಮಾಡಲಾಗುತ್ತಿದೆ.
ಟ್ರಸ್ಟ್‌ನ ಹೊಸ ಅಧ್ಯಕ್ಷ ನೋಯೆಲ್ ಟಾಟಾ ಅವರನ್ನು ನೇಮಿಸುವ ಮೊದಲೇ ಈ ಕ್ರಮವನ್ನು ಪ್ರಾರಂಭಿಸಲಾಗಿತ್ತು. ಈಗ ಅದಕ್ಕೆ ಅಧ್ಯಕ್ಷರ ಅನುಮೋದನೆಯೂ ಸಿಕ್ಕಿದೆ.
ಕಂಪನಿಯ ಆಂತರಿಕ ಲೆಕ್ಕಪರಿಶೋಧನಾ ವರದಿಯು ಸಿಬ್ಬಂದಿಯ ವೆಚ್ಚದಲ್ಲಿ ಭಾರೀ ಏರಿಕೆ ಆಗಿರುವುದನ್ನು ಬಹಿರಂಗಪಡಿಸಿತ್ತು.
ಇದರ ಬೆನ್ನಲ್ಲಿಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ‘ಟ್ರಸ್ಟ್ ಸಾರ್ವಜನಿಕರ ಸೇವಕನಂತೆ ಕಾರ್ಯನಿರ್ವಹಿಸಬೇಕು. ನಾವು ಟ್ರಸ್ಟ್‌ಗಳೊಳಗಿನ ಹಣ ಮತ್ತು ಆಸ್ತಿಯ ನಿಜವಾದ ಪಾಲಕರಾಗಿರಬೇಕು..’ ಎಂದು ಟ್ರಸ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾಸನಾಂಬೆ ದರ್ಶನ ವಿಚಾರ: ಅಧಿಕಾರಿಗಳ ಮಾರಾಮಾರಿ, ಡಿಸಿಗೇ ಏರುಧ್ವನಿಯಲ್ಲಿ ಮಾತಾಡಿದ ಪೊಲೀಸ್ ಇನ್ಸ್‌ಪೆಕ್ಟರ್
ಮಗ ಸತ್ತಿದ್ದೂ ಗೊತ್ತಾಗದೆ 4 ದಿನಗಳಿಂದ ಹೆಣದ ಜೊತೆಗೇ ಇದ್ದ ಅಂಧ ದಂಪತಿ!