newsics.com
ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ನಡುವೆಯೂ ಸುದೀಪ್ ಅವರು ಶಾಕಿಂಗ್ ಸುದ್ದಿ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ಸಿಕ್ಕಿರುವ ಟಿಆರ್‌ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿರುವ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನಹರಿಸುವ ಸಮಯ ಬಂದಿದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.
‘ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್. ಇಷ್ಟು ವರ್ಷ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್‌ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ’ ಎಂದು ಸುದೀಪ್ ಅವರು ಶಾಕಿಂಗ್ ವಿಷಯ ತಿಳಿಸಿದ್ದಾರೆ.
ಈ ಮೂಲಕ ಬಿಗ್ ಬಾಸ್ ಸೀಸನ್ 12ರ ನಿರೂಪಣೆಯ ಹೊಣೆ ಯಾರದ್ದು ಎಂಬ ಪ್ರಶ್ನೆ ಅಧಿಕೃತವಾಗಿ ಸೃಷ್ಟಿಯಾದಂತಾಗಿದೆ.
ಕಿಚ್ಚ ಸುದೀಪ್ ನಿರೂಪಣೆ ಮಾಡದಿದ್ದರೆ ಮತ್ಯಾರು? ಯಾವ ನಟ ಬಿಗ್ ಬಾಸ್ ಸೀಸನ್ 12ರ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಅಭಿಮಾನಿಗಳ ವಲಯದಲ್ಲಿ ಹಲವು ಹೆಸರುಗಳು ಕೇಳಿಬಂದಿದ್ದವು.
ನಟ ನಿರ್ದೇಶಕ ರಿಷಬ್ ಶೆಟ್ಟಿ, ಉಪೇಂದ್ರ, ರಮೇಶ್ ಅರವಿಂದ್ ಹೆಸರುಗಳು ಬಿಗ್ ಬಾಸ್ ಸೀಸನ್ 11ರಲ್ಲಿ ಕಿಚ್ಚ ಸುದೀಪ್ ಬದಲಿಗೆ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವದಂತಿ ಹರಿದಾಡಿತ್ತು. ಆದರೆ ವದಂತಿಗೆ ಕೊನೆಹಾಡಿದ್ದ ಕಿಚ್ಚ ಸುದೀಪ್ ಸ್ವತಃ ಸೀಸನ್ 11 ರ ನಿರೂಪಕರಾಗಿದ್ದರು. ಆದರೆ ಇದೀಗ ಅವರು ಇದೇ ತಮ್ಮ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಘೋಷಿಸಿದ ಕಾರಣ ಬಿಗ್ ಬಾಸ್ 12 ರ ನಿರೂಪಕರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.
ಈ ಕುರಿತು ಬಿಗ್ ಬಾಸ್ ಸೀಸನ್ 11ರ ಪ್ರೆಸ್ ಮೀಟ್ ವೇಳೆ ಮಾತನಾಡಿದ್ದ ಕಿಚ್ಚ ಸುದೀಪ್ ” ನಾನು ನಿರೂಪಣೆ ಮಾಡಲ್ಲ ಎಂದಾದರೆ ನಿರೂಪಕರನ್ನು ಹುಡುಕುವುದು ವಾಹಿನಿಯವರ ಜವಾಬ್ದಾರಿ ಮತ್ತು ಸ್ವಾತಂತ್ರ್ಯ” ಎಂಬ ಅರ್ಥದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.
https://x.com/KicchaSudeep/status/1845492822348042416?t=JNm83-_zPbvfSy_BELs5Uw&s=19
ವಿಮಾನ ಪ್ರಯಾಣಿಕರಿಗೆ ಸಂತಸದ ಸುದ್ದಿ.. ಟಿಕೆಟ್ ದರದಲ್ಲಿ ಭಾರೀ ಇಳಿಕೆ..!
ಓವಿಯಾ ಖಾಸಗಿ ವಿಡಿಯೋ ಲೀಕ್? ನೋಡಿ ‘ಎಂಜಾಯ್’ ಮಾಡು ಎಂದಿದ್ಯಾಕೆ ಕಿರಾತಕ ನಟಿ!