newsics.com
ಒಟ್ಟಿಗೇ ಹುಟ್ಟಿ, ಒಟ್ಟಿಗೇ ಬೆಳೆಯುವ ಅವಳಿ ಮಕ್ಕಳು ಅದರಲ್ಲಿಯೂ ಹೆಣ್ಣು ಮಕ್ಕಳು ಮದುವೆಯಾಗಿ ಬೇರೆ ಬೇರೆ ಮನೆಗೆ ಹೋಗುವುದು ಎಂದರೆ ಹಲವರಿಗೆ ಇದು ನುಂಗಲಾಗದ ತುತ್ತೇ. ಇದೇ ಕಾರಣಕ್ಕೆ ಇಬ್ಬರು ಒಬ್ಬನೇ ಮದ್ವೆ ಆಗಲು ನಿರ್ಧಾರ ಮಾಡಿದ್ದಾಳೆ.
ಬಾರ್ಬಿ ಡಾಲ್, ಬೈಸಿಕಲ್, ಬಟ್ಟೆ ಮತ್ತು ಮೇಕಪ್ ಎಲ್ಲವನ್ನೂ ಹಂಚಿಕೊಂಡಿದ್ದಾರೆ. ಅಂದರೆ ಒಂದನ್ನೇ ಇಬ್ಬರೂ ಹಂಚಿಕೊಂಡವರು. ಸಾಮಾನ್ಯ ಮಕ್ಕಳಂತೆ ಬೇರೆ ಬೇರೆ ಆಟದ ಸಾಮಾನು ಆಡಿದವರಲ್ಲ. ಏನೇ ತಂದರೂ ಒಂದೇ ತಂದು ಅದನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಅದನ್ನೇ ಮುಂದುವರೆಸಿಕೊಂಡು ಬಂದಿರೋ ಈ ಸಹೋದರಿಯರು ಈಗ ಒಬ್ಬನೇ ಬಾಯ್ಫ್ರೆಂಡ್ನ ಹುಡುಕಾಟದಲ್ಲಿ ಇದ್ದಾರಂತೆ.
ಹಾಗೆಂದು ತಮ್ಮ ಬಾಯ್ಫ್ರೆಂಡ್ ಹೇಗೆ ಇರಬೇಕು ಎನ್ನುವುದನ್ನು ಅವರು ಹೇಳಿದ್ದು, ಇಬ್ಬರಿಗೂ ಒಂದೇ ರೀತಿಯ ಆಸೆ ಇದೆ. ಅವನು ಎತ್ತರವಾಗಿರಬೇಕು, ಹ್ಯಾಂಡ್ಸಮ್ ಆಗಿರಬೇಕು ಮತ್ತು ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರಬೇಕು ಅನ್ನುವುದು ಈ ಸಹೋದರಿಯ ಬಯಕೆ. ಒಂದೇ ಬಾಯ್ಫ್ರೆಂಡ್ ಇದ್ದರೆ ಯಾವುದೇ ತೊಂದರೆಯಾಗುವುದಿಲ್ಲವಂತೆ.