newsics.com
ಶಿರಸಿ(ಉತ್ತರ ಕನ್ನಡ): ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ.
ದೇವಾಲಯದ ಮುಖ್ಯ ದ್ವಾರದಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ಉಡುಗೆ ತೊಡುಗೆಯ ಸೂಚನೆಗಳ ಬೋರ್ಡ್ ಹಾಕಲಾಗಿದೆ. ಈ ಹಿಂದೆ ಗೋಕರ್ಣ, ಮಹಾಬಲೇಶ್ವರ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿತ್ತು. ಈಗ ಮಾರಿಕಾಂಬಾ ದೇವಸ್ಥಾನದಲ್ಲೂ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.
ಭಕ್ತರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಮಾರಿಕಾಂಬಾ ದೇವಿಯ ದರ್ಶನ ಪಡೆಯುವಂತೆ ರಾಜ್ಯ ಮುಜರಾಯಿ ಇಲಾಖೆ ಆದೇಶಿಸಿದೆ. ಶಿರಸಿ ಸೇರಿ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಲಾಗಿದೆ.
ನವರಾತ್ರಿ ನಿಮಿತ್ತ ಹೆಚ್ಚು ಭಕ್ತರು ಆಗಮಿಸಿದ್ದು, ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ ಮಾಡಲಾಗಿದೆ.
ಪುರುಷರು ಶರ್ಟ್ ಮತ್ತು ಟ್ರೌಸರ್, ಧೋತಿ ಅಥವಾ ಮೇಲಿನ ಬಟ್ಟೆಯೊಂದಿಗೆ ಪೈಜಾಮಾ ಧರಿಸಿ ದರ್ಶನ ಪಡೆಯಬಹುದು.
ಮಹಿಳೆಯರು ಸೀರೆ ಅಥವಾ ಕುಪ್ಪಸ, ಅರ್ಧ ಸೀರೆ ಅಥವಾ ಪೈಜಾಮಾ, ಚೂಡಿದಾರ್ ಧರಿಸಿ ಬರುವಂತೆ ಸೂಚಿಸಲಾಗಿದೆ. ಈ ವಸ್ತ್ರಸಂಹಿತೆ ನಿಯಮಗಳು ವಿದೇಶಿಯರಿಗೂ ಅನ್ವಯಿಸುತ್ತವೆ ಎಂದು ತಿಳಿಸಲಾಗಿದೆ.
https://www.instagram.com/reel/DA_zkhAI6Vp/?igsh=MTUzcWl4MzNvOGVxcA==
ದಸರಾ ಜಂಬೂ ಸವಾರಿಗೆ ಕ್ಷಣಗಣನೆ – ಅಂಬಾವಿಲಾಸ ಅರಮನೆಯಲ್ಲಿ ಭರದ ಸಿದ್ಧತೆ
‘ಬಯಕೆ’ ಈಡೇರಿಕೆಗೆ ಮಹಿಳೆಯರಿಗೆ ರೋಬೋಟ್‌ಗಳೇ ಹೆಚ್ಚು ಇಷ್ಟವಂತೆ! ಸಡಿಲವಾಗಲಿದ್ಯಾ ಮಹಿಳೆ- ಪುರುಷರ ನಡುವಿನ ಬಂಧ?
ರಾಜ್ಯದ ಪಿಜಿ, ಹಾಸ್ಟೆಲ್‌ಗಳಲ್ಲಿರುವವರಲ್ಲಿ ಎಚ್‌ಐವಿ ಸೋಂಕು, ಹೆಚ್ಚಿದ ಆತಂಕ
ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯಗೊಳಿಸಿದ ಸರ್ಕಾರ, ಖಾಸಗಿ ಕಂಪನಿಗಳಿಗೂ ಅನ್ವಯ