newsics.com
ಧಾರವಾಡ/ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ನಡೆದ ಬಿಎಂಟಿಸಿ ಕಂಡಕ್ಟರ್ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಕಾಪಿ ಚೀಟಿ ಪತ್ತೆಯಾದ ಆರೋಪ ಕೇಳಿಬಂದಿದೆ.
ಧಾರವಾಡ ಪರೀಕ್ಷಾ ಕೇಂದ್ರದಲ್ಲಿ ಕಾಪಿ ಚೀಟಿ ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. 2500 ಹುದ್ದೆಗಳಿಗೆ ಪರೀಕ್ಷೆ ನಡೆದಿದೆ. ಸಾಮಾನ್ಯ ಜ್ಞಾನ ಮತ್ತು ಕಮ್ಯುನಿಕೇಶನ್ಸ್ ಪರೀಕ್ಷೆಗಳು ನಡೆದಿವೆ.
ಎರಡು ಪರೀಕ್ಷೆಗಳಿಗೆ ಎರಡು ಗಂಟೆ ಸಮಯ ನಿಗದಿಯಾಗಿತ್ತು. ಪರೀಕ್ಷೆಯಲ್ಲಿ ಕಾಪಿ ಮಾಡಿ ಕೆಳಗೆ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಕಾಪಿ ಚೀಟಿ ಎಸೆಯಲಾಗಿತ್ತು.
ಸದ್ಯ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕೈಗೆ ಕಾಪಿ ಚೀಟಿ ಸಿಕ್ಕಿದೆ. ಕಾಪಿ ಚೀಟಿಯಲ್ಲಿ 10 ಕ್ಕೂ ಪ್ರಶ್ನೆಗಳಿಗೆ ಉತ್ತರ ಬರೆದು ಕಳುಹಿಸಲಾಗಿತ್ತು.
ಸ್ಥಳಕ್ಕಾಗಮಿಸಿದ ಧಾರವಾಡ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡದ ಬಾಸೆಲ್ ಮಿಷನ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಬ್ ಸೆಂಟರ 123ರಲ್ಲಿ ಪರೀಕ್ಷೆ ನಡೆಸಲಾಗಿದೆ.
ಸ್ಥಳಕ್ಕೆ ತಹಸೀಲ್ದಾರ ದೊಡ್ಡಪ್ಪ ಹೂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಮಲೆನಾಡು ಗಿಡ್ಡ ಹಸುಗಳ ಸಾಕಣೆಗೆ ಮುಂದಾದ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್!