newsics.com
ಕನ್ನಡ ಕಿರುತೆರೆಯ ಗೀತಾ ಸೀರಿಯಲ್ನಲ್ಲಿ ಖಡಕ್ ವಿಲನ್ ಆಗಿ ನಟಿಸಿದ್ದ ಭಾನುಮತಿ ಹಾಟ್ ಅವತಾರ ತಾಳಿದ್ದಾರೆ. ಗೀತಾ ಸೀರಿಯಲ್ ನೋಡಿರುವವರಿಗೆ ಭಾನುಮತಿ ಬಗ್ಗೆ ಗೊತ್ತಿರುತ್ತದೆ. ಸದ್ಯ ತೆಲುಗು ಸೀರಿಯಲ್ನಲ್ಲಿ ಬ್ಯುಸಿಯಾಗಿರುವ ಶರ್ಮಿತಾ ಗೌಡ ಮಾಲ್ಡೀವ್ಸ್ ಕಡೆ ಪ್ರಯಾಣ ಬೆಳೆಸಿದ್ದಾರೆ. ಜತೆಗೆ ಕೆಲವು ಹಾಟ್ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
ಧಾರಾವಾಹಿ, ಸಿನಿಮಾ ಎನ್ನುತ್ತಾ ತಮ್ಮದೇ ಆದ ಲೋಕದಲ್ಲಿ ಮುಳುಗಿಹೋಗಿದ್ದ ಶರ್ಮಿತಾ ಶೂಟಿಂಗ್ನಿಂದ ಕೊಂಚ ಬಿಡುವು ಮಾಡಿಕೊಂಡು ಮಾಲ್ಡೀವ್ಸ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಗೀತಾ ಧಾರಾವಾಹಿಯಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿರುವ ನಟಿ ಶರ್ಮಿತಾ ಅವರು ರಿಯಲ್ ಲೈಫ್ನಲ್ಲೂ ಸಿಕ್ಕಾಪಟ್ಟೆ ಫ್ಯಾಷನೇಟ್.
ಗೀತಾ ಸೀರಿಯಲ್ ಮುಗಿದ ಬಳಿಕ ನಟಿ ತೆಲುಗಿನ ಬ್ರಹ್ಮಮುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರೋ ಇವರು ಮಾಲ್ಡೀವ್ಸ್ನಲ್ಲಿ ಕ್ಲಿಕ್ಕಿಸಿರುವ ಹಾಟ್ ಫೋಟೊಗಳನ್ನು ಹಂಚಿಕೊಂಡಿದ್ದು, ಈ ಫೋಟೋಸ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಪ್ರತಿ ದಿನ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಹಾಗಾದ್ರೆ ಈ ಸಮಸ್ಯೆ ಕಾಡಬಹುದು ಎಚ್ಚರ