newsics.com
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್ನಲ್ಲಿ ಆಗಸ್ಟ್ 8 ರಿಂದ ಆಗಸ್ಟ್ 19 ರವರೆಗೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ.
ನಾಳೆಯಿಂದ 12 ದಿನಗಳವರೆಗೆ ಫ್ಲವರ್ ಶೋ ನಡೆಯಲಿದ್ದು, ಲಕ್ಷಾಂತರ ಜನರು ಭೇಟಿ ನಿರೀಕ್ಷಿಸಲಾಗಿದೆ. ಹೀಗಾಗಿ ಫ್ಲವರ್ ಶೋಗೆ ಬರುವ ಜನರಿಗೆ ವಾಹನ ನಿಲುಗಡೆ 4 ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖ 9 ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿ ಸಂಚಾರಿ ಪೊಲೀಸರಿಂದ ಆದೇಶ ಹೊರಡಿಸಲಾಗಿದೆ.
ಪಾರ್ಕಿಂಗ್ ನಿಷೇಧ
- ಡಾ. ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ವರೆಗೆ ರಸ್ತೆಯ ಎರಡು ಬದಿ
- ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ವರೆಗೆ ರಸ್ತೆಯ ಎರಡು ಬದಿ
- ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಭಾಗ್ ಮುಖ್ಯದ್ವಾರದ ವರೆಗೆ
- ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ವರೆಗೆ
- ಬಿಟಿಎಸ್ ಬಸ್ ನಿಲ್ದಾಣ, ಬಿಎಂಟಿಸಿ ಜಂಕ್ಷನ್ನಿಂದ ರಸ್ತೆಯ ಎರಡು ಬದಿಗಳಲ್ಲಿ
- ಕೃಂಬಿಗಲ್ ರಸ್ತೆಯ ಎರಡು ಕಡೆಗಳಲ್ಲಿ
- ಲಾಲ್‌ಬಾಗ್ ವೆಸ್ಟ್ಗೇಟ್‌ನಿಂದ ಆರ್.ವಿ. ಟೀರ್ಸ್ ಕಾಲೇಜ್‌ವರೆಗೆ
- ಆರ್‌ವಿ ಟೀರ್ಸ್ ಕಾಲೇಜ್‌ನಿಂದ ಅಶೋಕ ಪಿಲ್ಲರ್ವರೆಗೆ
- ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ವರೆಗೆ
- ಮರಿಗೌಡ ರಸ್ತೆಯ ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ಬೈಕ್ ಪಾರ್ಕಿಂಗ್
- ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ ವ್ಯವಸ್ಥೆ
- ಮರಿಗೌಡ ರಸ್ತೆಯ ಹಾಪ್ ಕಾಮ್ಸ್ನಲ್ಲಿ ಬೈಕ್ ಹಾಗೂ ಕಾರು ನಿಲುಗಡೆ
- ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಹಾಗೂ ಕಾರು ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.