newsics.com
ನೇಪಾಳ: ಕಠ್ಮಂಡುವಿನಿಂದ ರಸುವಾಗೆ ಹೊರಟಿದ್ದ ಹೆಲಿಕಾಪ್ಟರ್ ಒಂದು ಪತನವಾಗಿ ಒಟ್ಟು ನಾಲ್ಕು ಮಂದಿ ಜೀವ ಕಳೆದುಕೊಂಡಿರುವ ಘಟನೆ ನೇಪಾಳದ ಶಿವಪುರಿ ಪ್ರದೇಶದ ನವ್ಕೋಟಾ ಎಂಬಲ್ಲಿ ನಡೆದಿದೆ.
ಬುಧವಾರ 1.54ಕ್ಕೆ ಕಠ್ಮಂಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೂರ್ಯ ಚೌರ್-7 ಎಂಬ ಹೆಲಿಕಾಪ್ಟರ್ ಟೇಕ್ ಆಫ್ ಆಗಿತ್ತು. ಟೇಕಾಫ್ ಆದ ಮೂರೇ ನಿಮಿಷದಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿದೆ. ಕೊನೆಗೆ ನವ್ಕೋಟಾ ಎಂಬಲ್ಲಿ ಅದು ಪತನಗೊಂಡು ಹೆಲಿಕಾಪ್ಟರ್ನಲ್ಲಿದ್ದಿದ್ದ ನಾಲ್ಕೂ ಜನ ಮೃತಪಟ್ಟಿದ್ದಾರೆ.
ಎರಡು ವಾರಗಳ ಹಿಂದಷ್ಟೇ ವಿಮಾನವೊಂದು ಅಪಾಘತಕ್ಕಿಡಾಗಿ 187 ಜನರು ಜೀವ ಕಳೆದುಕೊಂಡಿದ್ದರು. ಈಗ ನೇಪಾಳದಲ್ಲಿ ಮತ್ತೊಂದು ಅಂತಹುದೇ ದುರಂತ ನಡೆದಿದೆ.