newsics.com
Contents
ನವದೆಹಲಿ: 9ನೇ ಕ್ಲಾಸ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಪ್ರೇಮಿಗೆ ಐಫೋನ್ ಉಡುಗೊರೆ ನೀಡುವ ಸಲುವಾಗಿ ಮನೆಯಲ್ಲಿದ್ದ ತಾಯಿಯ ಚಿನ್ನದ ಸರವನ್ನೇ ಕದ್ದಿದ್ದಾನೆ.ಬಾಲಕನ ತಾಯಿ ಅಪರಿಚಿತ ವ್ಯಕ್ತಿ ತನ್ನ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿತು. ನಂತರ ಈ ಕುರಿತು ತನಿಖೆಯನ್ನು ಪ್ರಾರಂಭಿಸಲಾಯಿತು.
ನವದೆಹಲಿ: 9ನೇ ಕ್ಲಾಸ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಪ್ರೇಮಿಗೆ ಐಫೋನ್ ಉಡುಗೊರೆ ನೀಡುವ ಸಲುವಾಗಿ ಮನೆಯಲ್ಲಿದ್ದ ತಾಯಿಯ ಚಿನ್ನದ ಸರವನ್ನೇ ಕದ್ದಿದ್ದಾನೆ.
ತಾಯಿಯ ಚಿನ್ನದ ಕಿವಿಯೋಲೆ, ಚಿನ್ನದ ಉಂಗುರ ಮತ್ತು ಚಿನ್ನದ ಸರವನ್ನು ಕಾಕ್ರೋಲಾ ಪ್ರದೇಶದಲ್ಲಿ ಎರಡು ವಿಭಿನ್ನ ಅಕ್ಕಸಾಲಿಗರಿಗೆ ಮಾರಾಟ ಮಾಡಿದ್ದಾನೆ. ಆ ಹಣವನ್ನು ಆತ ಹುಡುಗಿಗೆ ಐಫೋನ್ ಖರೀದಿಸಲು ಬಳಸಿದ್ದಾನೆ. ಆಕೆಯನ್ನು 9ನೇ ಕ್ಲಾಸಿನ ಆ ಹುಡುಗ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ.
ಬಾಲಕನ ತಾಯಿ ಅಪರಿಚಿತ ವ್ಯಕ್ತಿ ತನ್ನ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿತು. ನಂತರ ಈ ಕುರಿತು ತನಿಖೆಯನ್ನು ಪ್ರಾರಂಭಿಸಲಾಯಿತು.
ಕಳ್ಳತನದ ನಂತರ ಆ ಮಹಿಳೆಯ ಮಗ ನಾಪತ್ತೆಯಾಗಿರುವುದನ್ನು ಪತ್ತೆ ಹಚ್ಚಿದರು. ನಂತರ ತಂಡವು ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿತು ಮತ್ತು ಅವನ ಶಾಲಾ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿತು. ಆಗ ಆತ 1 ಲಕ್ಷ ರೂ. ಮೌಲ್ಯದ ಹೊಸ ಐಫೋನ್ ಖರೀದಿಸಿದ್ದಾನೆ ಎಂದು ತಂಡಕ್ಕೆ ತಿಳಿದುಬಂದಿತು. ನಂತರ ಆತನನ್ನು ಬಂಧಿಸಲಾಯಿತು.