Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ವಯನಾಡು ದುರಂತ: ಮೃತರ ಸಂಖ್ಯೆ 308ಕ್ಕೇರಿಕೆ, 195 ಶವ ಪತ್ತೆ
ದೇಶಪ್ರಮುಖ

ವಯನಾಡು ದುರಂತ: ಮೃತರ ಸಂಖ್ಯೆ 308ಕ್ಕೇರಿಕೆ, 195 ಶವ ಪತ್ತೆ

Share
2 Min Read
SHARE

newsics.com

ವಯನಾಡ್(ಕೇರಳ): ಕಳೆದ ಜುಲೈ 30 ರಂದು ವಯನಾಡ್‌ನಲ್ಲಿ ಸಂಭವಿಸಿದ ಭಾರೀ ಭೂ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 308ಕ್ಕೇರಿದೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಈ ಮಾಹಿತಿ ನೀಡಿದ್ದಾರೆ.

ಭೂಕುಸಿತದಿಂದ ಹಾನಿಗೊಳಗಾದ ಮೆಪ್ಪಾಡಿ ಪ್ರದೇಶದ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಈವರೆಗೆ 195 ಮೃತದೇಹಗಳು ಹಾಗೂ 113 ದೇಹದ ಭಾಗಗಳು ಪತ್ತೆಯಾಗಿವೆ ಎಂದು ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ.

ಭೂಕುಸಿತದಿಂದ ಪ್ರತ್ಯೇಕವಾಗಿರುವ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳನ್ನು ಸಂಪರ್ಕಿಸುವ ಇರುವಂಜಿಪ್ಪುಳ ನದಿಯ ಮೇಲೆ ನಿರ್ಮಿಸಲಾದ 190 ಅಡಿ ಬೈಲಿ ಸೇತುವೆಯನ್ನು ಭಾರತೀಯ ಸೇನೆಯು ಶುಕ್ರವಾರ ಬೆಳಗ್ಗೆ ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಿದೆ.

ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ಮಾತನಾಡಿ, 300 ಜನರು ಕಣ್ಮರೆಯಾಗಿದ್ದು, ಕಂದಾಯ ಇಲಾಖೆ ವಿವರಗಳ ಸಂಗ್ರಹಿಸಿದ ನಂತರ, ಇನ್ನೊಂದೆರಡು ಮೂರು ದಿನದಲ್ಲಿ ಈ ಕುರಿತು ಅಂತಿಮ ಚಿತ್ರಣ ಸಿಗಲಿದೆ ಎಂದರು.

ಭೂ ಕುಸಿತಕ್ಕೆ ಒಳಗಾಗಿರುವ ಪ್ರದೇಶವನ್ನು ಆರು ವಲಯವಾಗಿ ವಿಭಾಗಿಸಲಾಗಿದೆ. ಶ್ವಾನಗಳ ಸಹಾಯದಿಂದ ಪ್ರತ್ಯೇಕ ತಂಡಗಳಿಂದ ಮೃತರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ವಿಶೇಷ ಏಜೆನ್ಸಿಗಳ ಸಹಾಯದಿಂದ ಕೇರಳ ಪೊಲೀಸರು ಕೋಯಿಕ್ಕೋಡ್ ನಗರದವರೆಗೆ ಚಾಲಿಯಾರ್ ನದಿಯಲ್ಲಿ ಕೂಂಬಿಂಗ್ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಲಪ್ಪುರಂ ಜಿಲ್ಲೆಯಲ್ಲಿನ ಚಾಲಿಯರ್ ನದಿ ದಂಡೆಯಲ್ಲೂ ಕೆಲವು ಮೃತ ದೇಹ ಪತ್ತೆಯಾಗಿರುವ ವರದಿ ಬಂದಿದೆ. ವಯನಾಡಿನಲ್ಲಿ ಆದ ಭೂ ಕುಸಿತದಿಂದ ಮಲಪ್ಪುರಂನವರೆಗೆ ಚಾಲಿಯಾರ್ನದಿಯಲ್ಲಿ 143 ಮೃತ ದೇಹ ಮತ್ತು ಕೆಲವು ದೇಹದ ಭಾಗಗಳು ಕೊಚ್ಚಿಕೊಂಡು ಬಂದಿರುವುದು ಪತ್ತೆಯಾಗಿದೆ ಎಂದು ಹೇಳಿದರು.
ವಯನಾಡ್ ಜಿಲ್ಲಾಡಳಿತದ ಪ್ರಕಾರ, 127 ಮಕ್ಕಳು ಮತ್ತು 76 ಮಹಿಳೆಯರು ಸಾವನ್ನಪ್ಪಿದ್ದು, 225 ಮಂದಿ ಗಾಯಗೊಂಡಿದ್ದಾರೆ. ಮುಂಡಕ್ಕೈ ಮತ್ತು ಚೂರ್ಮಲಾ ಪ್ರದೇಶಗಳು ಗಂಭೀರವಾಗಿ ಹಾನಿಗೊಂಡಿದೆ.

ಭೂ ಕುಸಿತವಾಗಿರುವ ವಯನಾಡು ಜಿಲ್ಲೆಯಲ್ಲಿ ನಾಲ್ಕನೇ ದಿನದ ರಕ್ಷಣೆ ಕಾರ್ಯ ಭರದಿಂದ ಸಾಗಿದ್ದು, 40 ತಂಡಗಳು ಈ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದೆ. ಸೇನಾ ತಂಡ ನಿರ್ಮಿಸಿರುವ 190 ಅಡಿ ಉದ್ದದ ಬೈಲಿ ಸೇತುವೆ ಮೂಲಕ ಆ್ಯಂಬುಲೆನ್ಸ್ ಸೇರಿದಂತೆ ಇತರ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇಸ್ರೋದಿಂದ ಬಯಲಾಯ್ತು ವಯನಾಡ್‌ನ ಘನಘೋರ ಸತ್ಯ!

ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಿರೀಕ್ಷೆಗೂ ಮೀರಿ ಮಳೆ ಸಾಧ್ಯತೆ!

ಚಿರತೆ ಜತೆ ಹೋರಾಡಿ ಮನೆಯವರ ಪ್ರಾಣ ಉಳಿಸಿದ 2 ಸಾಕುನಾಯಿಗಳು! ವೈರಲ್ ವಿಡಿಯೊ ನೋಡಿ

TAGGED:195 bodies foundWayanad tragedy: death toll rises to 308
Share This Article
Facebook Twitter Copy Link Print
Previous Article ಇಸ್ರೋದಿಂದ ಬಯಲಾಯ್ತು ವಯನಾಡ್‌ನ ಘನಘೋರ ಸತ್ಯ!
Next Article ಹಾವಿನಂತಾದ ಯುವತಿ! ಹಾವಭಾವದಲ್ಲಿ ಭಾರೀ ಬದಲಾವಣೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?