newsics.com
ಕನ್ನಡದ ಖ್ಯಾತ ನಟ ದಿ. ಸುಧೀರ್ ಅವರ 2ನೇ ಮಗ ತರುಣ್ ಸುಧೀರ್ ನಟಿ ಸೋನಲ್ ಮೊಂತೆರೊ ಅವರನ್ನು ಮದ್ವೆಯಾಗುತ್ತಿದ್ದಾರೆ. ಆಗಸ್ಟ್ 10-11 ರಂದು ಬೆಂಗಳೂರಿನ ಬಸವೇಶ್ವರ ನಗರದ ಶಂಕರ್ ಮಠದ ಬಳಿಯ ಹಾಲ್ನಲ್ಲಿ ವಿವಾಹವಾಗಲಿದ್ದಾರೆ. ಅದಕ್ಕೂ ಮುನ್ನ ಈ ಜೋಡಿ ತಮ್ಮ ಸ್ನೇಹಿತರ ಬಳಗವನ್ನು ವಿವಾಹಕ್ಕೆ ಆಮಂತ್ರಿಸಲು ಪರಿಸರ ಸ್ನೇಹಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಆ ಮೂಲಕ ಫ್ಯಾನ್ಸ್ ಮನಗೆದ್ದಿದ್ದಾರೆ.

ಸಾಮಾನ್ಯವಾಗಿ ಬೇಡವಾದ ಕಾಗದಗಳನ್ನು ಬಿಸಾಕುವವರೇ ಜಾಸ್ತಿ. ಇದೇ ನಿಟ್ಟಿನಲ್ಲಿ ತರುಣ್ ಮತ್ತು ಸೋನಲ್ ಪರಿಸರ ಸ್ನೇಹಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ಇದನ್ನು ನೆಲದ ಮೇಲೆ ಬಿಸಾಡಿದ್ರೆ ಗಿಡವಾಗಿ ಬೆಳೆಯುತ್ತದೆ. ವಿಶೇಷವಾದ ಆಮಂತ್ರಣ ಪತ್ರಿಕೆಯನ್ನು ತರುಣ್ ಮತ್ತು ಸೋನಲ್ ಮುದ್ರಿಸಿದ್ದಾರೆ. ಲಗ್ನ ಪತ್ರಿಕೆಯ ಜೊತೆಗೆ ಪೆನ್, ಪೆನ್ಸಿಲ್ ಹಾಗೂ ಪುಸ್ತಕವನ್ನು ನೀಡಿದ್ದಾರೆ. ಇದು ಕೂಡ ಪರಿಸರ ಸ್ನೇಹಿಯಾಗಿದ್ದು, ಎಲ್ಲರ ಗಮನ ಸೆಳೆದಿದೆ.