newsics.com
ಶ್ರೀಲಂಕಾ: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಸಾಂಘಿಕ ಪ್ರದರ್ಶನ ತೋರಿದ ಭಾರತ ತಂಡ, ಶ್ರೀಲಂಕಾ ವಿರುದ್ಧದ 2ನೇ ಟಿ20ಐ ಪಂದ್ಯದಲ್ಲೂ ಡಕ್ವರ್ಥ್ ಲೂಯಿಸ್ ನಿಯಮದಡಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.
ನೂತನ ಕೋಚ್ ಗೌತಮ್ ಗಂಭೀರ್ ಮತ್ತು ನೂತನ ನಾಯಕ ಸೂರ್ಯಕುಮಾರ್ ಯಾದವ್ ಅವರು ತಮ್ಮ ಚೊಚ್ಚಲ ಪರೀಕ್ಷೆಯಲ್ಲೇ ಉತ್ತಮ ಸಾಧನೆ ತೋರಿದ್ದಾರೆ.
ಇಲ್ಲಿನ ಪಲ್ಲೆಕೆಲ್ಲೆ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಎರಡನೇ ಟಿ20ಐಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ.
ತನ್ನ ಪಾಲಿನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಬೌಲರ್‌ಗಳು ಲಂಕಾ ಬ್ಯಾಟರ್‌ಗಳ ಮೇಲೆ ದಂಡಯಾತ್ರೆ ನಡೆಸಿದರು. ಆದರೆ ಭಾರತ ಇನ್ನಿಂಗ್ಸ್ ಆರಂಭಿಸಿದ ಬೆನ್ನಲ್ಲೇ ಒಂದು ಗಂಟೆ ಕಾಲ ಮಳೆ ಸುರಿಯಿತು
ರಾತ್ರಿ 9:35ಕ್ಕೆ ಶುರುವಾದ ಮಳೆ 10.40ಕ್ಕೆ ನಿಂತಿತು. ಹೀಗಾಗಿ ಡಿಎಲ್ಎಸ್ ನಿಯಮದಡಿ ಓವರ್‌ಗಳ ಕಡಿತ ಮಾಡಿ 8 ಓವರ್‌ಗಳಲ್ಲಿ 78 ರನ್ ಗುರಿ ನೀಡಲಾಯಿತು. ಭಾರತ ಸ್ಫೋಟಕ ಬ್ಯಾಟಿಂಗ್ ನಡೆಸಿದ ಭಾರತ ಇನ್ನೂ 9 ಎಸೆತಗಳನ್ನು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಭಾರತ 6.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತು
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ಆರಂಭಿಕ ಆಘಾತ ಎದುರಿಸಿತು. ಕುಸಾಲ್ ಮೆಂಡಿಸ್ (10) ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಪಾಥುಮ್ ನಿಸ್ಸಾಂಕ ನಿಧಾನವಾಗಿ ಬ್ಯಾಟ್ ಬೀಸಿ 32 ರನ್ ಕಲೆ ಹಾಕಿದರು. ಆದರೆ ಕುಸಾಲ್ ಪೆರೇರಾ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿದರು. 34 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 54 ರನ್ ಗಳಿಸಿದರು. ಕಮಿಂದು ಮೆಂಡಿಸ್ (26) ಮತ್ತು ನಾಯಕ ಚರಿತ್ ಅಸಲಂಕಾ (14) ತಂಡಕ್ಕೆ ಆಸರೆಯಾಗಲೇ ಇಲ್ಲ.
ಮದುವೆಯೇ ಆಗಿಲ್ಲ ಎಂದ ಚಾಮರಾಜನಗರ ಸಂಸದ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟರು: ಫೋಟೋ ವೈರಲ್