newsics.com
ಮಳೆಗಾಲದಲ್ಲಿ ಬಟ್ಟೆ ಒಣಗದಿರೋದು ಒಂದು ದೊಡ್ಡ ಸಮಸ್ಯೆ ಆಗಿದೆ. ಕೆಲವೊಮ್ಮೆ ಬಟ್ಟೆಗಳು ಒಣಾಗಿದ ಮೇಲೂ ಅದ್ರಿಂದ ವಾಸನೆ ಬರೋದಿಕ್ಕೆ ಶುರುವಾಗುತ್ತೆ. ಇದ್ರಿಂದ ಕೀಟಾಣುಗಳು ಹರಡುವ ಸಾಧ್ಯತೆ ಇದೆ.
ಕೀಟಾಣುಗಳಿಂದಾಗಿ ಇನ್ಫೆಕ್ಷನ್ ಹೆಚ್ಚಾಗಿ ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತೆ. ಮಳೆಗಾಲದಲ್ಲಿ ತಮ್ಮ ಇಂಟಿಮೇಟ್ ಹೈಜಿನ್ ಬಗ್ಗೆ ಮಹಿಳೆಯರು ಗಮನಹರಿಸೋದು ತುಂಬಾನೆ ಮುಖ್ಯ.
ಎಕ್ಸ್‌ಪರ್ಟ್‌ಗಳ ಪ್ರಕಾರ, ಮಹಿಳೆಯರು ತಮ್ಮ ಅಂಡರ್ ವೇರ್ ಖರೀದಿ ಮಾಡುವಾಗ ಸರಿಯಾಗಿ ಯೋಚನೆ ಮಾಡಿ ಖರೀದಿಸಬೇಕು. ಮುಖ್ಯವಾಗಿ ಕಾಟನ್ ಇನ್ನರ್‌ವೇರ್ ಖರೀದಿಸಬೇಕು. ಇದರಿಂದ ಇನ್ನರ್‌ವೇರ್ ಒದ್ದೆಯಾಗಿ ಬ್ಯಾಕ್ಟೀರಿಯಾ ಉಂಟಾಗುವ ಸಾಧ್ಯತೆ ಕಡಿಮೆ. ಒಳ ಉಡುಪುಗಳನ್ನು ವಾಶ್ ಮಾಡುವಾಗ ಮೈಲ್ಡ್ ಡಿಟರ್ಜೆಂಟ್ ಬಳಸಿ. ಇದನ್ನು ಬೇರೆಯಾಗಿಯೇ ವಾಶ್ ಮಾಡುವುದು ಒಳ್ಳೆಯದು.
ಹೆಚ್ಚಿನ ಡಿಟರ್ಜೆಂಟ್ ಬಳಸುವುದರಿಂದ ಅಂಡರ್‌ವೇರ್‌ನಿಂದಾಗಿ ಸೂಕ್ಷ್ಮ ಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜತೆಗೆ ಒಳ ಉಡುಪುಗಳನ್ನು ವಾಶ್ ಮಾಡೋವಾಗ ಯಾವುದೇ ಪರಿಮಳಯುಕ್ತ ಲಿಕ್ವಿಡ್ ಬಳಕೆ ಬೇಡ.