newsics.com
ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಅವರ ಹಣೆಗೆ ಚಾಮರಾಜನಗರ ಸಂಸದ ಸುನೀಲ್ ಬೋಸ್ ಕುಂಕುಮ ಇಟ್ಟಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ತಾಯಿ ಗರ್ಭಗುಡಿಯಲ್ಲೇ ಈ ಘಟನೆ ನಡೆದಿದೆ.
ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಇವರಿಬ್ಬರೂ ಜತೆಯಾಗಿ ಬಂದಿದ್ದರುಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಅವರ ಹಣೆಗೆ ಚಾಮರಾಜನಗರ ಸಂಸದ ಸುನೀಲ್ ಬೋಸ್ (Sunil Bose) ಕುಂಕುಮ ಇಟ್ಟಿದ್ದಾರೆ. ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಇವರಿಬ್ಬರೂ ಜತೆಯಾಗಿ ಬಂದಿದ್ದರು.ಗರ್ಭಗುಡಿಯಲ್ಲಿ ಇವರು ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆ ನೆರವೇರಿಸುವ ವೇಳೆ ಬೆಂಬಲಿಗರ ಸಮ್ಮುಖದಲ್ಲೇ ಸವಿತಾ ಹಣೆಗೆ ಸುನೀಲ್ ಬೋಸ್ ಕುಂಕುಮ ಇಟ್ಟರು. ಸಾರ್ವಜನಿಕ ವಲಯದಲ್ಲಿ ಸುನೀಲ್ ಬೋಸ್ ನಡೆ ಇದೀಗ ಚರ್ಚೆಗೆ ಕಾರಣವಾಗಿದೆ.
ಯಾಕೆಂದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ತಮಗೆ ಮದುವೆ ಆಗಿಲ್ಲ ಎಂದು ಸುನೀಲ್ ಬೋಸ್ ಅಫಿಡೆವಿಟ್ ಸಲ್ಲಿಸಿದ್ದರು. ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರನ್ನೂ ಚಾಮರಾಜನಗರ ಬಿಜೆಪಿ ಸದಸ್ಯರು ನೀಡಿದ್ದರು. ಸುನೀಲ್ ಬೋಸ್ ಹಾಗೂ ಸವಿತಾ ಜತೆಯಲ್ಲಿ ಇರುವ ಫೋಟೋಗಳನ್ನು ನೀಡಿ ದೂರು ಕೊಟ್ಟಿದ್ದರು. ಸುನೀಲ್ ಬೋಸ್‌ಗೆ ಮದುವೆಯಾಗಿದೆ, ಆದರೆ ಅಫಿಡವಿಟ್‌ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ದೂರಿದ್ದರು.
ʼಇದೀಗ, ಚಾಮುಂಡೇಶ್ವರಿ ಗರ್ಭಗುಡಿಯಲ್ಲಿ ನಡೆದದ್ದು ಸುಳ್ಳು ಅಲ್ಲ ತಾನೆ?ʼ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವ, ಸುನಿಲ್ ಬೋಸ್ ತಂದೆ ಡಾ.ಎಚ್.ಸಿ. ಮಹದೇವಪ್ಪ, ಹಿಂದೂ ಸಂಪ್ರದಾಯದಲ್ಲಿ ಯಾರು ಯಾರ ಹಣೆಗೆ ಬೇಕಾದರೂ ಕುಂಕುಮ ಇಡಬಹುದು. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.