Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪಿಜಿ ಕೊಠಡಿಯಲ್ಲೇ ಯುವತಿ ಕೊಲೆ: ಪ್ರಿಯಕರನಿಂದಲೇ ಕೃತ್ಯ ಶಂಕೆ, ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ
ಕರ್ನಾಟಕಪ್ರಮುಖ

ಪಿಜಿ ಕೊಠಡಿಯಲ್ಲೇ ಯುವತಿ ಕೊಲೆ: ಪ್ರಿಯಕರನಿಂದಲೇ ಕೃತ್ಯ ಶಂಕೆ, ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ

Share
2 Min Read
SHARE

newsics.com

ಬೆಂಗಳೂರು: ಕೋರಮಂಗಲದ ಪಿಜಿಯೊಂದರಲ್ಲಿ ಯುವತಿಯೊಬ್ಬರ ಭೀಕರ ಹತ್ಯೆ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

24 ವರ್ಷದ ಕೃತಿಕಾ ಕುಮಾರಿ ಹತ್ಯೆಗೀಡಾದ ಯುವತಿ. ಇವರು ಬಿಹಾರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಮಂಗಲದ ವೆಂಕಟರೆಡ್ಡಿ ಲೇ ಔಟ್‌ ನ ಭಾರ್ಗವಿ ಸ್ಟೇಯಿಂಗ್‌ ಹೋಮ್ಸ್‌ ನ ಮೂರನೇ ಮಹಡಿಯ ಕೊಠಡಿಯಲ್ಲಿ ವಾಸವಾಗಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಯುವತಿಯ ಪ್ರಿಯಕರನೇ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕೃತಿಕಾ ಕುಮಾರಿ ಅವರು ಮಂಗಳವಾರ ರಾತ್ರಿ 10 ಗಂಟೆಗೆ ಪಿಜಿಯಿಂದ ಹೊರಹೋಗಿ 11 ಗಂಟೆಗೆ ಪ್ರಿಯಕರನೊಂದಿಗೆ ಮರಳಿದ್ದಾರೆ. ಆದರೆ ಪಿಜಿ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಯುವಕನಿಗೆ ಅವಕಾಶ ನೀಡಿಲ್ಲ. ಹೆಣ್ಣು ಮಕ್ಕಳ ಪಿಜಿ ಪ್ರವೇಶಿಸಲು ಭದ್ರತಾ ಸಿಬ್ಬಂದಿ ತಡೆದಿದ್ದಾರೆ.

ಕುಮಾರಿ ಅವರು ತಮ್ಮ ಪ್ರಿಯಕರನನ್ನು, ಸಹೋದರ ಎಂದು ನಂಬಿಸಿ ಬಲವಂತವಾಗಿ ಪಿಜಿ ಕೊಠಡಿಗೆ ರಾತ್ರಿ 11 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. 11.30ರ ವೇಳೆಗೆ ಈ ಹತ್ಯೆ ನಡೆದಿರಬಹುದು ಎಂದೂ ಪೊಲೀಸರು ಶಂಕಿಸಿದ್ದಾರೆ.

ಕೊಟಡಿಯಲ್ಲಿ ಇಬ್ಬರ ನಡುವೆ ಜಟಾಪಟಿ ನಡೆದಿದೆ. ಜಗಳದಲ್ಲಿ ಕೋಪಗೊಂಡ ಆರೋಪಿ ಹಲವಾರು ಬಾರಿ ಕೃತಿಕಾ ಅವರಿಗೆ ಇರಿದಿದ್ದಾನೆ. ನಂತರ ಗಂಟಲನ್ನು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಆತ ಪಿಜಿ ಪ್ರವೇಶಿಸುತ್ತಿರುವುದು ಮತ್ತು ಹೊರ ಹೋಗುತ್ತಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ. ಆರೋಪಿಯ ಕುರುಹುಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ. ಜತೆಗೆ ಪಿಜಿಯಲ್ಲಿದ್ದವರಿಂದಲೂ ಹೇಳಿಕೆ ಪಡೆದಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಕುಮಾರಿ ಅವರು ಕೊಠಡಿಯನ್ನು ಬಾಡಿಗೆ ಪಡೆದಿದ್ದರು. ಬಾಡಿಗೆ ಪಡೆಯುವಾಗ ಖಾಸಗಿ ಕಂಪನಿ ಉದ್ಯೋಗಿ ಎಂದು ಹೇಳಿಕೊಂಡಿದ್ದರು ಎಂದು ಪಿಜಿ ಮಾಲೀಕರು ತಿಳಿಸಿದ್ದಾರೆ. ಕೃತಿಕಾ ಅವರು ಪಿಜಿ ಸೇರಿಕೊಳ್ಳುವಾಗ ಆಕೆಯ ವಸ್ತುಗಳನ್ನು ಸಾಗಿಸಲು ಆರೋಪಿ ಸಹಕರಿಸಿದ್ದ ಎಂದೂ ಗೊತ್ತಾಗಿದೆ.

ಬೆಂಗಳೂರು ಆಗ್ನೇಯ ವಿಭಾಗದ ಉಪ ಆಯುಕ್ತೆ ಸಾರಾ ಫಾತಿಮಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ತಂಡಗಳ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ತಂಡವು ಆರೋಪಿ ಪತ್ತೆಗೆ ಕಾರ್ಯಾಚರಣೆ ಚುರುಕುಗೊಳಿಸಿದೆ.

ಪಿಜಿಯೊಳಗೆ ಪುರುಷನೊಬ್ಬನನ್ನು ಪ್ರವೇಶಿಸಲು ಅನುಮತಿ ನೀಡಿದ ಭದ್ರತಾ ಸಿಬ್ಬಂದಿ ಮತ್ತು ಪಿಜಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

https://www.newsics.com/2024/07/24/cauvery-river-krs-dam-water-level-full-and-reached-100-percent-of-reservoir-level/

ಡೆಂಗ್ಯೂ ಜ್ವರಕ್ಕೆ ರಾಜ್ಯದಲ್ಲಿ ಮೆಗ್ಗಾನ್ ಆಸ್ಪತ್ರೆ ನರ್ಸ್ ಬಲಿ

https://www.newsics.com/2024/07/24/wife-locked-husband-who-with-his-lover-in-house-at-raichur/

TAGGED:formation of a special police team to investigateMurder of a young woman in a PGsuspected to have been done by her lover
Share This Article
Facebook Twitter Copy Link Print
Previous Article KRS ಅಣೆಕಟ್ಟು ಸಂಪೂರ್ಣ ಭರ್ತಿ; ಕಾವೇರಿ ನದಿ ಪಾತ್ರಗಳಲ್ಲಿ ಪ್ರವಾಹದ ಆತಂಕ
Next Article ಪ್ರಿಯಾಂಕಾ ಚೋಪ್ರಾ ಮಗಳ ಬಗ್ಗೆ ನೆಟ್ಟಿಗರು ಈ ರೀತಿ ಹೇಳಿದ್ಯಾಕೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?