ಡೆಂಗ್ಯೂ ಜ್ವರಕ್ಕೆ ರಾಜ್ಯದಲ್ಲಿ ಮೆಗ್ಗಾನ್ ಆಸ್ಪತ್ರೆ ನರ್ಸ್ ಬಲಿ

newsics. com ಶಿವಮೊಗ್ಗ: ರಾಜ್ಯದಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ನರ್ಸ್ ಒಬ್ಬರು ಬಲಿಯಾಗಿದ್ದಾರೆ. ಭದ್ರಾವತಿ ಮೂಲದ ಹೇಮಾ ಅವರಿಗೆ ಕಳೆದ 25 ದಿನಗಳಿಂದ ಡೆಂಗ್ಯೂ ಬಾಧಿಸಿದೆ. ಆಗಾಗ ಅವರಿಗೆ ಬಿಟ್ಟು ಬಿಟ್ಟು ಜ್ವರ ಬರುತ್ತಿತ್ತು. ಹಲವು ಬಾರಿ ಚಿಕಿತ್ಸೆ ಪಡೆದು ಹೇಮಾ ಗುಣಮುಖರಾಗಿದ್ದರು. ಮಂಗಳವಾರ ಇದ್ದಕ್ಕಿದ್ದಂತೆಯೇ ಜ್ವರ ಹೆಚ್ಚಾಗಿ ಕೋಮಾಗೆ ತೆರಳಿದ್ದ ಹೇಮಾ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಕೊನೆ ಉಸಿರೆಳೆದಿದ್ದಾರೆ. ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ನರ್ಸಿಂಗ್ ಆಫೀಸರ್ ಹೇಮಾ(45) ಅವರು ಮಾರಕ ಡೆಂಗ್ಯೂಗೆ ಬಲಿಯಾದ ದುದೈವಿಯಾಗಿದ್ದಾರೆ